ಬೆಂಗಳೂರು: ಬಿಗ್ ಬಾಸ್ ಸೀಸನ್ 27ನೇ (Bigg Boss Kannada) ದಿನ ಒಟ್ಟು ಈ ವಾರದ ಕೊನೆಯ ಟಾಸ್ಕ್‌ನಲ್ಲಿ ಧಮ್ ಪವರ್ ತಂಡ ಗೆಲುವು ಸಾಧಿಸಿದೆ. ತಂಡ ತಮ್ಮ ಗೆಲುವನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ಗೆ ಅರ್ಪಿಸಿದ್ದಾರೆ. ಸೋಲುಂಡ ಕಾಮನ ಬಿಲ್ಲು ತಂಡದಲ್ಲಿ ವೈಮನಸ್ಸು ಉಂಟಾಗಿದೆ.
ಈ ವಾರ ತಂಡಗಳಿಗೆ ಏಳು ಸರಣಿ ಟಾಸ್ಕ್‌ಗಳ ಪೈಕಿ ಆರು ಟಾಸ್ಕ್‌ಗಳನ್ನು ಸದಸ್ಯರು ಈಗಾಗಲೇ ಆಡಿದ್ದಾರೆ. ಧಮ್ ಪವರ್ ತಂಡ ಒಟ್ಟು ನಾಲ್ಕು ಟಾಸ್ಕ್‌ಗಳಲ್ಲಿ ಜಯ ಸಾಧಿಸಿದರೆ, ಕಾಮನಬಿಲ್ಲು ತಂಡ ಮೂರು ಟಾಸ್ಕ್‌ಗಳಲ್ಲಿ ಜಯ ಸಾಧಿಸಿದೆ. ಇದೀಗ ಅಂತಿಮ ನಿರ್ಣಾಯಕ ಟಾಸ್ಕ್ ಬಿಗ್ ಬಾಸ್ ನೀಡಿದೆ. ಅದುವೇ ʻಒಗ್ಗಟ್ಟಿನಲ್ಲಿ ಹೆಸರಿದೆʼ. ಇದರ ಅನುಸಾರ ಗಾರ್ಡನ್ ಏರಿಯಾದಲ್ಲಿ ಪ್ರತಿ ತಂಡಕ್ಕೆ 5 ತೊಟ್ಟಿಲು ಮಾದರಿಯ ಹಲಗೆಗೆ ಹಗ್ಗಗಳನ್ನು ಕಟ್ಟಿಡಲಾಗಿದೆ. ಆ ಹಗ್ಗಗಳ ಸಹಾಯದಿಂದ ಹಲಗೆಗಳನ್ನು ಸಂಭಾಳಿಸುತ್ತಾ ತಮ್ಮ ತಂಡದ ಹೆಸರಿರುವ ಪಜಲ್ ತುಂಡುಗಳನ್ನು ತೆಗೆದುಕೊಂಡು ಹೋಗಿ ಹಲಗೆಗಳ ಮೇಲೆ ಜೋಡಿಸಬೇಕು. ಟಾಸ್ಕ್‌ವೇಳೆ ಕಾಮನಬಿಲ್ಲು ತಂಡದಲ್ಲಿ ಕೂಗಾಟ ಜಾಸ್ತಿಯಿತ್ತು. ಈ ಟಾಸ್ಕ್‌ನಲ್ಲಿ ಧಮ್ ಪವರ್ ವಿಜೇತರಾಗಿ ಹೊರಹೊಮ್ಮಿತು.
ಇದನ್ನೂ ಓದಿ | Bigg Boss Kannada | ಆಟ ಆಡುತ್ತಲೇ ಸ್ಪರ್ಧಿಗಳಿಗೆ ಜಾಗರಣೆ ಖಾತ್ರಿ ಆಯ್ತು: ಇಲ್ಲಿವೆ ಫೋಟೊ!
ಒಗ್ಗಟ್ಟಿನ ಟಾಸ್ಕ್‌ನಲ್ಲಿ ಭಿನಾಭಿಪ್ರಾಯ
ಕಾಮನಬಿಲ್ಲು ತಂಡದಲ್ಲಿ ಆಟದ ನಂತರ ವೈಮನಸ್ಸು ಉಂಟಾಗಿದ್ದು ಆರ್ಯವರ್ಧನ್ ಮಾತನಾಡಿ ʻʻನನ್ನ ಮಾತು ಯಾರು ಕೇಳುವುದೇ ಇಲ್ಲಾʼʼ ಎಂದರು. ದಿವ್ಯಾ ಉರುಡುಗ ಪ್ರತಿಕ್ರಿಯೆ ನೀಡಿ ʻʻನಿಮ್ಮದು ಶುರು ಮಾಡಬೇಡಿ ಈಗʼʼ ಎಂದು ಗರಂ ಆದರು. ಅವರವರ ಆಟ ಅವರವರೇ ಆಡಿದ್ದಾರೆ ಚೆನ್ನಾಗಿರುತ್ತಿತ್ತುʼ ಎಂದು ರೂಪೇಶ್ ಶೆಟ್ಟಿ ಹೇಳಿದರು. ನೇಹಾ ಮಾತನಾಡಿ ʻʻಇಲ್ಲಿ ಪೇಷನ್ಸ್ ಮತ್ತು ಗಮನ ತುಂಬಾ ಮುಖ್ಯವಾಗಿತ್ತು. ಬೇಗನೇ ಅವರ ಮುಂಚೆಯೇ ಅರೆಂಜ್ ಮಾಡಿದ್ದೇವೆʼʼಎಂದರು. ದಿವ್ಯಾ ಹಾಗೂ ನೇಹಾ ಅವರು ರೂಪೇಶ್ ರಾಜಣ್ಣಗೆ ಕ್ಲಾಸ್ ತೆಗೆದುಕೊಂಡಿದ್ದು ʻʻನೀವು ಅರೆಂಜ್ ಮಾಡಿದ ಮೇಲೆಯೂ ಹಿಂದೆ ತಿರುಗಿ ನೋಡುತ್ತಿದ್ದೀರಿ. ಅದು ಬೇಕಾಗಿರಲಿಲ್ಲ. ಕಿರುಚುತ್ತೀರಾʼʼ ಎಂದಿದ್ದಾರೆ.
ರೂಪೇಶ್ ಶೆಟ್ಟಿ ಮಾತನಾಡಿ ʻʻಬಾಕ್ಸ್ ಬಿದ್ದಿರುವುದೇ ನಿಮ್ಮಿಂದʼʼ ಎಂದು ರೂಪೇಶ್ ರಾಜಣ್ಣಗೆ ಹೇಳಿದರು. ʻಹೇಳುವುದನ್ನು ತಿಳಿದುಕೊಳ್ಳುವುದೇ ಇಲ್ಲʼ ಎಂದು ಸದಸ್ಯರು ರೂಪೇಶ್ ರಾಜಣ್ಣನ ಮೇಲೆ ಗರಂ ಆದರು. ಧಮ್ ಪವರ್ ಟೀಮ್‌ನಿಂದ ಅರುಣ್ ಸಾಗರ್ ಬಿಗ್ ಬಾಸ್ ಕ್ಯಾಮೆರ ಮುಂದೆ ನಿಂತು ʻʻಪ್ರತಿಯೊಬ್ಬರ ಶ್ರಮಕ್ಕೆ ಈ ಫಲ ಸಿಕ್ಕಿದೆ. ಈ ಗೆಲುವನ್ನು ನಮ್ಮ ಪುನೀತ್ ರಾಜಕುಮಾರ್‌ಗೆ ಅರ್ಪಿಸುತ್ತಿದ್ದೇವೆ. ಹಾಗೇ ಒಗ್ಗಟ್ಟಿನಲ್ಲಿ ಯಾವಾಗಲೂ ಬಲವಿದೆʼʼಎಂದರು.
ಇದನ್ನೂ ಓದಿ | Bigg Boss Kannada | ಸಾನ್ಯ ಮಾಡ್ತಿರೋದೆಲ್ಲ ಪ್ರ್ಯಾಂಕ್ ಅಂದ್ರೂ ನಂಬ್ತಾ ಇಲ್ಲ ರೂಪೇಶ್ ರಾಜಣ್ಣ!