ಬೆಂಗಳೂರು: ಬಿಗ್‌ಬಾಸ್ ಕನ್ನಡ ಒಟಿಟಿಯಲ್ಲಿ (Bigg Boss Kannada) ಸ್ಪರ್ಧಿಗಳಿಗೆ ಕ್ರಿಯೇಟಿವ್ ಟಾಸ್ಕ್ ನೀಡುತ್ತಿದ್ದಾರೆ. ಇದೀಗ ಹೊಸ ಟಾಸ್ಕ್ ಒಂದರ ಪ್ರೋಮೊ ಹಂಚಿಕೊಂಡಿದ್ದು, ಸಖತ್ ಎಂಟರ್ಟೈನ್ಮೆಂಟ್ ನೀಡುತ್ತಿದೆ. ʻʻಹೇಳುವುದಕ್ಕೂ ಕೇಳುವುದಕ್ಕೂ ಇದೇ ಸಮಯ!ʼʼಎನ್ನುವ ಹೆಸರಿನ ಟಾಸ್ಕ್‌ನಲ್ಲಿ ಸ್ಪರ್ಧಿಗಳು ನಗಿಸಿದ್ದಾರೆ. ಇದು ಲಿಪ್ ರೀಡಿಂಗ್ ಸ್ಫರ್ಧೆ ಆಗಿದ್ದು, ಸ್ಪರ್ಧಿಗಳು ಮಜವಾಗಿ ಆಡಿರುವ ವಿಡಿಯೊವನ್ನು ವೂಟ್ ಹಂಚಿಕೊಂಡಿದೆ.
ಒಂದು ಕಡೆ ಸಾನ್ಯ ಮೈಸೂರು ಅಂದರೆ ಸೋನುಗೆ ಅರ್ಥವೇ ಆಗಿಲ್ಲ. ಅಕ್ಷತಾ ಅಂತೂ ಸೋಮಣ್ಣ ಅವರು ತಿಮ್ಮಪ್ಪ ಅಂದರೆ ನಮ್ಮಪ್ಪ ಎಂದು ಮಜವಾಗಿ ಹೇಳಿದರು. ʻʻರಾಗಿ ಮುದ್ದೆ ತಿನ್ನೋ ತಿಮ್ಮಪ್ಪʼʼ ಎಂದು ಸೋಮಣ್ಣ ಹೇಳಿದರೆ, ʻʻರಾಕಿ ಮುಂದೆ ನಿಲ್ಲೋದು ತಪ್ಪಾʼʼ ಎಂದರು ಅಕ್ಷತಾ. ಇನ್ನೂ ಸಾನ್ಯಾ ಅಡಕೆಗೆ ಹೋದ ಮಾನ ಗಾದೆ ಹೇಳಿದರೆ, ʻʻಹಾಸಿಗೆ ಇದ್ದಷ್ಟು ಕಾಸು ಚಾಚುʼʼ ಎಂದರು ಸೋನು.! ಇನ್ನೊಂದು ಟಾಸ್ಕ್ ಬಿಗ್‌ಬಾಸ್ ನೀಡಿದ್ದು, ತಂಡದ ಒಬ್ಬ ಸದಸ್ಯರು ಬೆಳಗ್ಗೆವರೆಗೂ ಎಚ್ಚರ ಇರಬೇಕಾಗುತ್ತದೆ. ಇದರಲ್ಲಿ ಜಯಶ್ರೀ ಹಾಗೂ ಸೋಮಣ್ಣ ಟಾಸ್ಕ್ ನಿಭಾಯಿಸುತ್ತಿದ್ದು, ಉಳಿದ ಸದಸ್ಯರು ಆಡಿದ್ದಾರೆ. ಈ ಎರಡೂ ಟಾಸ್ಕ್‌ನಲ್ಲಿ ಯಾವ ತಂಡ ಗೆಲ್ಲುತ್ತದೆ ಎಂಬುದು ಇವತ್ತಿನ ಸಂಚಿಕೆಯಲ್ಲಿ ಪ್ರಸಾರವಾಗಲಿದೆ.
ಇದನ್ನೂ ಓದಿ | Bigg Boss Kannada | ಬಿಗ್‌ಬಾಸ್ ಮನೆಯಲ್ಲಿ ನಡೆದ ಅದ್ಧೂರಿ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ
ಬಿಗ್ ಬಾಸ್’ನಲ್ಲಿ ಪ್ರತಿ ವಾರ ವಿವಿಧ ರೀತಿಯ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಈ ವಾರ ಎರಡು ತಂಡಗಳನ್ನಾಗಿ ಮಾಡಿ ಹಲವು ಫಿಸಿಕಲ್ ಟಾಸ್ಕ್ಗಳನ್ನು ಕೊಡಲಾಗುತ್ತಿದೆ. ಒಂದು ತಂಡಕ್ಕೆ ಸೋಮಣ್ಣ ಮಾಚಿಮಾಡ ಕ್ಯಾಪ್ಟನ್ ಆದರೆ, ಮತ್ತೊಂದು ಟೀಂಗೆ ನಂದು ನಾಯಕಿ. ನಂದು ಟೀಂನಲ್ಲಿ ಸೋನು ಗೌಡ ಕೂಡ ಇದ್ದಾರೆ. ಸ್ಪರ್ಧಿಗಳು ಟಾಸ್ಕ್ಅನ್ನು ಅದ್ಭುತವಾಗಿ ಆಡಿ ತೋರಿಸುತ್ತಿದ್ದಾರೆ.
ಇದನ್ನೂ ಓದಿ | Bigg Boss Kannada | ವೈದ್ಯ ಲೋಕವೇ ವಿಸ್ಮಯ ಪಡುವ ಔಷಧ ಹೇಳಿದ್ದಾರೆ ಸೋನು: ನೆಗಡಿ ಬಂದ್ರೆ ಏನು?