Site icon Vistara News

BBK SEASON 10: ಈ ವಾರ ಯಾರೆಲ್ಲ ನಾಮಿನೇಟ್‌?

bigg boss Kannada Contestants Who Nominated eleventh Week For Eliminations

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10: ) , ಹನ್ನಂದನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ನಮ್ರತಾ ನಾಮಿನೇಟ್‌ ಮಾಡುವ ವಿಶೇಷ ಅಧಿಕಾರ ಹೊಂದಿದ್ದರು. ಒಟ್ಟು ಎಂಟು ಮಂದಿಗೆ ನಾಮಿನೇಶನ್‌ ಮಾಡುವ ಅಧಿಕಾರ ಇತ್ತು. ಅವಿನಾಶ್ ಶೆಟ್ಟಿ, ಸಂಗೀತಾ ಶೃಂಗೇರಿ, ಮೈಕಲ್ ಅಜಯ್, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್ ಹಾಗೂ ಸಿರಿ ಈ ವಾರ ನಾಮಿನೇಟ್ ಆಗಿದ್ದಾರೆ. ವೈಲ್ಡ್ ಕಾರ್ಡ್‌ ಮೂಲಕ ಎಂಟ್ರಿ ನೀಡಿರುವ ಅವಿನಾಶ್ ಶೆಟ್ಟಿ ಔಟ್‌ ಆಗುವ ಚಾನ್ಸ್‌ ಇದೆ ಎಂದು ವೀಕ್ಷಕರು ಕಮೆಂಟ್‌ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ನಿಯೋಜಿತ ಕುರ್ಚಿಯಲ್ಲಿ ಪ್ರತಿಯೊಂದು ಸದಸ್ಯರು ಕೂಡಬೇಕು. ಎದುರು ನಿಂತಿರುವ ಸದಸ್ಯರಲ್ಲಿ ಯಾರಿಗೆ ಕುರ್ಚಿಯಲ್ಲಿ ಕೂತಿರುವ ಸದಸ್ಯರು ನಾಮಿನೇಟ್ ಆಗಬೇಕು ಅನಿಸುತ್ತದೆಯೋ ಅವರು ಬೋರ್ಡ್ ಎತ್ತಿ ಸೂಚಿಸಬೇಕು. ಆಮೇಲೆ ಮಸಿನೀರನ್ನು ಅವರ ಮೇಲೆ ಸುರಿಯಬೇಕು. ಕೊನೆಗೆ ಅತಿ ಹೆಚ್ಚು ಸದಸ್ಯರಿಂದ ಸೂಚಿತರಾದವರು ನಾಮಿನೇಟ್ ಆಗುತ್ತಾರೆ.

ಯಾರೆಲ್ಲ ನಾಮಿನೇಟ್‌?

ಪ್ರತಿ ಬಾರಿ ನಾಮಿನೇಟ್ ಆಗುತ್ತಿರುವ ಸಂಗೀತಾ, ಈ ಬಾರಿಯೂ ನಾಮಿನೇಟ್ ಆದರು, ಅವರಿಗೆ ಅವರ ಪರಮ ವೈರಿ ವಿನಯ್ ಅವರೇ ಬಕೆಟ್ ತುಂಬಾ ಕಪ್ಪು ನೀರು ತೆಗೆದು ಸುರಿದರು. ಕಾರ್ತಿಕ್ ಅವರನ್ನು ನಾಮಿನೇಟ್ ಮಾಡುವುದಾಗಿ ಮೈಖಲ್ ಹೇಳಿದರು. ಆದರೆ ಅವರು ಕೊಟ್ಟ ಕಾರಣ ಮೈಕಲ್‌ ಹಿಡಿಸಲಿಲ್ಲ. ಬಳಿಕ ಮೈಕಲ್ ಬಂದಾಗ ಕಾರ್ತಿಕ್ ಸಹ ನಾಮಿನೇಟ್ ಮಾಡಿ ಅವರ ಮೈಮೇಲೆ ಬಣ್ಣ ಕಪ್ಪು ನೀರು ಸುರಿದರು.

ಇದನ್ನೂ ಓದಿ: BBK SEASON 10: ಬಿಗ್‌ಬಾಸ್‌ ಮನೆಯಲ್ಲೂ ಬಿಡ್ಡಿಂಗ್‌ ಜೋರು; ಯಾರು, ಯಾವ ತಂಡ?

ಸಂಗೀತಾ ಅವರಿಗೆ ವಿನಯ್‌ ಕಪ್ಪು ನೀರು ತೆಗೆದು ಸುರಿದರು. ಮೈಕಲ್ ಅವರು ಕಾರ್ತೀಕ್‌ ಅವರನ್ನು ನಾಮಿನೇಟ್ ಮಾಡಿದ್ದಾರೆ. ಆದರೆ ಅವರು ಕೊಟ್ಟ ಕಾರಣ ಕಾರ್ತೀಕಗ ಅವರಿಗೆ ಸೂಕ್ತ ಅನಿಸಿಲ್ಲ. ಹಾಗಾಗಿ ಅದೇ ಕಾರಣ ಇಟ್ಟುಕೊಂಡು ಕಾರ್ತೀಕ್ ಕೂಡ ಮೈಕಲ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಸಂಗೀತಾರನ್ನು, ತುಕಾಲಿ, ವಿನಯ್, ನಮ್ರತಾ, ಮೈಖಲ್ ಅವರುಗಳು ನಾಮಿನೇಟ್ ಮಾಡಿದರು. ಡ್ರೋನ್ ಪ್ರತಾಪ್ ಅನ್ನು ವಿನಯ್, ತುಕಾಲಿ, ಮೈಖಲ್ ಅವರು ನಾಮಿನೇಟ್ ಮಾಡಿದರು. ಅಂತಿಮವಾಗಿ ಅವಿ, ಸಂಗೀತಾ, ಮೈಖಲ್, ಪ್ರತಾಪ್, ಸಿರಿ ಅವರುಗಳು ಈ ವಾರ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆದರು. ನಮ್ರತಾಗೆ ವಿಶೇಷ ಅಧಿಕಾರ ಇದ್ದು, ಅದನ್ನು ಬಳಸಿ ಅವರು ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬೇಕಿತ್ತು. ಆ ಅಧಿಕಾರ ಬಳಸಿದ ನಮ್ರತಾ ನೇರವಾಗಿ ವರ್ತೂರು ಸಂತು ಅವರನ್ನು ನಾಮಿನೇಟ್ ಮಾಡಿದರು.

ಕಾರ್ತಿಕ್‌, ತುಕಾಲಿಗೆ ವಿಶೇಷ ಅಧಿಕಾರ

ಸ್ಕೂಲ್‌ ಟಾಸ್ಕ್‌ನಲ್ಲಿ ‘ಮನರಂಜನಾತ್ಮಕ ವಿದ್ಯಾರ್ಥಿ’ ಎಂದೆನಿಸಿಕೊಂಡವರು ತುಕಾಲಿ ಸಂತು. ‘ಕ್ರಿಯಾತ್ಮಕ ಶಿಕ್ಷಕ’ ಅಂತ ಕರೆಯಿಸಿಕೊಂಡವರು ಕಾರ್ತಿಕ್ ಮಹೇಶ್. ಹೀಗಾಗಿ, ಇಬ್ಬರಿಗೂ ವಿಶೇಷ ಸವಲತ್ತು ಲಭಿಸಿತ್ತು. ಬಿಗ್ ಬಾಸ್‌ ಬಿಗ್ ನ್ಯೂಸ್‌’ ಚಟುವಟಿಕೆಯಲ್ಲಿ ಕಳಪೆ ಪ್ರದರ್ಶನ ತೋರಿದ 3 ಸದಸ್ಯರನ್ನು ಹೊರಗಿಡಬೇಕಿತ್ತು. ಅದರಂತೆ ತುಕಾಲಿ ಸಂತು ಅವರು ಸಂಗೀತಾ ಅವರನ್ನು ನಾಮಿನೇಷನ್‌ನಿಂದ ಹೊರಗಿಟ್ಟರು. ವರ್ತೂರು ಸಂತೋಷ್ ಅವರನ್ನ ಕಾರ್ತಿಕ್ ನಾಮಿನೇಷನ್ ಅಧಿಕಾರದಿಂದ ಹೊರಗೆ ಇಟ್ಟರು. ಬಳಿಕ ಇಬ್ಬರೂ ಸೇರಿ ಅವಿನಾಶ್ ಶೆಟ್ಟಿ ಅವರನ್ನು ಹೊರಗಿಟ್ಟರು. ಬಿಗ್ ಬಾಸ್‌ ಬಿಗ್ ನ್ಯೂಸ್‌’ ಚಟುವಟಿಕೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಮ್ರತಾ ಅವರಿಗೆ ಕಾರ್ತಿಕ್‌, ತುಕಾಲಿ ಸಂತು ವಿಶೇಷ ಅಧಿಕಾರ ಕೊಟ್ಟರು.

ಇದನ್ನೂ ಓದಿ: BBK SEASON 10: ಪರಸ್ಪರ ಮಸಿ ಬಳಿದುಕೊಂಡ ಸ್ಪರ್ಧಿಗಳು; ಬಿಗ್‌ಬಾಸ್‌ ಮನೆಯಲ್ಲಿ ಕಾವೇರಿದ ವಾತಾವರಣ

‘’ಇಲ್ಲಿ ಎಲ್ಲಾ ಪರ್ಸನಲ್. ಟಾಸ್ಕ್‌ನಲ್ಲಿ ಎಷ್ಟೇ ಚೆನ್ನಾಗಿ ಮಾಡಿದರೂ.. ಇವರಿಗೆ ಯಾರು ಬೇಕೋ, ಅವರಿಗೇ ಕೊಡೋದು. ಎಲ್ಲರಿಗಿಂತ ನಮ್ರತಾ ಸೇಫ್ ಆಗಿ ಆಡ್ತಿದ್ದಾರೆ ಇಲ್ಲಿ. ನಮ್ರತಾಗೆ ಯಾರಾದರೂ ಏನಾದರೂ ಬೈದರೆ ವಿನಯ್, ತುಕಾಲಿ ಸಂತು, ಮೈಕಲ್‌.. ಬಂದುಬಿಡ್ತಾರೆ. ನನ್ನ ಪ್ರಕಾರ ಟಾಸ್ಕ್‌ನಲ್ಲಿ ಚೆನ್ನಾಗಿ ಮಾಡಿದ್ದು ತನಿಷಾ’’ ಎಂದರು ಸಂಗೀತಾ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version