ಬೆಂಗಳೂರು: ಬಿಗ್ ಬಾಸ್ ಸೀಸನ್ 9ರ (Bigg Boss Kannada ) 53ನೇ ದಿನ ಗೊಂಬೆಯ ಟಾಸ್ಕ್ ಮುಂದುವರಿದಿದ್ದು, ಸ್ಪರ್ಧಿಗಳ ಮಧ್ಯೆ ಗುದ್ದಾಟ ಹೆಚ್ಚಾಗುತ್ತಿದೆ. ಅರುಣ್ ಸಾಗರ್, ಪ್ರಶಾಂತ್ ಸಂಬರಗಿ , ವಿನೋದ್ ಗೊಬ್ಬರಗಾಲ ಮತ್ತು ರೂಪೇಶ್ ಶೆಟ್ಟಿ ನಡುವೆ ವಾದಗಳು ಆಗಿವೆ. ಟಾಸ್ಕ್ ಆಡುವ ವೇಳೆ ಕೆಲವು ಸ್ಪರ್ಧಿಗಳಿಗೆ ಗಾಯಗಳು ಆಗಿವೆ.
ಬಿಗ್ ಬಾಸ್, ಎರಡು ಸುತ್ತಿನಲ್ಲಿಯೂ 20 ಗೊಂಬೆಗಳನ್ನು ತಯಾರು ಮಾಡಲು ಸ್ಪರ್ಧಿಗಳಿಗೆ ಆದೇಶ ನೀಡಿದ್ದರು. ಅದರಂತೆ ಬೊಂಬೆಗಳ ವಸ್ತುಗಳನ್ನು ಪಡೆಯಲು ಸ್ಪರ್ಧಿಗಳ ಮಧ್ಯೆ ದೊಡ್ಡ ವಾರ್ ಆಗಿದೆ. ಪ್ರಶಾಂತ್ ಸಂಬರಗಿ ಹಾಗೂ ರೂಪೇಶ್ ರಾಜಣ್ಣ ಮಧ್ಯೆ ಜಗಳ ಮೊದಲು ಶುರುವಾಗಿದ್ದು, ನಂತರದಲ್ಲಿ ತಳ್ಳುವ ವಿಚಾರಕ್ಕೆ ಪ್ರಶಾಂತ್ ಸಂಬರಗಿ ಹಾಗೂ ರೂಪೇಶ್ ಶೆಟ್ಟಿ ಮಧ್ಯೆ ಗಲಾಟೆ ಆಗಿದೆ.
ಇದನ್ನೂ ಓದಿ | Bigg Boss Kannada | ಗೊಂಬೆ ತಯಾರಿಕೆಯಲ್ಲಿ ದೊಡ್ಡ ಮಕ್ಕಳ ಜಗಳ: ಇದು ಗೊಂಬೆಯಾಟವಯ್ಯಾ!
ಪ್ರಶಾಂತ್ ಸಂಬರಗಿ ಅವರು ರೂಪೇಶ್ ಶೆಟ್ಟಿ ಅವರ ಶರ್ಟ್ ಹರಿದು ಹಾಕಿದ್ದು, ದೀಪಿಕಾ ದಾಸ್ ಕೂಡ ಪ್ರಶಾಂತ್ ಸಂಬರಗಿ ಅವರದ್ದೇ ತಪ್ಪು ಎಂದಿದ್ದಾರೆ. ಪ್ರಶಾಂತ್ ಸಂಬರಗಿ ಅವರು ʻʻನಾನು ಯಾರನ್ನೂ ತಳ್ಳಿಲ್ಲ. ನನ್ನನ್ನು ದೂಡಿದ್ದೀರಿ. ಅನ್‌ಫೇರ್ ಆಟ ಆಡುತ್ತಿದ್ದೀರಾʼʼಎಂದು ಕೆಂಪು ಬಣ್ಣದ ಟೀಮ್ ವಿರುದ್ಧ ಕಿಡಿಕಾರಿದ್ದಾರೆ. ದೀಪಿಕಾ ದಾಸ್ ಕೂಡ ಪ್ರಶಾಂತ್ ಸಂಬರಗಿ ಅವರ ವಾದ ಒಪ್ಪಿಲ್ಲ. ಅರುಣ್ ಸಾಗರ್ ಮತ್ತು ಪ್ರಶಾಂತ್ ಸಂಬರಗಿ ಅವರ ನಡುವೆಯೂ ಗಲಾಟೆಯಾಗಿದ್ದು ಅರುಣ್ ಸಾಗರ್ ಅವರ ಕೈಗೆ ಪೆಟ್ಟಾಗಿದೆ. ಇದರ ನಡುವೆ ಎರಡೂ ತಂಡಗಳು 20 ಗೊಂಬೆಗಳನ್ನು ತಯಾರಿಸಿದ್ದು, ಟೈ ಆಗಿದೆ. ಎರಡನೇ ಸುತ್ತಿನಲ್ಲಿ ಹಸಿರು ಬಣ್ಣದ ಟೀಮ್ (ಸೂಪರ್ 6 ಟೀಮ್) 25 ಗೊಂಬೆಗಳನ್ನು ಮಾಡಿದ್ದಾರೆ. ಕೆಂಪು ಬಣ್ಣದ ಟೀಮ್ (ಗೋಲ್ಡನ್ ಗೊಂಬೆಗಳು ಟೀಮ್) 25 ಗೊಂಬೆಗಳನ್ನು ಮಾಡಿದ್ದಾರೆ.
ಏನಿದು ಟಾಸ್ಕ್?
ಬಿಗ್ ಬಾಸ್ ಮನೆಯವರನ್ನು ಅರಿತುಕೊಳ್ಳಲು ಮನೆಮಂದಿಗೆ ಟಾಸ್ಕ್ ಒಂದನ್ನು ನೀಡಿದ್ದರು. ಎರಡು ತಂಡದ ಸದಸ್ಯರು ತಮಗೆ ಬೊಂಬೆ ತಯಾರಿಸಲು ಬೇಕಾದ ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸಬೇಕು. ತಯಾರಿಸಿದ ಬೊಂಬೆಗಳನ್ನು ಎದುರಾಳಿ ತಂಡದ ಒಬ್ಬ ಸದಸ್ಯ ಮೌಲ್ಯಮಾಪಕ ಪರಿಶೀಲಿಸಿ ಬೊಂಬೆಗಳು ಸರಿಯಾಗಿದ್ದರೆ ಅನುಮೋದಿಸಲಾಗಿದೆ ಎಂಬ ಬುಟ್ಟಿಯೊಳಗೆ ಹಾಕಬೇಕು. ಸರಿಯಿಲ್ಲ ಎಂದೆನಿಸಿದರೆ ತಿರಸ್ಕರಿಸಲಾಗಿದೆ ಎನ್ನುವ ಬುಟ್ಟಿಗೆ ಹಾಕಬೇಕು. ಕಾಲ ಕಾಲಕ್ಕೆ ಅಗತ್ಯ ಇರುವ ಬೊಂಬೆಗಳ ಸಂಖ್ಯೆಯನ್ನು ಬಿಗ್ ಬಾಸ್ ತಿಳಿಸಿದಾಗ ತಂಡಗಳು ಅದನ್ನು ಪೂರೈಸಬೇಕು. ವಾರದ ಕೊನೆಯಲ್ಲಿ ಅತಿ ಹೆಚ್ಚು ಬೊಂಬೆಗಳನ್ನು ಪೂರೈಸಿದ ತಂಡ ವಿಜೇತರಾಗುತ್ತಾರೆ.
ಇದನ್ನೂ ಓದಿ | Bigg Boss Kannada | ಬುಟ್ಟಿ ಕೆಳಗಿರೋ ಬಣ್ಣದ ಕಣ್ಣು ಯಾರ ಪಾಲಾಯ್ತು?