Site icon Vistara News

Bigg Boss Kannada | ʻನೀವು ಗುದ್ದಾಡೋದಾದ್ರೆ ಆನೆ ಜತೆ ಗುದ್ದಾಡಿʼ: ರೂಪೇಶ್‌ ರಾಜಣ್ಣ-ದೀಪಿಕಾ ವಾರ್‌!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ನ 25ನೇ (Bigg Boss Kannada) ದಿನ ‌ʻಗುಂಪಿಗೆ ಸೇರದ ಪದʼ ಟಾಸ್ಕ್‌ ವಿಚಾರಕ್ಕೆ ಸಂಬಂಧಪಟ್ಟಂತೆ ಕ್ಯಾಪ್ಟನ್‌ ದೀಪಿಕಾ ದಾಸ್‌ ಹಾಗೂ ಕಾಮನಬಿಲ್ಲು ತಂಡಗಳ ನಡುವೆ ವಾದ ಪ್ರತಿವಾದಗಳು ನಡೆದಿದೆ.26ನೇ ದಿನವೂ ಈ ವಾದ ಮುಂದುವರಿದಿದ್ದು, ದೀಪಿಕಾ ಮತ್ತು ರೂಪೇಶ್‌ ರಾಜಣ್ಣ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ಟಾಸ್ಕ್‌ನಲ್ಲಿ ಪ್ರಶಾಂತ್‌ ಸಂಬರಗಿ ಟೀಮ್‌ ʻಧಮ್‌ ಪವರ್‌ʼ ವಿಜೇತರಾಗಿ ಹೊರಹೊಮ್ಮಿತು. ರೂಪೇಶ್‌ ರಾಜಣ್ಣ ಅವರ ʻಕಾಮನ ಬಿಲ್ಲುʼ ತಂಡ ಸೋಲನುಭವಿಸಿತು. ಕಾಮನ ಬಿಲ್ಲು ತಂಡದ ಕ್ಯಾಪ್ಟನ್‌ ರೂಪೇಶ್‌ ರಾಜಣ್ಣ ತಮ್ಮ ಟೀಮ್‌ಗೆ ಅನ್ಯಾಯ ಆಗಿರುವುದರ ಬಗ್ಗೆ ಧ್ವನಿ ಎತ್ತಿದ್ದು ದೀಪಿಕಾ ಜತೆ ಮಾತನಾಡಿ ʻʻನೀವು ಈ ಮನೆಯ ಕ್ಯಾಪ್ಟನ್‌ ನಾನು ಒಂದು ಸಮಸ್ಯೆಯನ್ನು ಹೇಳಲು ಬರುತ್ತಿದ್ದೇನೆ. ನೀವು ಏನು ಹೇಳಿದಿರಿ. ನಿಮ್ಮದು ಏನು ಕೆಲಸ ಇದೆಯೋ ಅದನ್ನು ಮಾಡ್ಕೊಳ್ಳಿ ಎಂದಿರಿ. ನಮಗೆ ಗೊತ್ತು ಏನು ಮಾಡಬೇಕು ಅಂದಿರಿ. ಫಸ್ಟ್‌ ನೀವು ರಾಜನಾಗಿ ಬಹೇವ್‌ ಮಾಡಿʼʼ ಎಂದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ದೀಪಿಕಾ ದಾಸ್‌ ʻʻನಿಮ್ಮ ಟೀಮ್‌ ನಿಮಗೆ ಏನಾದರೂ ಹೇಳುವಾಗ ನೀವು ಕೇಳಿಸಬೇಕಾಗುತ್ತೆʼʼಎಂದಿದ್ದಾರೆ. ಈ ಬಗ್ಗೆ ರೂಪೇಶ್‌ ಪ್ರತಿಕ್ರಿಯೆ ನೀಡಿ ʻʻಅದು ನಮಗೆ ಬಿಟ್ಟಿದ್ದು, ಟ್ರ್ಯಾಕ್‌ ಚೆಂಚ್‌ ಮಾಡಬೇಡಿʼʼಎಂದು ಹೇಳಿದರು.

ಇದನ್ನೂ ಓದಿ | Bigg Boss Kannada | ʻವಾರದ ಕತೆ ಕಿಚ್ಚನ ಜತೆʼ ಎಪಿಸೋಡ್‌ಗೆ ಕಿಚ್ಚ ಗೈರು?

ದೀಪಿಕಾ ಮಾತನಾಡಿ ʻʻನೀವು ಗುದ್ದಾಡೋದಾದ್ರೆ ಆನೆ ಜತೆ ಗುದ್ದಾಡಿ, ನನ್ನತ್ರ ಬರಲೇ ಬೇಡಿ. ನಿಮ್ಮ ಮಾತನ್ನು ಅಲ್ಲಿಯೇ ಕ್ಲೀಯರ್‌ ಕಟ್‌ ಆಗಿ ಮುಗಿಸಿ. ನನಗೆ ನಿಮ್ಮಷ್ಟು ಟೈಮ್‌ ಇಲ್ಲ ಸರ್‌ʼʼಎಂದು ತಿರುಗೇಟು ನೀಡಿದ್ದಾರೆ. ರೂಪೇಶ್‌ ಗರಂ ಆಗಿ ʻʻಇನ್ಯಾಕೆ ನಿಮ್ಮನ್ನು ಕ್ಯಾಪ್ಟನ್‌ ಆಗಿ ನಿಲ್ಲಿಸಿದ್ದು?, ಬೇಡ ಬಿಡಿʼʼ ಎಂದಿದ್ದಾರೆ.

ಗುಂಪಿಗೆ ಸೇರದ ಪದ ಆಟದಲ್ಲಿ ದೀಪಿಕಾ ದಾಸ್‌ ಫೇವರಿಸಮ್‌ ಆಗಿ ಆಟ ಆಡುತ್ತಿದ್ದಾರೆ ಎಂದು ರೂಪೇಶ್‌ ರಾಜಣ್ಣ ಆರೋಪಿಸಿದ್ದರು. ಹಾಗೇ ಆಡುವಾಗ ಕೋಪದಲ್ಲಿ ಮಧ್ಯದಲ್ಲೇ ಎದ್ದು ಹೋಗಿದ್ದರು.

ಇದನ್ನೂ ಓದಿ | Bigg Boss Kannada | ಕ್ಯಾಪ್ಟನ್‌ ದೀಪಿಕಾ ದಾಸ್‌ ವಿರುದ್ಧ ತಿರುಗಿ ಬಿದ್ದ ಕಾಮನ ಬಿಲ್ಲು ತಂಡ: ಇಲ್ಲಿವೆ ಫೋಟೊಗಳು!

Exit mobile version