Site icon Vistara News

Bigg Boss Kannada | ದೀಪಿಕಾ ದಾಸ್‌ ಔಟ್‌: ಮೂರನೇ ರನ್ನರ್ ಅಪ್!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಗ್ರ್ಯಾಂಡ್‌ ಫಿನಾಲೆ ನಡೆಯುತ್ತಿದೆ. ಇದೀಗ ರೂಪೇಶ್‌ ರಾಜಣ್ಣ ಹೊರ ಬರುತ್ತಿದ್ದಂತೆ ದೊಡ್ಮನೆಯಿಂದ ದೀಪಿಕಾ ದಾಸ್ ಔಟ್ ಆಗಿದ್ದಾರೆ. ಮತ್ತೆ ಎರಡನೇ ಬಾರಿಯೂ ನಟಿಗೆ ಅದೃಷ್ಟ ಕೈ ಕೊಟ್ಟಿದೆ.

ಜೀ ಕನ್ನಡದ ‘ನಾಗಿಣಿ’ ಧಾರಾವಾಹಿ ಮೂಲಕ ಮನೆಮಾತಾಗಿದ್ದರು ದೀಪಿಕಾ ದಾಸ್‌. ಬಿಗ್‌ ಬಾಸ್‌ನಲ್ಲಿ ಶೈನ್‌ ಶೆಟ್ಟಿ ಹಾಗೂ ದೀಪಿಕಾ ದಾಸ್‌ ನಡುವಿನ ಫ್ರೆಂಡ್‌ಶಿಪ್‌ ಹೈಲೈಟ್‌ ಆಗಿತ್ತು. ಕಿರುತೆರೆ ಮಾತ್ರವಲ್ಲದೆ ಕೆಲವು ಸಿನಿಮಾಗಳಲ್ಲೂ ದೀಪಿಕಾ ದಾಸ್ ನಟಿಸುತ್ತಿದ್ದಾರೆ. ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ 13 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ. ಆಗಾಗ ಪೋಟೊಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸುದ್ದಿಯಲ್ಲಿರುತ್ತಾರೆ. ಸದ್ಯ ಕಿರುತೆರೆ ಮತ್ತು ಬೆಳ್ಳಿ ತೆರೆಯಿಂದ ದೂರ ಇರುವ ದೀಪಿಕಾ ದಾಸ್ ತಮ್ಮದೇ ಹೆಸರಿನ ಬ್ರ್ಯಾಂಡ್‌ವೊಂದನ್ನು ಆರಂಭಿಸಿ ವಸ್ತ್ರ ವಿನ್ಯಾಸ ಮಾಡುತ್ತಿದ್ದಾರೆ. 

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಗೆಲ್ತಾರಾ ರೂಪೇಶ್‌ ಶೆಟ್ಟಿ? ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡ್‌!

ಬಿಗ್ ಬಾಸ್ ಸೀಸನ್ 7ರಲ್ಲಿ ದೀಪಿಕಾ ದಾಸ್ ಇದ್ದರು. ಫಿನಾಲೆಯ ಸ್ಪರ್ಧಿಯಾಗಿದ್ದರು. ಕಳೆದ ಸೀಸನ್‌ನಲ್ಲೂ ಗೆಲುವು ಕಾಣದ ಬೆನ್ನಲ್ಲೇ ಬಿಗ್ ಬಾಸ್ ಸೀಸನ್ 9ಕ್ಕೂ ಕಾಲಿಟ್ಟಿದ್ದರು. ಈಗ ಬಿಗ್ ಬಾಸ್ ಮನೆಯಿಂದ ಮೂರನೇ ರನ್ನರ್ ಅಪ್ ಆಗಿದ್ದಾರೆ.

ಇದನ್ನೂ ಓದಿ | Bigg Boss Kannada | ಮನೆಯಿಂದ ಹೊರನಡೆದ ರೂಪೇಶ್‌ ರಾಜಣ್ಣ

Exit mobile version