Site icon Vistara News

Bigg Boss Kannada | ಕಳಪೆ ಕೊಡುವ ವೇಳೆ ರೂಪೇಶ್‌ ರಾಜಣ್ಣಗೆ ದಿವ್ಯಾ ತಿರುಗೇಟು: ಹೇಗಿತ್ತುಆರ್ಯವರ್ಧನ್‌ ಏಕಪಾತ್ರಾಭಿನಯ?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) 48ನೇ ದಿನ ಆರ್ಯವರ್ಧನ್‌ ಗುರೂಜಿ ಅವರು ರೂಪೇಶ್‌ ರಾಜಣ್ಣ ಅವರ ರೀತಿಯಲ್ಲಿ ಏಕಪಾತ್ರಾಭಿನಯ ಮಾಡಿ ನೋಡಗರನ್ನು ರಂಜಿಸಿದ್ದಾರೆ. ರೂಪೇಶ್‌ ರಾಜಣ್ಣ ಅವರು ಮನೆಯ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ವಾರ ರೂಪೇಶ್‌ ರಾಜಣ್ಣ ಕಳಪೆ ಪ್ರದರ್ಶನ ತೋರಿದ್ದಾರೆ. ಕಳಪೆ ಮತ್ತು ಉತ್ತಮ ಆಯ್ಕೆ ಪ್ರಕ್ರಿಯೆ ವೇಳೆ ರೂಪೇಶ್‌ ರಾಜಣ್ಣ ಮತ್ತು ದಿವ್ಯಾ ಉರುಡುಗ ನಡುವೆ ಮಾತಿನ ಚಕಮಕಿ ನಡೆದಿದೆ.

ಏನಿದು ಮುನಿಸು?
ಹಿಂದಿನ ಸಂಚಿಕೆಯಲ್ಲಿ ದಿವ್ಯಾ ಉರುಡುಗ ಹಾಗೂ ರೂಪೇಶ್ ರಾಜಣ್ಣ ಅವರು ಒಂದು ಹಾಡು ಹಾಡಿದ್ದರು. ಆ ಹಾಡಿನ ಸಾಹಿತ್ಯ ರಚಿಸಿದ್ದು, ಟ್ಯೂನ್ ಹಾಕಿದ್ದು ರೂಪೇಶ್ ರಾಜಣ್ಣ . ʻʻಎಲ್ಲಿಯೂ ಕೂಡ ಇದನ್ನು ಬರೆದಿದ್ದು ನಾನು, ಟ್ಯೂನ್ ಹಾಕಿದ್ದು ನಾನು ಎಂದು ದಿವ್ಯಾ ಹೇಳಲಿಲ್ಲ, ತನ್ನ ಹಾಡು ಅಂತಲೇ ಬಿಂಬಿಸಿಕೊಂಡರುʼʼ ಎಂದು ರೂಪೇಶ್ ರಾಜಣ್ಣ ಅವರು ದಿವ್ಯಾ ಅವರಿಗೆ ಫೇಕ್ ಎಂಬ ಪಟ್ಟ ನೀಡಿದ್ದರು.

ಇದನ್ನೂ ಓದಿ | Bigg Boss Kannada | ಈ ವಾರದ ಕ್ಯಾಪ್ಟನ್‌ ಕಾವ್ಯಶ್ರೀ ಗೌಡ: ಕಳಪೆ ಪಟ್ಟ ಯಾರಿಗೆ?

ನನ್ನ ಹಾಡು ಎಂದು ಹೇಳಿಕೊಳ್ಳುವ ಚೀಪ್‌ ಮೆಂಟಾಲಿಟಿ ನಂಗಿಲ್ಲ!
ಇದೇ ವಿಚಾರವಾಗಿ ದಿವ್ಯಾ ಉರುಡುಗ ಬೇಸರ ಪಟ್ಟುಕೊಂಡಿದ್ದಾರೆ. ಕಳಪೆ ನೀಡುವ ವೇಳೆ ಮಾತನಾಡಿದ ದಿವ್ಯಾ ಅವರು ʻʻಇನ್ನೊಬ್ಬರ ಹಾಡನ್ನು ನನ್ನ ಹಾಡು ಎಂದು ಹೇಳಿಕೊಳ್ಳುವ ಚೀಪ್‌ ಮೆಂಟಾಲಿಟಿ ನಂಗಿಲ್ಲ. ಅದನ್ನು ಹೇಳಲು ನೀವು ಹೇಗಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳಬೇಕು. ನಾನು ಹೋಗಿ ಹೋಗಿ ಯಾರಿಗೆ ಸ್ಟ್ಯಾಂಡ್ ತಗೊಂಡೆ ಎನ್ನುವುದು ಈಗ ನನಗೆ ಅನ್ನಿಸುತ್ತಿದೆ. ನನಗೆ ನಾಟಕ ಮಾಡಲು ಬರುವುದಿಲ್ಲ” ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರೂಪೇಶ್‌ ರಾಜಣ್ಣ ಅವರು ʻನಾನು ಎಲ್ಲಿಯವರೆಗೆ ನಿಮ್ಮನ್ನು ನಂಬಿದ್ದೆ ಎಂದು ನಿಮ್ಮ ಆತ್ಮಸಾಕ್ಷಿಯನ್ನು ನೀವು ಕೇಳಿಕೊಳ್ಳಬೇಕು. ಸೆಂಟಿಮೆಂಟ್ ಮಾಡಿಕೊಂಡು ಕ್ಯಾಮೆರಾ ಮುಂದೆ ಅಪ್ಪ-ಅವ್ವ ಎನ್ನುವುದಕ್ಕೆ ನನಗೆ ಬರುವುದಿಲ್ಲ” ಎಂದು ಹೇಳಿ ವಿನೋದ್‌ ಗೊಬ್ಬರಗಾಲ ಅವರಿಗೆ ಕಳಪೆ ಪಟ್ಟ ಕೊಟ್ಟಿದ್ದಾರೆ.

ಕಾವ್ಯಶ್ರೀ ಕ್ಯಾಪ್ಟನ್ಸಿಯಲ್ಲಿ ಸದಸ್ಯರಿಗೆ ಮೊದಲ ಟಾಸ್ಕ್‌!

ಬಿಗ್‌ ಬಾಸ್‌ ಮನೆಮಂದಿಗೆ ಚಟುವಟಿಕೆಯನ್ನು ನೀಡಿದ್ದು, ಇದರ ಅನುಸಾರ ಕೆರೆ ದಡ ಹೋಲುವ ಈ ಟಾಸ್ಕ್‌ಗಾಗಿ ಕ್ಯಾಪ್ಟನ್‌ ಕಾವ್ಯಶ್ರೀ ಅವರು ಮನೆಯವರೊಂದಿಗೆ ಚರ್ಚಿಸಿ ತಲಾ ಇಬ್ಬರು ಸದಸ್ಯರು ಇರುವ ಐದು ತಂಡಗಳನ್ನು ರಚಿಸಬೇಕು. ಕ್ಯಾಪ್ಟನ್‌ ಒಳಗೆ ಎಂದಾಗ ಬೋರ್ಡ್‌ನಲ್ಲಿ ಇರುವ ತಮ್ಮ ಭಾಗಕ್ಕೆ ಕೆಂಪು ಬಣ್ಣ ಹಚ್ಚಬೇಕು. ಹೊರಗೆ ಎಂದಾಗ ನೀಲಿ ಬಣ್ಣ ಹಚ್ಚಬೇಕು. ಹೀಗೆ ಕೆರೆ ದಡ ಟಾಸ್ಕ್‌ನಂತೆ ಈ ಆಟವನ್ನು ಆಡಬೇಕು. ತಮಗೆ ಮೀಸಲಿರುವ ಬೋರ್ಡ್‌ನ ಎರಡೂ ಭಾಗಗಳಿಗೆ ಪೂರ್ಣವಾಗಿ ಬಣ್ಣ ಹಚ್ಚುವ ತಂಡ ಈ ಟಾಸ್ಕ್‌ ಗೆಲ್ಲುತ್ತದೆ. ಈ ಟಾಸ್ಕ್‌ನಲ್ಲಿ ದಿವ್ಯಾ ಉರುಡುಗ ಮತ್ತು ರಾಕೇಶ್‌ ವಿಜೇತರಾದರು.

ಇದನ್ನೂ ಓದಿ | Bigg Boss Kannada | ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಡಲಿದ್ದಾರಾ ಸೋನು ಗೌಡ-ಚಕ್ರವರ್ತಿ ಚಂದ್ರಚೂಡ್‌?

Exit mobile version