Site icon Vistara News

Bigg Boss Kannada | ಆರ್ಯವರ್ಧನ್‌ ಗುರೂಜಿಗೆ ಸಖತ್‌ ಕ್ಲಾಸ್‌ ತೆಗೆದುಕೊಂಡ ದಿವ್ಯಾ ಉರುಡುಗ

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) 58ನೇ ದಿನ ಆರ್ಯವರ್ಧನ್‌ ಗುರೂಜಿ ಹಾಗೂ ದಿವ್ಯಾ ಉರುಡುಗ ಮಧ್ಯೆ ವಾದ ನಡೆದಿದೆ. ನೇರ ಮಾತುಗಳಿಂದ ಯಾವಾಗಲೂ ಚರ್ಚೆಯಲ್ಲಿರುವ ಆರ್ಯವರ್ಧನ್‌ ಅವರು ಈ ಬಾರಿ ದಿವ್ಯಾರ ಬಗ್ಗೆ ಟಾಸ್ಕ್‌ ವಿಚಾರವಾಗಿ ಕಮೆಂಟ್‌ ಮಾಡಿದ್ದಾರೆ. ಇದೀಗ ಗುರೂಜಿ ಅವರು ದಿವ್ಯಾ ಉರುಡುಗ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಆರ್ಯವರ್ಧನ್‌ ಗುರೂಜಿ ಅವರು ದಿವ್ಯಾ ಉರುಡುಗ ಬಗ್ಗೆ ಮನೆಯಲ್ಲಿ ಮಾತನಾಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ದಿವ್ಯಾ ಅವರು ಆರ್ಯವರ್ಧನ್‌ ಅವರನ್ನು ಕ್ಲಾಸ್‌ ತೆಗೆದುಕೊಂಡಿದ್ದಾರೆ. ದಿವ್ಯಾ ಮಾತನಾಡಿ ʻʻನೀವು ಮನೆಯಲ್ಲಿ ನನ್ನ ಬಗ್ಗೆ ದಿವ್ಯಾ ಅವರು ಎರಡು ಮೂರು ಮಾತ್ರ ಟಾಸ್ಕ್‌ ವಿನ್‌ ಆಗಿದ್ದಾರೆ ಎಂದು ಹೇಳಿದ್ದೀರಿ. ನನಗೆ ಈಗ ಹೇಳಿ ಈ ಮನೆಯಲ್ಲಿ ಎಲ್ಲರೂ ಎಲ್ಲ ಟಾಸ್ಕ್‌ಗಳನ್ನು ವಿನ್‌ ಆಗಿದ್ದಾರಾ? ಯಾರಾದರೂ ಅಷ್ಟೂ ವಿನ್‌ ಆಗಿದ್ದರೆ ನನಗೆ ಹೇಳಿ. ಈ ಮನೆಯಲ್ಲಿ ಎಫರ್ಟ್‌ ತುಂಬಾ ಮುಖ್ಯ. ಹಾಗಂತ ನೀವು ಎಲ್ಲ ಟಾಸ್ಕ್‌ನಲ್ಲಿ ವಿನ್‌ ಆಗಿದ್ದೀರಾ? ಮತ್ತೆ ನೀವು ನನಗೆ ಹೇಗೆ ಈ ಮಾತು ಹೇಳುತ್ತೀರಾ? ಎಂದು ಖಡಕ್‌ ಆಗಿ ಆರ್ಯವರ್ಧನ್‌ ಅವರನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | Bigg Boss Kannada | ಹೇಗಿತ್ತು ಒಂಬತ್ತನೇ ವಾರ ಸ್ಪರ್ಧಿಗಳ ಆಟ-ಹುಡುಗಾಟ?

ಆರ್ಯವರ್ಧನ್‌ ಗುರೂಜಿ ಅವರು ಮೊದಲು ಸಮಾಧಾನದಿಂದ ಉತ್ತರಿಸಲು ಪ್ರಯತ್ನಿಸಿದ್ದಾರೆ. ಆರ್ಯವರ್ಧನ್‌ ಗುರೂಜಿ ಮಾತನಾಡಿ ʻʻಮೂರು ಮ್ಯಾಚ್‌ ನೀನು ಗೆದ್ದಿದ್ದೀಯಾ. ಆದರೆ ನಾನು ನಾಲ್ಕಾರು ಮ್ಯಾಚ್‌ ಗೆದ್ದಿದ್ದೇನೆ. ಕ್ಯಾಪ್ಟನ್‌ ಟಾಸ್ಕ್‌ ಗೆದ್ದಿದ್ದೇನೆ. ʼʼಎಂದು ಸಮಜಾಯಿಷಿ ನೀಡಿದ್ದಾರೆ. ಬಳಿಕ ದಿವ್ಯಾ ಮಾತನಾಡಿದ್ದು ʻʻನಾನು ಎಲ್ಲಿಯೂ ನಿಮ್ಮ ಹಾಗೇ ಬೇರೆಯವರಿಗೆ ಕಮೆಂಟ್‌ ಮಾಡಿಲ್ಲ. ನಾನು ನ್ಯಾಯವಾಗಿ ಆಡಿದ್ದೇನೆ. ನನ್ನ ಎಫರ್ಟ್‌ ನಾನು ಹಾಕಿದ್ದೇನೆ. ಎಲ್ಲಾದರೂ ಎಫರ್ಟ್‌ ಕಡಿಮೆ ಆದರೆ ಹೇಳಿ. ನೀವೂ ಎಲ್ಲ ಟಾಸ್ಕ್‌ಗಳನ್ನು ವಿನ್‌ ಆಗಿಲ್ಲ. ಬೇರೆಯವರ ಬಗ್ಗೆ ಮಾತನಾಡುವಾಗ ತಾವು ಎಷ್ಟು ಆಡಿದ್ದೇವೆ ಎನ್ನುವುದು ನೋಡಿಕೊಳ್ಳಬೇಕುʼʼ ಎಂದು ವಾರ್ನಿಂಗ್‌ ನೀಡಿದ್ದಾರೆ.

ಇದನ್ನೂ ಓದಿ | Bigg Boss Kannada | ಕ್ಯಾಪ್ಟನ್ಸಿ ಅಭ್ಯರ್ಥಿ ಆಯ್ಕೆಯ ಕುರಿತಾಗಿ ಕಿಚ್ಚ ಸುದೀಪ್‌ ನೀಡಿದ ಖಡಕ್‌ ವಾರ್ನಿಂಗ್‌ ಏನು?

Exit mobile version