Site icon Vistara News

Bigg Boss Kannada | ಗೊಂಬೆ ತಯಾರಿಕೆಯಲ್ಲಿ ದೊಡ್ಡ ಮಕ್ಕಳ ಜಗಳ: ಇದು ಗೊಂಬೆಯಾಟವಯ್ಯಾ!

Bigg Boss Kannada (Doll Task)

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) 52ನೇ ದಿನ ಕಾವ್ಯಶ್ರೀ ಗೌಡ ಕ್ಪಾಪ್ಟನ್ಸಿಯಲ್ಲಿ ಬೊಂಬೆ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದಾರೆ. ಈ ಟಾಸ್ಕ್‌ನಲ್ಲಿ ಕೆಂಪು ಮತ್ತು ಹಸಿರು ತಂಡಗಳ ನಡುವೆ ವಾರ್‌ ಆಗಿದೆ. ರೂಪೇಶ್‌ ರಾಜಣ್ಣ ಅವರ ಮೇಲೆ ಮನೆಮಂದಿ ಸಿಟ್ಟಾಗಿದ್ದಾರೆ.

ಏನಿದು ಟಾಸ್ಕ್‌?
ಬಿಗ್‌ ಬಾಸ್‌ ಮನೆಯವರನ್ನು ಅರಿತುಕೊಳ್ಳಲು ಮನೆಮಂದಿಗೆ ಟಾಸ್ಕ್‌ ಒಂದನ್ನು ನೀಡಿದ್ದರು. ಎರಡು ತಂಡದ ಸದಸ್ಯರು ತಮಗೆ ಬೊಂಬೆ ತಯಾರಿಸಲು ಬೇಕಾದ ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸಬೇಕು. ತಯಾರಿಸಿದ ಬೊಂಬೆಗಳನ್ನು ಎದುರಾಳಿ ತಂಡದ ಒಬ್ಬ ಸದಸ್ಯ ಮೌಲ್ಯಮಾಪಕ ಪರಿಶೀಲಿಸಿ ಬೊಂಬೆಗಳು ಸರಿಯಾಗಿದ್ದರೆ ಅನುಮೋದಿಸಲಾಗಿದೆ ಎಂಬ ಬುಟ್ಟಿಯೊಳಗೆ ಹಾಕಬೇಕು. ಸರಿಯಿಲ್ಲ ಎಂದೆನಿಸಿದರೆ ತಿರಸ್ಕರಿಸಲಾಗಿದೆ ಎನ್ನುವ ಬುಟ್ಟಿಗೆ ಹಾಕಬೇಕು. ಕಾಲ ಕಾಲಕ್ಕೆ ಅಗತ್ಯ ಇರುವ ಬೊಂಬೆಗಳ ಸಂಖ್ಯೆಯನ್ನು ಬಿಗ್‌ ಬಾಸ್‌ ತಿಳಿಸಿದಾಗ ತಂಡಗಳು ಅದನ್ನು ಪೂರೈಸಬೇಕು. ವಾರದ ಕೊನೆಯಲ್ಲಿ ಅತಿ ಹೆಚ್ಚು ಬೊಂಬೆಗಳನ್ನು ಪೂರೈಸಿದ ತಂಡ ವಿಜೇತರಾಗುತ್ತಾರೆ.

ಇದನ್ನೂ ಓದಿ | Bigg Boss Kannada | ಈ ವಾರ ನಾಮಿನೇಟ್‌ ಆದ ಸ್ಪರ್ಧಿಗಳು ಯಾರು?

ಗೊಂಬೆ ತಯಾರಿಕೆಯಲ್ಲಿ ಜಗಳ!
ಈ ಟಾಸ್ಕ್‌ ಆಡುವಾಗ ತಂಡದ ಮಧ್ಯೆ ಕಿರುಚಾಟ ಆಗಿದೆ. ಸ್ಪರ್ಧಿಗಳು ಅವರದ್ದೇ ಆದ ನಿಯಮಗಳನ್ನು ಮಾಡಿಕೊಂಡಿಕೊಂಡಿದ್ದಾರೆ. ಬಿಗ್‌ ಬಾಸ್‌ ತಮ್ಮ ತಮ್ಮ ಬೊಂಬೆಗಳ ಜವಾಬ್ದಾರಿ ಆಯಾ ತಂಡಗಳದ್ದು ಎಂದು ಹೇಳಿದ್ದಾರೆ. ಆದರೆ ಸರಿಯಾದ ನಿಯಮಗಳನ್ನು ಸ್ಪರ್ಧಿಗಳು ಪಾಲಿಸಿಲ್ಲ. ಬಳಿಕ, ಯಾರು ಯಾವಾಗ ಹೇಗೆ ಬೇಕಾದರೂ ಗೊಂಬೆಗಳನ್ನು, ಸಾಮಗ್ರಿಗಳನ್ನ ಎತ್ತಿಕೊಳ್ಳಬಹುದು ಎಂಬ ನಿಯಮವನ್ನು ಸ್ಪರ್ಧಿಗಳೇ ಜಾರಿಗೊಳಿಸಿದರು.

ಈ ನಿಯಮದ ಪ್ರಕಾರ ಎದುರಾಳಿ ಹಸಿರು ಬಣ್ಣದ ತಂಡದಲ್ಲಿದ್ದ ರಿಬ್ಬನ್‌ಗೆ ರೂಪೇಶ್ ರಾಜಣ್ಣ ಕೈಹಾಕಿದರು. ಕೆಂಪು ಬಣ್ಣದ ತಂಡ ಬಳಿಯಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾದವು. ಪ್ರಶಾಂತ್‌ ಸಂಬರಗಿ ಅವರು ವಸ್ತುಗಳೆನ್ನಲ್ಲ ಎತ್ತಿ ಬಿಸಾಡಿದ್ದಾರೆ. ಇದರಿಂದ ಕೆಂಪು ಬಣ್ಣದ ಸದಸ್ಯರು ರೂಪೇಶ್‌ ರಾಜಣ್ಣ ಅವರ ಮೇಲೆ ಕೆಂಡಾಮಂಡಲವಾಗಿದ್ದಾರೆ. ರೂಲ್ಸ್‌ ಬ್ರೇಕ್‌ ಮಾಡಿದ್ದಕ್ಕೆ ಬಿಗ್‌ ಬಾಸ್‌ ಶಿಕ್ಷೆ ನೀಡಿದ್ದು, ಎರಡೂ ತಂಡದಿಂದ ಒಬ್ಬೊಬ್ಬ ಸ್ಪರ್ಧಿಗಳನ್ನು ತೆಗೆದು ಹಾಕಿದ್ದಾರೆ. 50 ದಿನಗಳಲ್ಲಿ ಬಿಗ್‌ ಬಾಸ್‌ ಮನೆಯಲ್ಲಿ ಸದಸ್ಯರ ನಡುವೆ ಕೋಲಾಹಲ ಸೃಷ್ಟಿಯಾಗಿದೆ.

ಇದನ್ನೂ ಓದಿ | Bigg Boss Kannada | ಬುಟ್ಟಿ ಕೆಳಗಿರೋ ಬಣ್ಣದ ಕಣ್ಣು ಯಾರ ಪಾಲಾಯ್ತು?

Exit mobile version