Site icon Vistara News

Bigg Boss Kannada | ಗುಂಪಿಗೆ ಸೇರದ ಪದ, ತಂಡಗಳ ನಡುವೆ ವಾದ ಪ್ರತಿವಾದ

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ನ 25ನೇ (Bigg Boss Kannada) ದಿನ ಗುಂಪಿಗೆ ಸೇರದ ಪದ ಟಾಸ್ಕ್‌ ವಿಚಾರಕ್ಕೆ ಸಂಬಂಧಪಟ್ಟಂತೆ ಕ್ಯಾಪ್ಟನ್‌ ದೀಪಿಕಾ ದಾಸ್‌ ಹಾಗೂ ಕಾಮನಬಿಲ್ಲು ತಂಡಗಳ ನಡುವೆ ವಾದ ಪ್ರತಿವಾದಗಳು ನಡೆದಿದೆ.ಈ ಟಾಸ್ಕ್‌ನಲ್ಲಿ ಪ್ರಶಾಂತ್‌ ಸಂಬರಗಿ ಟೀಮ್‌ ʻಧಮ್‌ ಪವರ್‌ʼ ವಿಜೇತರಾಗಿ ಹೊರಹೊಮ್ಮಿತು. ರೂಪೇಶ್‌ ರಾಜಣ್ಣ ಅವರ ʻಕಾಮನ ಬಿಲ್ಲುʼ ತಂಡ ಸೋಲನುಭವಿಸಿತು.

ಮೊದಲಿಗೆ ತಂಡದಿಂದ ರೂಪೇಶ್‌ ಶೆಟ್ಟಿ ಧ್ವನಿ ಎತ್ತಿದ್ದು ದೀಪಿಕಾ ದಾಸ್‌ಗೆ ʻʻಆಟದಲ್ಲಿ ಎರಡು ಡೈಮೆನ್ಷನ್‌ ಬರೋದು ತಪ್ಪು ಎಂದು ಮೊದಲು ಹೇಳಿದ್ದೀರಿ, ಇನ್ನೊಮ್ಮೆ ಡೈಮೆನ್ಷನ್‌ ಬಂದರೆ ಸರಿ ಎಂದು ಹೇಳಿದ್ದೀರಿ. ನಿಮಗೇ ಆಟದಲ್ಲಿ ಗೊಂದಲಗಳಿತ್ತುʼʼ ಎಂದರು. ದೀಪಿಕಾ ಮಾತನಾಡಿ ʻʻನಿಮ್ಮ ಡೈಮೆನ್ಷನ್‌ ಇಂದು ಏನಾದರೂ ಡಿಸಿಷನ್‌ ತಗೋಬೋದು ಎಂದು ಹೇಳಿದ್ದೇನಾ?ʼʼ ಎಂದು ಕೇಳಿದರು. ರೂಪೇಶ್‌ ಮಾತನಾಡಿ ʻʻಎರಡು ಡೈಮೆನ್ಷನ್‌ ಇದ್ದಾಗ ಇನ್ನೊಬ್ಬರ ಸಹಾಯ ಕೇಳುವುದರಲ್ಲಿ ತಪ್ಪೇನಿದೆ?ʼʼ ಎಂದರು. ದೀಪಿಕಾ ಮಾತನಾಡಿ ʻʻನಾನು ತೆಗೊಂಡ ಮೇಲೆ ನಿರ್ಧಾರ ನನಗೆ ಬಿಟ್ಟಿದ್ದುʼʼ ಎಂದು ಹೇಳಿದರು. ನಂತರ ಮಾತನಾಡಿ ʻ ಮೂರು, ನಾಲ್ಕು ಡೈಮೆನ್ಷನ್‌ ಬಂದರೆ ಪ್ರಶ್ನೆಯೇ ತಪ್ಪಾಗುತ್ತದೆʼʼಎಂದರು.

ಇದನ್ನೂ ಓದಿ | Bigg Boss Kannada | ಪ್ರಶಾಂತ್‌-ಸಾನ್ಯ ತರ್ಲೆ: ರೂಪೇಶ್ ರಾಜಣ್ಣ ಗಿರಿಗಿಟ್ಲೆ!

ಇಡೀ ಕಾಮನಬಿಲ್ಲು ತಂಡ ನಂತರ ತಮಗೆ ಅನ್ಯಾಯ ವಾಗಿರುವುದರ ಬಗ್ಗೆ ದೀಪಿಕಾ ದಾಸ್‌ ಮುಂದೆ ಕೇಳಲು ಬಂದಿದ್ದಾರೆ. ಆದರೆ ತಂಡ ಹೇಳುವಾಗ ದೀಪಿಕಾ ದಾಸ್‌ ಮುಗಳ್ ನಕ್ಕಿದ್ದಾರೆ. ದಿವ್ಯಾ ಉರುಡುಗ ಈ ಬಗ್ಗೆ ಕೋಪವಾಗಿದ್ದು ʻʻನೀವು ಹೇಳಿದಾಗ ನಾವು ಸರಿಯಾಗಿ ಕೇಳುವಾಗ ನೀವು ಕೂಡ ನಮ್ಮ ಮಾತು ಕೇಳಿಸಿಕೊಳ್ಳಬೇಕಾಗುತ್ತದೆ. ನಾವು ಹೇಳು ಹೇಳುವಾಗ ನಕ್ಕಿದ್ದರೆ ಹೇಗೆ?ʼʼ ಎಂದಿದ್ದಾರೆ. ದಿವ್ಯಾ ನಂತರ ಮಾತನಾಡಿ ʻʻಸೀರಿಯಲ್‌ ಆರ್ಟಿಸ್ಟ್‌ ಬಗ್ಗೆ ನಾವು ಕೇಳಿದ ಪ್ರಶ್ನೆ ನಿಮಗೆ ಸಿಲ್ಲಿ ಅನ್ನಿಸಿತಾ? ಎಂದು ವ್ಯಂಗ್ಯವಾಗಿ ದಿವ್ಯಾ ಪ್ರಶ್ನೆ ಕೇಳಿದ್ದಾರೆ. ಪ್ರತಿಕ್ರಿಯೆ ನೀಡಿದ ದೀಪಿಕಾ ʻಆ ಪಾಯಿಂಟ್‌ ನನಗೆ ಗೊತ್ತಿಲ್ಲ ಗೊತ್ತಿರುವುದು ಮಾತ್ರ ನಾನು ತೆಗೆದುಕೊಳ್ಳುವುದು. ನನ್ನ ಜ್ಞಾನಕ್ಕೆ ಗೊತ್ತಿರುವುದನ್ನು ನಾನು ಪಾಸ್‌ ಮಾಡಿದ್ದೇನೆʼʼಎಂದರು.

ಅಮೂಲ್ಯ ಮಾತನಾಡಿʻʻಧಮ್‌ ಪವರ್‌ ತಂಡವೇ ಮೈನಸ್‌ 5 ಅಂಕ ಕೊಡಿ ಎಂದಾಗ ನೀವು ನಿಮ್ಮ ಪಾಯಿಂಟ್ಗೆ ಇನ್ನೊಂದು ಡೈಮೆನ್ಷನ್‌ ಸಿಕ್ಕಿದೆ. ಅದನ್ನು ಒಪ್ಪುತ್ತೇನೆ ಎಂದಿರಿ. ನಮ್ಮ ಪ್ರಶ್ನೆ ಏನಂದರೆ ನಮ್ಮ ಪ್ರಶ್ನೆಗೆ ಇನ್ನೊಂದು ಡೈಮೆನ್ಷನ್‌ ಇದ್ದರೂ ಕೂಡ ಯಾಕೆ ಒಪ್ಪಿಲ್ಲ? ಎಂದಿದ್ದಾರೆ. ದೀಪಿಕಾ ಉತ್ತರ ನೀಡಿ ʻʻಡೈಮೆನ್ಷನ್‌ ಅವರು ಒಪ್ಪಿಲ್ಲ. ನಾನು ನನ್ನ ಪಾಯಿಂಟ್‌ ಅನ್ನು ಹೇಳಿದ್ದು. ನೀವು ಅವರು ಏನು ಹೇಳುತ್ತಿದ್ದಾರೆ, ನನ್ನ ತಲೆಲಿ ಏನು ಓಡ್ತಾ ಇತ್ತು, ಅಥವಾ ನಾನು ಏನು ಕೇಳಿ ತಿಳಿದುಕೊಳ್ಳುತ್ತೇನೆ ಅದರ ಮೇಲೆ ಮಾತ್ರ ನಿರ್ಧಾರ ಹೋಗುತ್ತಿತ್ತು. ನೀವು ಮಾಡ್ತಾ ಇದ್ದ ಚರ್ಚೆಯಲ್ಲಿ ನಿಮ್ಮಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವ ಯಾವ ನಿರ್ಧಾರಗಳು ಇರಲಿಲ್ಲʼʼ ಎಂದರು.

ರೂಪೇಶ್‌ ಮಾತನಾಡಿ ʻʻಆದರೆ ಆಗಾಗ ನಿಮ್ಮ (ದೀಪಿಕಾ) ಸ್ಟೇಟ್‌ಮೆಂಟ್‌ಗಳನ್ನು ನೀವು ಚೇಂಚ್‌ ಮಾಡುತ್ತಾ ಇದ್ದೀರಿ. ನನಗೆ ಯಾವುದು ಅಗತ್ಯ ಇಲ್ಲ ಎನ್ನುವ ರೀತಿ ಇತ್ತುʼʼ ಎಂದು ರೂಪೇಶ್‌ ಹೇಳಿದರು. ದೀಪಿಕಾ ಮಾತನಾಡಿ ʻʻಸಲಹೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ತೀರ್ಮಾನ ತೆಗೆದುಕೊಳ್ಳುವುದು ನನ್ನದು ಇರುತ್ತದೆ ಎಂದು ನಾನು ಹೇಳಿದ್ದೆʼʼ. ಎಂದರು. ʼʼಅದೇ ರೀತಿ ನೀವು ನಗುವುದು ಏನಿತ್ತು?ʼʼ ಎಂದು ಕೇಳಿದ್ದಾರೆ ರೂಪೇಶ್‌. ದೀಪಿಕಾ ಪ್ರತಿಕ್ರಿಯೆ ನೀಡಿ ʻʻಅಳುವುದು, ನಗುವುದು ಅದು ನನಗೆ ಬಿಟ್ಟಿದ್ದುʼʼ ಎಂದಿದ್ದಾರೆ. ʻʻನಾವು ಅಲ್ಲೇ ಇದ್ದಾಗ ನಮ್ಮಲ್ಲಿ ನೀವು ಡೌಟ್ಸ್‌ ಕೇಳಬಹುದಿತ್ತು ಎಂದುʼʼ ದಿವ್ಯಾ ಹೇಳಿದ್ದಾರೆ. ʻʻನನಗೆ ಇಲ್ಲಿ ಯಾರಿಗೂ ಜಸ್ಟಿಫಿಕೇಶನ್‌ ಕೊಡುವ ಅಗತ್ಯವಿಲ್ಲ, ಅವಶ್ಯಕತೆನೂ ಇಲ್ಲಾʼʼ ಎಂದು ದೀಪಿಕಾ ಖಡಕ್‌ ಆಗಿ ಹೇಳಿದರು.

ಇದನ್ನೂ ಓದಿ | Bigg Boss Kannada | ಕ್ಯಾಪ್ಟನ್‌ ದೀಪಿಕಾ ದಾಸ್‌ ಫೇವರಿಸಮ್‌ ಆಟ ಆಡ್ತಿದ್ದಾರೆ: ರೂಪೇಶ್‌ ರಾಜಣ್ಣ ಕೆಂಡಾಮಂಡಲ!

Exit mobile version