Site icon Vistara News

Big Boss Kannada | ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಭರ್ಜರಿ ರೇನ್‌ ಡಾನ್ಸ್!

Big Boss Kannada

ಬೆಂಗಳೂರು: ‘ಬಿಗ್ ಬಾಸ್-9’ ಸಾಕಷ್ಟು ವಿಶೇಷತೆಗಳೊಂದಿಗೆ ಗಮನ ಸೆಳೆಯುತ್ತಿದ್ದು, ಸ್ಪರ್ಧಿಗಳಿಗೆ ಟಾಸ್ಕ್​ ನಡುವೆಯೂ ಮೊಜು-ಮಸ್ತಿಗೆ ಅವಕಾಶ ಸಿಗುತ್ತಿದೆ. ಇದೀಗ ಬಿಗ್ ಬಾಸ್ (Big Boss Kannada) ಮನೆಯಲ್ಲಿ ಸ್ಪರ್ಧಿಗಳ ರೇನ್‌ ಡಾನ್ಸ್‌ (ಮಳೆಯಾಟ) ವೈರಲ್ ಆಗುತ್ತಿದೆ. ಮಳೆಯಲ್ಲಿ ನಾವು ನೆನೆಯಬೇಕು ಎಂಬ ‘ಬಿಗ್ ಬಾಸ್-9’ ಸ್ಪರ್ಧಿಗಳ ಆಸೆ ಈ ಮೂಲಕ ಈಡೇರಿದೆ. ಹೀಗೆ ಭಾನುವಾರ ಬೆಚ್ಚಿ ಬಿದ್ದಿದ್ದ ಸ್ಪರ್ಧಿಗಳು ಒಂದಷ್ಟು ಕೂಲ್ ಆಗಿದ್ದಾರೆ.

ಮಳೆಯಲ್ಲಿ ಮೈಮರೆತು ಆಟವಾಡಿದ ಸ್ಪರ್ಧಿಗಳ ಪೈಕಿ ಸಾನ್ಯ ಅಯ್ಯರ್ ಹಳದಿ ಸೀರೆ ಉಟ್ಟು ಸಿಕ್ಕಾಪಟ್ಟೆ ಸೆಳೆದರು. ಭಾನುವಾರ ಕಿಚ್ಚನ ಪಂಚಾಯಿತಿ ಸಂದರ್ಭದಲ್ಲಿ ಮಾಡಿದ ತಪ್ಪಿಗೆ ಪಾಠ ಕಲಿತು, ಸೈಲೆಂಟ್ ಆಗಿದ್ದ ಸಾನ್ಯಗೆ ಮಳೆ ಆಟ ತಂಪೆರೆಯಿತು. ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್ ದೂರವಾಗುತ್ತಿದ್ದಾರೆ ಎಂಬ ಮಾತಿನ ಮಧ್ಯೆ ಮಳೆಯಲ್ಲಿ ಬಿಂದಾಸ್ ಸ್ಟೆಪ್ ಹಾಕಿ ಸಾನ್ಯ ಗಮನ ಸೆಳೆದಿದ್ದಾರೆ.

ಮಳೆಯಲ್ಲಿ ಆಟವಾಡಿದ ‘ಬಿಗ್ ಬಾಸ್-9’ ಸ್ಪರ್ಧಿಗಳು.

ಸ್ಪರ್ಧಿಗಳಿಗೆ ಖುಷಿ!
ಬೆಂಗಳೂರಲ್ಲಿ ಗ್ಯಾಪ್ ಕೊಡದೆ ಮಳೆ ಬರುತ್ತಿದ್ದು ನಾವೂ ಮಳೆಯಲ್ಲಿ ನೆನೆಯಬೇಕೆಂಬ ಆಸೆಯನ್ನ ಸ್ಪರ್ಧಿಗಳು ವ್ಯಕ್ತಪಡಿಸಿದ್ದರು. ಆದರೆ ಈವರೆಗೂ ‘ಬಿಗ್ ಬಾಸ್-9’ ಸ್ಪರ್ಧಿಗಳ ಮನವಿಗೆ ಬಿಗ್​ ಬಾಸ್ ಒಪ್ಪಿಗೆ ಸೂಚಿಸಿರಲಿಲ್ಲ. ಕಡೆಗೂ ಸ್ಪರ್ಧಿಗಳ ಮನವಿಗೆ ಗ್ರೀನ್ ಸಿಗ್ನಲ್ ಕೊಟ್ಟು, ಮಳೆಯಲ್ಲಿ ಡಾನ್ಸ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಮಳೆಯಲ್ಲಿ ನೆನೆದು ಎಂಜಾಯ್ ಮಾಡಿದ್ದಾರೆ ‘ಬಿಗ್ ಬಾಸ್-9’ ಸ್ಪರ್ಧಿಗಳು.

ಒಟ್ಟಾರೆ ಮಳೆ ಕಾರಣಕ್ಕೆ ಬಿಗ್ ಬಾಸ್ ಮನೆಯ ಹೊರಗೆ ಜನರು ಪರದಾಡುತ್ತಿದ್ದಾರೆ. ಆದರೆ ಬಿಗ್ ಬಾಸ್ ಮನೆ ಒಳಗೆ ಸ್ಪರ್ಧಿಗಳು ಮಳೆಯನ್ನು ಎಂಜಾಯ್ ಮಾಡಿದ್ದಾರೆ. ಈ ಮೂಲಕ ತಮ್ಮ ಆಸೆ ಪೂರೈಸಿಕೊಂಡಿರುವ ‘ಬಿಗ್ ಬಾಸ್-9’ ಸ್ಪರ್ಧಿಗಳು ಮುಂದಿನ ಟಾಸ್ಕ್​​ಗೆ ಸಜ್ಜಾಗುತ್ತಿದ್ದಾರೆ.

ಇದನ್ನೂ ಓದಿ: Head Bush Story | ಹೆಡ್ ಬುಷ್ ಚಿತ್ರದಲ್ಲಿ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ ಅನಾವರಣ?

Exit mobile version