ಬೆಂಗಳೂರು: ಬಿಗ್ ಬಾಸ್ ಸೀಸನ್9ರ (Bigg Boss Kannada) ಮೂರನೇ ವಾರ ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಅತಿಥಿಯಾಗಿ ಬಂದಿದ್ದರು. ಹಾಗೆಯೇ, ಈ ವಾರ ಕಿಚ್ಚನ ಚಪ್ಪಾಳೆಯನ್ನು ಅರುಣ್ ಸಾಗರ್ ಪಡೆದರೆ, ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಹೊರಹೊಮ್ಮಿದ್ದಾರೆ.
ಹೆಡ್ ಬುಷ್ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯದ ಡಾಲಿ ಧನಂಜಯ್ ಅವರಿಗೆ ಕಿಚ್ಚ ಸುದೀಪ್ ಹೆಡ್ ಬುಷ್ ಎಂದರೆ ಏನು? ಎಂದು ಕೇಳಿದ್ದಾರೆ. ಡಾಲಿ ಧನಂಜಯ್ ಮಾತನಾಡಿ ʻʻಹೆಡ್ ಮತ್ತು ಟೇಲ್ ಎಂದು ಅರ್ಥ. ಲೈಫ್ ಅನ್ನೋದು ಒಂದು ಗ್ಯಾಂಬ್ಲಿಂಗ್ ಎಂದರು. ನೆಗೆಟಿವ್ ಕ್ಯಾರೆಕ್ಟರ್ ಇಷ್ಟ ಎಂಬ ಪ್ರಶ್ನೆಗೆ ಹೌದು ಎಂದು ಧನಂಜಯ್ ಉತ್ತರ ನೀಡಿದರು. ಹಾಗೇ ʻʻರಿಯಲ್ ಲೈಫ್ನಲ್ಲಿ ಮಾಡದೇ ಇರುವುದನ್ನು ಮಾಡಲಿಕ್ಕೆ ಆಗುತ್ತದೆʼʼ ಎಂದು ಹೇಳಿದರು. ಅದಕ್ಕೆ ಸುದೀಪ್ ಮಾತನಾಡಿ ʻʻರಿಯಲ್ ಲೈಫ್ನಲ್ಲಿ ಎಲ್ಲವೂ ಮಾಡುತ್ತೀರಲ್ಲʼʼಎಂದು ಕಾಲೆಳೆದಿದ್ದಾರೆ.
ಇದನ್ನೂ ಓದಿ | Bigg Boss Kannada | ಗೋಲ್ಡ್ ಮೈನ್ ಸ್ಟ್ರ್ಯಾಟಜಿ ಸರಿ ಇತ್ತಾ? ದರ್ಶ್ ತಪ್ಪೊಪ್ಪಿಕೊಂಡಿದ್ದು ಏಕೆ?
ಡಾಲಿ ಧನಂಜಯ್ ರಾತ್ರಿ ಎಷ್ಟೊತ್ತು ಎಚ್ಚರ ಇರುತ್ತಾರೆ. ಆದರೆ ಬೆಳಗ್ಗೆ ಏಳೋದು ಕಷ್ಟ ಎಂಬ ಪ್ರಶ್ನೆಗೆ ಡಾಲಿ ಪ್ರತಿಕ್ರಿಯೆ ನೀಡಿ ʻʻರಾತ್ರಿ ಸೆಲೆಬ್ರೆಷನ್ ಇದ್ದ ಕಾರಣ ಒಮ್ಮೊಮ್ಮೆ ಲೇಟ್ ಆಗುತ್ತದೆʼʼ ಎಂದಿದ್ದಾರೆ. ಅದಕ್ಕೆ ಕಿಚ್ಚ ವಾರದ ಆರೂ ದಿನವೂ ಸೆಲೆಬ್ರೆಷನ್ ಇರುತ್ತಾ? ಎಂದು ಕೇಳಿದ್ದಾರೆ. ನಟ ಧನಂಜಯ್ ನಿರ್ಮಾಪಕ ಧನಂಜಯ್ಗೆ ಎಷ್ಟು ಕಾಟ ಕೊಟ್ಟಿದ್ದಾರೆ? ಎಂದು ಕಿಚ್ಚನ ಪ್ರಶ್ನೆಗೆ ʻʻನಿರ್ಮಾಪಕ ಧನಂಜಯ್ ಈ ನಟ ಧನಂಜಯ್ನನ್ನು ಇಟ್ಟುಕೊಂಡು ಯಾವತ್ತೂ ಸಿನಿಮಾ ಮಾಡುವುದಿಲ್ಲʼʼ ಎಂದು ಹೇಳಿದ್ದಾರೆ.
ಹಾಗೇ ಕಿಚ್ಚ ಸುದೀಪ್ ಡಾಲಿ ಧನಂಜಯ್ ಅವರಿಗೆ ಸಿಂಗಲ್ಲಾ ನೀವು? ಎಂದು ತಮಾಷೆ ಮಾಡಿದ್ದಾರೆ. ಡಾಲಿ ಹೌದು ಎಂದು ಹೇಳಿದರು. ಡಾಲಿ ಧನಂಜಯ್ ಹೆಡ್ ಬುಷ್ ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೇ ನೋಡಿ ಎಂದು ವೇದಿಕೆ ಮೇಲೆ ಹೇಳಿದ್ದಾರೆ. ಕಿಚ್ಚ ಸುದೀಪ್ ಕೂಡ ಚಿತ್ರತಂಡಕ್ಕೆ ಶುಭಹಾರೈಸಿದರು.
ಇದನ್ನೂ ಓದಿ | Bigg Boss Kannada | ಮನೆಯಿಂದ ಹೊರನಡೆದ ದರ್ಶ್ ಚಂದ್ರಪ್ಪ