Site icon Vistara News

Bigg Boss Kannada | ಬಿಗ್‌ ಬಾಸ್‌ ಮನೆಯಿಂದ ದಿವ್ಯಾ ಉರುಡುಗ ಔಟ್‌

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಗ್ರ್ಯಾಂಡ್‌ ಫೀನಾಲೆ ಡಿಸೆಂಬರ್‌ 30 ಹಾಗೂ 31ರಂದು ರಾತ್ರಿ 7.30ಕ್ಕೆ ಕಲರ್ಸ್‌ ಕನ್ನಡವಾಹಿನಿಯಲ್ಲಿ ಪ್ರಸಾರವಾಗಲಿದೆ. ಐದು ಸ್ಪರ್ಧಿಗಳು ಫಿನಾಲೆವರೆಗೆ ತಲುಪಿದ್ದರು. ಬಿಗ್‌ ಬಾಸ್‌ ಸೀಸನ್‌ 9 ಸ್ಪರ್ಧಿಯಾಗಿದ್ದ ದಿವ್ಯಾ ಉರುಡುಗ ಪ್ರವೀಣರಾಗಿ ಈ ಬಾರಿ ಸೀಸನ್ 9ಕ್ಕೂ ಕಾಲಿಟ್ಟಿದ್ದರು. ಆದರೆ ಇದೀಗ ದಿವ್ಯಾ ಉರುಡುಗ ಎಲಿಮಿನೇಟ್‌ ಆಗಿದ್ದಾರೆ.

ಕಳೆದ ಸೀಸನ್‌ನಲ್ಲಿ ಅರವಿಂದ್ ಕೆ.ಪಿ ಜತೆ ದಿವ್ಯಾ ಹೈಲೈಟ್ ಆಗಿದ್ದರು. ದಿವ್ಯಾ ಉರುಡುಗ ಅವರು ʻಅರ್ಧಂಬರ್ಧ ಪ್ರೇಮ ಕಥೆʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ದಿವ್ಯಾ ಸ್ನೇಹಿತ ಅರವಿಂದ್ ಕೂಡ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಘೋಷಣೆ ಆಗಬೇಕಿದೆ. ಈ ವಿಚಾರದ ಬಗ್ಗೆ ಅಧಿಕೃತ ಮಾಹಿತಿ ತಿಳಿದುಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ. ದಿವ್ಯಾ ಉರುಡುಗ ಮತ್ತು ಅರವಿಂದ್‌.ಕೆ.ಪಿ ಜೋಡಿಗೆ ದೊಡ್ಡ ಫ್ಯಾನ್ ಫಾಲೋವಿಂಗ್ ಇತ್ತು. ‘ಬಿಗ್ ಬಾಸ್’ ಮನೆಯೊಳಗೆ ಆತ್ಮೀಯವಾಗಿದ್ದ ಅರವಿಂದ್.ಕೆ.ಪಿ ಹಾಗೂ ದಿವ್ಯಾ ಉರುಡುಗ ‘ಬಿಗ್ ಬಾಸ್’ ಮನೆಯಿಂದ ಹೊರಗೆ ಬಂದ ಮೇಲೂ ಅಷ್ಟೇ ಆತ್ಮೀಯತೆಯಿಂದಿದ್ದಾರೆ.

ಇದನ್ನೂ ಓದಿ | Bigg Boss Kannada | ವಾಸುಕಿ ಸರ್ಪ್ರೈಸ್ ವಿಸಿಟ್: ಕಾವ್ಯಶ್ರೀ, ಅಮೂಲ್ಯ, ಅನುಪಮಾ ಮನದಾಳದ ಮಾತುಗಳು!

ಹಾಗೆಯೇ ಸೀಸನ್‌ 9ರಲ್ಲಿ ಒಂಟಿಯಾಗಿ ಆಟ ಆಡಿ ಮತ್ತೊಮ್ಮೆ ಗಟ್ಟಿ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಆದರೂ ಈ ಬಾರಿ ಕೂಡ ದಿವ್ಯಾ ಅದೃಷ್ಟ ಕೈ ಕೊಟ್ಟಿದೆ. ಬಿಗ್ ಬಾಸ್ ಮನೆಯ ಆಟ ದಿವ್ಯಾ ಅವರಿಗೆ ಅಂತ್ಯವಾಗಿದೆ. ದಿವ್ಯಾ ಎಲಿಮಿನೇಷನ್‌ ನಂತರ ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ಮತ್ತು ರಾಕೇಶ್ ಅಡಿಗ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಬಿಗ್‌ ಬಾಸ್‌ ಸೀಸನ್‌ 9ರ ವಿನ್ನರ್‌ ಶನಿವಾರ ಅಧಿಕೃತವಾಗಿ ಪ್ರಕಟವಾಗಲಿದೆ. ಯಾರಿಗೆ ಸಿಗಲಿದೆ ಬಿಗ್ ಬಾಸ್ ಪಟ್ಟ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ | Bigg Boss Kannada | ಇಂದು ಬಿಗ್‌ ಬಾಸ್‌ ಗ್ರ್ಯಾಂಡ್ ಫಿನಾಲೆ: ಯಾರಾಗ್ತಾರೆ ಸೀಸನ್ 9 ವಿನ್ನರ್‌?

Exit mobile version