Site icon Vistara News

Bigg Boss Kannada | ದೀಪಾವಳಿ ಸಂಭ್ರಮಕ್ಕೆ ಸ್ಪರ್ಧಿಗಳಿಂದ ಹಾಡು, ಡಾನ್ಸ್, ಮಸ್ತ್ ಮನರಂಜನೆ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) 33ನೇ ದಿನ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪರ್ಧಿಗಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು. ರೂಪೇಶ್‌ ಶೆಟ್ಟಿ ನಿರೂಪಣೆ ಪ್ರೇಕ್ಷಕರ ಮನ ಗೆದ್ದಿತ್ತು. ಅದೇ ರೀತಿ ಮೂವರು ಸ್ಪರ್ಧಿಗಳು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆದರು.

ಅನುಪಮಾ, ಅಮೂಲ್ಯ ಗೌಡ ಮತ್ತು ವಿನೋದ ಗೊಬ್ಬರಗಾಲ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆಗಿದ್ದಾರೆ. ದೀಪಾವಳಿ ಪ್ರಯುಕ್ತ ದೀಪಿಕಾ ದಾಸ್‌ ಹಾಗೂ ಗೊಂಬೆ ಡ್ಯಾನ್ಸ್‌ ಮಾಡಿ ರಂಜಿಸಿದರೆ, ರೂಪೇಶ್‌ ರಾಜಣ್ಣ ಮಿಮಿಕ್ರಿ ಮಾಡಿದರು. ರಾಕೇಶ್‌ ಅಡಿಗ ಮತ್ತು ದಿವ್ಯಾ ಉರುಡುಗ ರ‍್ಯಾಂಪ್‌ ಸಾಂಗ್‌ ಹಾಡಿದ್ದಾರೆ. ಆರ್ಯವರ್ಧನ್‌ ಗುರೂಜಿ ಮತ್ತು ದಿವ್ಯಾ ಉರುಡುಗ ನಿನ್ನಂಥ ಅಪ್ಪ ಇಲ್ಲ ಹಾಡಿಗೆ ಹೆಜ್ಜೆ ಹಾಕಿದರು. ಸಾನ್ಯ ಅವರು ತಾವೇ ಬರೆದ ಹಾಡನ್ನು ಹಾಡಿದರು. ಅರುಣ್‌ ಸಾಗರ್‌ ಮೈಮ್‌, ಅನುಪಮಾ ಹಾಡನ್ನು ಹೇಳಿದರು. ವಿನೋದ್‌ ಗೊಬ್ಬರಗಾಲ, ಅರುಣ್‌ ಸಾಗರ್‌ ಮತ್ತು ಕಾವ್ಯಶ್ರೀ ಕಾಮಿಡಿ ನಾಟಕ ಮಾಡಿ ರಂಜಿಸಿದರು.

ಇದನ್ನೂ ಓದಿ | Bigg Boss Kannada | ಮನೆಯ ಕನ್‌ಫ್ಯೂಷನ್‌ಗಳಿಗೆ ರೂಪೇಶ್‌ ರಾಜಣ್ಣ ಕಿವಿ ಕಾರಣ ಎಂದ ಪ್ರಶಾಂತ್‌!

ರೂಪೇಶ್‌ ಶೆಟ್ಟಿ ನಿರೂಪಣೆ
ದೀಪಾವಳಿಗೆ ಅಲಂಕಾರಗೊಂಡ ಬಿಗ್‌ ಬಾಸ್‌ ಮನೆ
ರೂಪೇಶ್‌ ರಾಜಣ್ಣ ಮಿಮಿಕ್ರಿ
ಆರ್ಯವರ್ಧನ್‌-ದಿವ್ಯಾ ಉರುಡುಗ ಡ್ಯಾನ್ಸ್‌
ಸಾನ್ಯ ಹಾಡು
ದೀಪಿಕಾ ದಾಸ್‌-ನೇಹಾ ಗೌಡ ನೃತ್ಯ
ರಾಕೇಶ್‌ ಅಡಿಗ ರ‍್ಯಾಂಪ್‌ ಸಾಂಗ್‌
ಅನುಪಮಾ ಹಾಡು
ವಿನೋದ್‌ ಗೊಬ್ಬರಗಾಲ ಸಂಗಡಿಗರಿಂದ ಕಾಮಿಡಿ ಡ್ರಾಮಾ
ಅರುಣ್‌ ಸಾಗರ್‌ ಮೈಮ್‌

ಇದನ್ನೂ ಓದಿ | Bigg Boss Kannada | ಪ್ರ್ಯಾಂಕ್‌ ಮಾಸ್ಟರ್‌ ರಾಕೇಶ್‌ ಅಡಿಗ ರ್‍ಯಾಪ್‌ ಹಾಡಿನ ಹೂರಣ: ವೈರಲ್‌ ಆಯ್ತು ವಿಡಿಯೊ!


Exit mobile version