Site icon Vistara News

Bigg Boss Kannada | ವೀಕೆಂಡ್‌ ಪಂಚಾಯಿತಿಯಲ್ಲಿ ದೀಪಿಕಾ ಕ್ಯಾಪ್ಟನ್ಸಿ ರಿವ್ಯೂ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರರಲ್ಲಿ (Bigg Boss Kannada ) ಕಿಚ್ಚ ಸುದೀಪ್‌ ದೀಪಿಕಾ ದಾಸ್‌ ಕ್ಯಾಪ್ಟನ್‌ ಆದಾಗ ನಿಭಾಯಿಸಿರುವ ಟಾಸ್ಕ್‌ ಬಗ್ಗೆ ಮಾತನಾಡಿದರು. ದೀಪಿಕಾ ದಾಸ್‌ ಕ್ಯಾಪ್ಟನ್ಸಿ ಅಲ್ಲಿ ರೂಪೇಶ್‌ ರಾಜಣ್ಣ ತಂಡ ದೀಪಿಕಾ ದಾಸ್‌ ಮೇಲೆ ಅಸಮಾಧಾನ ಹೊರ ಹಾಕಿದ್ದರು. ಕಿಚ್ಚ ಸುದೀಪ್‌ ಅವರು ದೀಪಿಕಾ ದಾಸ್‌ ಜತೆ ಚರ್ಚಿಸಿದ್ದಾರೆ.

ಕಿಚ್ಚ ಸುದೀಪ್‌ ಮೊದಲಿಗೆ ಮಾತ ಶುರು ಮಾಡಿ ʻʻಗುಂಪಿಗೆ ಸೇರದ ಪದ ಟಾಸ್ಕ್‌ನಲ್ಲಿ ಏನಾಯ್ತು. ಬಿಗ್‌ ಬಾಸ್‌ ಆಗಲೇ ಎರಡು ಡೈಮೆನ್ಷನ್‌ ಇದ್ದರೆ ಆ ಪ್ರಶ್ನೆಯನ್ನು ಬೀಡಿ ಎಂದರೂ, ಮತ್ತೆ ನೀವು ಎಡವಿದ್ದೇಕೆ, ಹಾಗೇ ಒಂದು ತಂಡಕ್ಕೆ ಫೇವರಿಸಮ್‌ ಮಾಡಿದ್ರಿ ಎಂದು ಅನ್ನಿಸಿತಾʼʼಎಂದು ಪ್ರಶ್ನಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ದೀಪಿಕಾ ದಾಸ್‌ ಟಾಸ್ಕ್‌ ಆಡುವಾಗ ಮೊದಲು ನಿಯಮಗಳನ್ನು ಸ್ಪರ್ಧಿಗಳು ಸರಿಯಾಗಿ ಕೇಳಿಸಿಕೊಳ್ಳುವುದಿಲ್ಲ. ಆಟ ಆಡುವಾಗ ಎಲ್ಲರೂ ಕನ್‌ಫ್ಯೂಸ್‌ ಆಗಿ ಜಗಳ ಮಾಡುತ್ತಿದ್ದರು. ಆ ಕ್ಷಣಕ್ಕೆ ನನಗೆ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಆಯ್ತು. ಮುಂದೆ ಇದು ನಿಭಾಯಿಸಲು ಸಾಧ್ಯವೇ ಇಲ್ಲ ಎನ್ನುವಾಗ ನಾನು ನನ್ನ ನಿರ್ಧಾರ ತೆಗೆದುಕೊಂಡೆ. ನಾನು ಯಾವುದೇ ತಂಡದ ಪರವಾಗಿರಲಿಲ್ಲ. ಎರಡೂ ತಂಡಕ್ಕೆ ಸಮಾನ ಅಂಕಗಳನ್ನು ನೀಡುತ್ತಿದ್ದೆ ಎಂದರು.

ಇದನ್ನೂ ಓದಿ | Bigg Boss Kannada | ಕಿಚ್ಚನಿಂದ ಬಂತು ಒಂದಿಷ್ಟು ಸಂದೇಶ, ಸಂತೋಷ: ಹಿಂದಿನ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ?

ಕಿಚ್ಚ ಸುದೀಪ್‌ ಈ ಬಗ್ಗೆ ಮಾತನಾಡಿ ʻʻನಮಗೆ ಗಮನಿಸಿದಾಗ ನಿಮ್ಮ ಆಟದಲ್ಲಿ ಒಂದು ತಂಡಕ್ಕೆ ಸಪೋರ್ಟ್‌ ಮಾಡಿದ್ರಿ ಎಂದು ಅನ್ನಿಸಲಿಲ್ಲಾ ಚೆನ್ನಾಗೇ ನಿಭಾಯಿಸಿದ್ದೀರಿʼʼಎಂದು ಹೇಳಿದರು. ಕೊನೆಯಲ್ಲಿ ದೀಪಿಕಾ ದಾಸ್‌ ಮನೆಯವರಲ್ಲಿ ʻನನ್ನಿಂದ ಏನಾದರೂ ತಪ್ಪಿದ್ದರೆ ಕ್ಷಮೆ ಕೇಳುತ್ತೇನೆʼ ಎಂದು ಹೇಳಿದರು.

ಈ ಹಿಂದೆ ಬಿಗ್‌ ಬಾಸ್‌ ಗುಂಪಿಗೆ ಸೇರದ ಪದ ಟಾಸ್ಕ್‌ ನೀಡಿತ್ತು. ಕಾಮನಬಿಲ್ಲು ತಂಡದ ಕ್ಯಾಪ್ಟನ್‌ ರೂಪೇಶ್‌ ರಾಜಣ್ಣ ಕೋಪಗೊಂಡಿದ್ದು ʻʻದೀಪಿಕಾ ಅವರು ಹೆಚ್ಚು ಕಮ್ಮಿ 90% ಪ್ರಶಾಂತ್‌ ಟೀಮ್‌ ಅವರಿಗೆ ಫೇವರ್‌ ಆಗಿ ಮಾತನಾಡುತ್ತಿದ್ದಾರೆ ಹೊರತು, ಕ್ಯಾಪ್ಟನ್‌ ದೀಪಿಕಾ ಕೇಳಿಸಿಕೊಳ್ಳಲು ತಯಾರಿಲ್ಲ. ನಮ್ಮವರು ಅಷ್ಟು ಚೆನ್ನಾಗಿ ಆಡಿದ್ದಾರೆ. ಆದರೆ ಉತ್ತರವನ್ನು ತೆಗೆದುಕೊಳ್ಳಲು ದೀಪಿಕಾ ತಯಾರಿಲ್ಲʼʼಎಂದಿದ್ದರು. ʻಹಾಗೇ ಮಲ್ಟಿಪಲ್‌ ಡೈಮೆನ್ಷನ್‌ ಬಂದರೆ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದೀರಿ ಆದರೆ ಅವರಿಗೆ ಯಾಕೆ ಬೇರೆ ತರಹ ನೋಡಿಲ್ಲ, ನಮಗೆ ಪರಿಶೀಲಿಸಿದಂತೆ ಅವರಿಗೆ ಯಾಕೆ ಸರಿಯಾಗಿ ಗಮನಿಸಿಲ್ಲʼʼ ಎಂದು ದಿವ್ಯಾ ಉರುಡುಗ ಅವರು ದೀಪಿಕಾ ಜತೆ ವಾದ ಮಾಡಿದ್ದರು. ಇದೀಗ ಕಿಚ್ಚನ ಮುಂದೆ ದೀಪಿಕಾ ದಾಸ್‌ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ | Bigg Boss Kannada | ಅನುಪಮಾ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌: ಈ ವಾರದ ‘ಕಳಪೆ’ ಸಾನ್ಯ, ‘ಅತ್ಯುತ್ತಮ’ ಯಾರು?

Exit mobile version