Site icon Vistara News

Bigg Boss Kannada | ಅರವಿಂದ್‌ ನೋಡಿ ನಾಚಿ ನೀರಾದ ದಿವ್ಯಾ ಉರುಡುಗ: ಬಿಗ್ ಬಾಸ್ ಮನೆಯಲ್ಲಿ ಡಬಲ್ ಸರ್ಪ್ರೈಸ್!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 9ರ (Bigg Boss Kannada) ಗ್ರ್ಯಾಂಡ್‌ ಫಿನಾಲೆಗೆ ಈಗಾಗಲೇ ಕೌಂಟ್‌ಡೌನ್‌ ಶುರುವಾಗಿದೆ. ಈಗಾಗಲೇ ಮಿಡ್​ ವೀಕ್​ ಎಲಿಮಿನೇಷನ್​ ನಡೆದಿದ್ದು, ಫಿನಾಲೆಯ ಹೊಸ್ತಿಲಿನಲ್ಲಿ ಆರ್ಯವರ್ಧನ್​ ಗುರೂಜಿ ಅವರು ದೊಡ್ಮನೆಯಿಂದ ಔಟ್​ ಆಗಿದ್ದಾರೆ. ಇದರ ಬೆನ್ನಲ್ಲೇ ಸ್ಪರ್ಧಿಗಳಿಗೆ ವಿಶೇಷ ಅವಕಾಶವೊಂದನ್ನು ಬಿಗ್ ಬಾಸ್ ನೀಡಿದ್ದರು. ದಿವ್ಯಾ ಉರುಡುಗ ಅವರು ಅರವಿಂದ್ ಕೆ.ಪಿ ಮನೆಯೊಳಗೆ ಬರಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದೀಗ ಅರವಿಂದ್‌ ಕೆ.ಪಿ ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ.

ಏನಿದು ಬಿಗ್‌ ಬಾಸ್‌ ಭರವಸೆ?
ಬಿಗ್‌ ಬಾಸ್‌ ಸ್ಪರ್ಧಿಗಳ ಒಂದು ಆಸೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆಯೇ ಪ್ರತಿಯೊಬ್ಬರು ಆಕ್ಟಿವಿಟಿ ರೂಮಿಗೆ ತೆರಳಿ, ಅಲ್ಲಿರುವ “ಆಶಾ ಬಾವಿʼಯ ಎದುರು ತಮ್ಮ ಮೂರು ಆಸೆಗಳನ್ನು ಕೋರಿಕೊಂಡು ಆ ನಾಣ್ಯವನ್ನು ಬಾವಿಯೊಳಗೆ ಎಸೆಯಬೇಕು. ಅದರಂತೆ ಎಲ್ಲಾ ಸ್ಪರ್ಧಿಗಳು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Bigg Boss Kannada | ದಿವ್ಯಾಗೆ ʻನೆವರ್‌ ಗಿವ್‌ ಅಪ್‌ʼಎಂದ ಅರವಿಂದ್‌: ಪ್ರೀತಿಯ ಸಂದೇಶ ಪೋಸ್ಟ್‌ ವೈರಲ್‌!

ದಿವ್ಯಾ ಬೇಡಿಕೆ ಇಟ್ಟಿದ್ದೇನು?
ಈ ವೇಳೆ ದಿವ್ಯಾ, ಮನೆಯೊಳಗೆ ಜಾತ್ರೆ ನಡೆಯಬೇಕು. ಸುದೀಪ್ ಸರ್‌ ಮನೆಯೊಳಗೆ ಬಂದು ಅಡುಗೆ ಮಾಡಬೇಕು. ಅವರೊಂದಿಗೆ ಊಟ ಮಾಡಬೇಕು. ಹಾಗೆಯೇ ಬಿಗ್ ಬಾಸ್ 8ರ ಸಹಸ್ಪರ್ಧಿ ಅರವಿಂದ್ ಕೆ.ಪಿ ಮನೆಯೊಳಗೆ ಬರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಮನವಿ ಮಾಡಿ, ಬಾವಿಯೊಳಗೆ ನಾಣ್ಯವನ್ನು ಎಸೆದಿದ್ದಾರೆ.

ಡಬಲ್‌ ಸರ್‌ಪ್ರೈಸ್‌ ನೀಡಿದ ಬಿಗ್‌ ಬಾಸ್‌
ಕಲರ್ಸ್‌ ಕನ್ನಡ ಪ್ರೋಮೊ ಒಂದನ್ನು ಹಂಚಿಕೊಂಡಿದ್ದು, ಅರವಿಂದ್ ಕೆ.ಪಿ ಮನೆಗೆ ಎಂಟ್ರಿ ಕೊಟ್ಟು ದಿವ್ಯಾ ಅವರಿಗೆ ಸರ್‌ಪ್ರೈಸ್‌ ನೀಡಿದ್ದಾರೆ. ಅರವಿಂದ್‌ ಕೆ.ಪಿ ಅವರು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ದಿವ್ಯಾ ಉರುಡುಗ ಕುಣಿದು ಕುಪ್ಪಳಿಸಿದ್ದಾರೆ. ಅರವಿಂದ್‌ ಅವರಿಗೆಂದು ಬರೆದ ಕವಿತೆಯನ್ನು ದಿವ್ಯಾ ಓದುವಾಗ ನಾಚಿ ನೀರಾಗಿದ್ದಾರೆ. ಅದೇ ರೀತಿ ರೂಪೇಶ್‌ ಶೆಟ್ಟಿ ಅವರಿಗೆ ಹುಲಿ ಡ್ಯಾನ್ಸ್‌ ಬಿಗ್‌ ಬಾಸ್‌ ಸರ್‌ಪ್ರೈಸ್‌ ನೀಡಿದ್ದು, ಖುಷಿಯಿಂದ ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ. ಇದೀಗ ಈ ಪ್ರೋಮೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ | Bigg Boss Kannada | ದಿವ್ಯಾ-ಅರವಿಂದ್‌ ಮದುವೆ ಆದ್ರೆ ಡಿವೋರ್ಸ್‌ ಗ್ಯಾರಂಟಿ : ಭವಿಷ್ಯ ನುಡಿದ ಗುರೂಜಿ

Exit mobile version