Site icon Vistara News

Bigg Boss Kannada | ಐದನೇ ಸ್ಪರ್ಧಿಯಾಗಿ ದಿವ್ಯಾ ಉರುಡುಗ, ಆರನೇ ಸ್ಪರ್ಧಿಯಾಗಿ ದರ್ಶ್‌ ಚಂದ್ರಪ್ಪ ಎಂಟ್ರಿ!

Bigg Boss Kannada

ಬೆಂಗಳೂರು : ಖ್ಯಾತ ರಿಯಾಲಿಟಿ ಶೋ ಎಂದೆನಿಸಿಕೊಂಡ ಬಿಗ್ ಬಾಸ್ (Bigg Boss Kannada) ಒಂಬತ್ತನೇ ಆವೃತ್ತಿಯಲ್ಲಿ ಐದನೇ ಸ್ಪರ್ಧಿಯಾಗಿ ದಿವ್ಯಾ ಉರುಡುಗ ಎಂಟ್ರಿ ಕೊಟ್ಟಿದ್ದಾರೆ. ವೇದಿಕೆ ಮೇಲೆ ದಿವ್ಯಾ ಉರುಡುಗ ಅವರನ್ನು ಕೆಪಿ ಅರವಿಂದ್‌ ವೇದಿಕೆ ಮೇಲೆ ಕರೆದುಕೊಂಡು ಬಂದಿದ್ದು ವಿಶೇಷವಾಗಿತ್ತು. ಆರನೇ ಸ್ಪರ್ಧಿಯಾಗಿ ದರ್ಶ್ ಚಂದ್ರಪ್ಪ ಪ್ರವೇಶ ಪಡೆದಿದ್ದಾರೆ.

ದಿವ್ಯಾ ಉರುಡುಗ ಎಂದಾಕ್ಷಣ ನೆನಪಾಗುವುದು ಬಿಗ್ ಬಾಸ್ ಕನ್ನಡ ಸೀಸನ್ 8 . ಅದರಲ್ಲಿ ಭಾಗವಹಿಸಿದ್ದ ಸ್ಪರ್ಧಿ ಅರವಿಂದ್ ಕೆ.ಪಿ ಹಾಗೂ ದಿವ್ಯಾ ಉರುಡುಗ ಒಳ್ಳೆಯ ಸ್ನೇಹಿತರು. ಬಿಗ್ ಬಾಸ್‍ಗೆ ಹೋದಾಗಿನಿಂದ ದಿವ್ಯಾ ಉರುಡುಗ ಹೆಚ್ಚು ಜನ ಪ್ರಿಯತೆ ಹೊಂದಿದ್ದಾರೆ.  

ದಿವ್ಯಾ ಉರುಡುಗ ಅವರು ಅರ್ಧಂಬರ್ಧ ಪ್ರೇಮ ಕಥೆ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ದಿವ್ಯಾ ಸ್ನೇಹಿತ ಅರವಿಂದ್ ಕೂಡ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಘೋಷಣೆ ಆಗಬೇಕಿದೆ. ಈ ವಿಚಾರದ ಬಗ್ಗೆ ಅಧಿಕೃತ ಮಾಹಿತಿ ತಿಳಿದುಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ | Bigg Boss Kannada | ಮೂರನೇ ಸ್ಪರ್ಧಿಯಾಗಿ ದೀಪಿಕಾ ದಾಸ್‌ ಎಂಟ್ರಿ: ನಾಲ್ಕನೇ ಸ್ಪರ್ಧಿಯಾಗಿ ನವಾಜ್‌!

ದಿವ್ಯಾ ಉರುಡುಗ ಮತ್ತು ಅರವಿಂದ್‌.ಕೆ.ಪಿ ಜೋಡಿಗೆ ದೊಡ್ಡ ಫ್ಯಾನ್ ಫಾಲೋವಿಂಗ್ ಇತ್ತು. ‘ಬಿಗ್ ಬಾಸ್’ ಮನೆಯೊಳಗೆ ಆತ್ಮೀಯವಾಗಿದ್ದ ಅರವಿಂದ್.ಕೆ.ಪಿ ಹಾಗೂ ದಿವ್ಯಾ ಉರುಡುಗ ‘ಬಿಗ್ ಬಾಸ್’ ಮನೆಯಿಂದ ಹೊರಗೆ ಬಂದ್ಮೇಲೂ ಅಷ್ಟೇ ಆತ್ಮೀಯತೆಯಿಂದಿದ್ದಾರೆ.

ಆರನೇ ಸ್ಪರ್ಧಿಯಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀತಾ ವಲ್ಲಭ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ ದರ್ಶ್ ಚಂದ್ರಪ್ಪ ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿದ್ದಾರೆ. ಗೆಳೆಯರ ಸಲಹೆಯ ಮೇರೆಗೆ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ದರ್ಶ್ ಪ್ರತಿಷ್ಠಿತ ಬ್ರ್ಯಾಂಡ್ ಹಣೆಪಟ್ಟಿಯುಳ್ಳ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ತ್ರೀ ರೋಸಸ್ ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ದರ್ಶ್ ಮೊದಲ ಬಾರಿ ಕಿರುತೆರೆಗೆ ಕಾಲಿಟ್ಟಿದ್ದು ದುರ್ಗಾ ಧಾರಾವಾಹಿಯ ಮೂಲಕ. 

ಇದನ್ನೂ ಓದಿ | Bigg Boss Kannada | ಮೂರನೇ ಸ್ಪರ್ಧಿಯಾಗಿ ದೀಪಿಕಾ ದಾಸ್‌ ಎಂಟ್ರಿ: ನಾಲ್ಕನೇ ಸ್ಪರ್ಧಿಯಾಗಿ ನವಾಜ್‌!

Exit mobile version