ಬೆಂಗಳೂರು : ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Kannada ) ಆರ್ಯವರ್ಧನ್ ಅವರು ನೇರ ನುಡಿ ಮಾತಿಗೆ ಎತ್ತಿದ ಕೈ. ಒಟಿಟಿಯಿಂದಲೂ ಆರ್ಯವರ್ಧನ್ ಅವರು ತಮ್ಮ ನೇರ ಮಾತಿನಿಂದ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. ಇದೀಗ ಗುರೂಜಿ ಅವರ ಭವಿಷ್ಯ ನುಡಿಯಿಂದ ದಿವ್ಯಾ ಉರುಡುಗ ಅವರು ಬೇಸರ ಮಾಡಿಕೊಂಡಿದ್ದಾರೆ.
ರಾಕೇಶ್ ಅಡಿಗ ಬಳಿ ಗುರೂಜಿ ಮಾತನಾಡುವಾಗ ದಿವ್ಯಾ ಕೂಡ ಇದ್ದರು. ಹುಟ್ಟಿದ ದಿನಾಂಕ ಇಟ್ಟುಕೊಂಡು ಗುರೂಜಿ ಭವಿಷ್ಯ ನುಡಿದಿದ್ದಾರೆ. ʻʻಯಾರು 7ನೇ ದಿನಾಂಕದಂದು ಹುಟ್ಟಿರುತ್ತಾರೋ 8ನೇ ದಿನಾಂಕದಂದು ಹುಟ್ಟಿರುವವರು ಲೈಫ್ ಪಾರ್ಟ್ನರ್ ಆಗಲಿಕ್ಕೆ ಆಗುವುದಿಲ್ಲ. ಬೆಸ್ಟ್ ಫ್ರೆಂಡ್ ಆಗಿರುತ್ತಾರೆ. ಒಂದು ವೇಳೆ ಲೈಫ್ ಪಾರ್ಟ್ನರ್ ಆದರೆ ಡಿವೋರ್ಸ್ ಆಗ್ತಾರೆʼʼ ಎಂದು ಗುರೂಜಿ ಹೇಳಿದ್ದಾರೆ.
ಇದನ್ನೂ ಓದಿ | Bigg Boss Kannada | ಕಾಂಪಿಟೇಟರ್ ಅಲ್ಲ ಅಂತ ಹೇಳೋಕೂ ಮನೆಯಲ್ಲಿ ಬಿಗ್ ಕಾಂಪಿಟೇಶನ್!
ದಿವ್ಯಾ ಉರುಡುಗ ಹುಟ್ಟಿದ್ದು 7ನೇ ತಾರಿಕು, ಹಾಗೆ ಅರವಿಂದ್.ಕೆ.ಪಿ ಹುಟ್ಟಿದ್ದು 8ರಂದು. ಆರ್ಯವರ್ಧನ್ ಗುರೂಜಿ ನುಡಿದ ಭವಿಷ್ಯವನ್ನು ದಿವ್ಯಾ ಉರುಡುಗಗೆ ಅರಗಿಸಿಕೊಳ್ಳಲು ಆಗಲಿಲ್ಲ. ಬೇಸರ ವ್ಯಕ್ತಪಡಿಸಿದ ದಿವ್ಯಾ ಉರುಡುಗ ʻʻನಮಸ್ಕಾರ ನಿಮ್ಮ ಜ್ಯೋತಿಷ್ಯಕ್ಕೆ. ನಾನು ಇಲ್ವೇ ಇಲ್ಲʼʼ ಎಂದು ದಿವ್ಯಾ ಎದ್ದು ಹೊರಟುಬಿಟ್ಟರು.
ಈ ಹಿಂದೆ ಅಷ್ಟೆ ಕಿಚ್ಚ ಸುದೀಪ್ ದೀಪಾವಳಿ ಪ್ರಯುಕ್ತ ಸದಸ್ಯರಿಗೆ ಲೆಟರ್ ಕಳುಹಿಸಿದ್ದರು. ದಿವ್ಯಾ ಉರುಡುಗ ಅವರಿಗೆ ʻʻವಿರಹ ವೇದನೆ ಮುಂದುವರಿಯಲಿʼʼಎಂದು ಬರೆದು ಕಳುಹಿಸಿದ್ದರು. ಪಂಚಾಯಿತಿಯಲ್ಲಿ ʻʻಗಿಫ್ಟ್ ಕೊಡುವುದಾದರೆ ಯಾರಿಗೆ ಯಾವ ಗಿಫ್ಟ್ ಕೊಡುತ್ತೀರಾʼʼ ಎಂಬ ಕಿಚ್ಚನ ಪ್ರಶ್ನೆಗೆ ರೂಪೇಶ್ ಶೆಟ್ಟಿ ಅವರು ʻʻದಿವ್ಯಾ ಉರುಡುಗ ಅವರಿಗೆ ಬೈಕ್ ಗಿಫ್ಟ್ʼʼ ಮಾಡುತ್ತೇನೆ ಎಂದಿದ್ದರು. ಬಿಗ್ ಬಾಸ್ ಸೀಸನ್ 8ರಲ್ಲಿ ಅರವಿಂದ್ ಮತ್ತು ದಿವ್ಯಾ ಉರುಡುಗ ಭಾಗವಹಿಸಿದ್ದರು. ಜೋಡಿ ಟಾಸ್ಕ್ ನಂತರದಲ್ಲಿ ಇವರಿಬ್ಬರ ಮಧ್ಯೆ ಆತ್ಮೀಯತೆ ಬೆಳೆಯಿತು. ಸಾಕಷ್ಟು ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿತ್ತು. ಈ ಸೀಸನ್‌ನಲ್ಲಿಯೂ ಈ ಜೋಡಿ ಕುರಿತು ಸಾಕಷ್ಟು ಚರ್ಚೆಗಳು ಆಗುತ್ತಿವೆ.
ಇದನ್ನೂ ಓದಿ |B igg Boss Kannada | ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್ ಅಂಥೋನಿ ಆದ್ರೆ ದೀಪಿಕಾ ದಾಸ್ ಮಿಸ್ ರೀಟಾ!