Site icon Vistara News

Bigg Boss Kannada | ಬಿಗ್‌ ಬಾಸ್‌ ಮನೆಯಿಂದ ಈ ಇಬ್ಬರಿಗೆ ಗೇಟ್‌ ಪಾಸ್‌?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada) ಈಗಾಗಲೇ ಮುಕ್ತಾಯ ಹಂತಕ್ಕೆ ಬಂದಿದ್ದು, ಒಟಿಟಿ ಶೋ ಮುಕ್ತಾಯಕ್ಕೆ ಇನ್ನು ಎರಡೇ ವಾರ ಬಾಕಿ ಇದೆ. ಈ ವಾರ ರಾಕೇಶ್‌ ಅಡಿಗ, ಸಾನ್ಯ, ಸೋನು ಗೌಡ, ಜಶ್ವಂತ್‌, ನಂದಿನಿ ಮತ್ತು ಜಯಶ್ರೀ ನಾಮಿನೇಟ್‌ ಆಗಿದ್ದಾರೆ. ಕಳೆದ ವಾರ ಆರ್ಯವರ್ಧನ್‌ ಗುರೂಜಿ ಎರಡು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗುತ್ತಾರೆ ಎಂದು ಊಹೆ ಮಾಡಲಾಗಿತ್ತು. ಆದರೆ ಉದಯ್‌ ಸೂರ್ಯ ಮಾತ್ರ ಹೊರ ನಡೆದಿದ್ದರು. ಈ ವಾರದ ಎಲಿಮಿನೇಶನ್‌ ಮತ್ತಷ್ಟು ಕುತೂಹಲ ಹುಟ್ಟಿಸಿದೆ.

ಆದರೆ ಈ ವಾರ ಎರಡು ಸ್ಪರ್ಧಿಗಳು ಎಲಿಮಿನೇಟ್‌ ಆಗೇ ಆಗುತ್ತಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ. ಮಾಡೆಲ್​ ಆಗಿರುವ ಅಕ್ಷತಾ ಕುಕ್ಕಿ ಹಾಗೂ ಸಾನ್ಯ ಮನೆಯಿಂದ ಹೊರಗೆ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ | Bigg Boss Kannada | ಕಿಚ್ಚನ ಹುಟ್ಟುಹಬ್ಬದ ಜತೆ ವಾರದ ಕತೆ: ವೀಕೆಂಡ್‌ ಕತೆಗಳ ಫೋಟೊ ಝಲಕ್‌!

ಮಾಡೆಲ್​ ಆಗಿದ್ದ ಅಕ್ಷತಾ ಕುಕ್ಕಿ ಚಿತ್ರರಂಗದಲ್ಲೂ ಅನೇಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ಮೊದಲಿಗೆ ಫ್ಯಾಶನ್ ಶೋನಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದುಕೊಂಡ ಅಕ್ಷತಾಗೆ ಸಿನಿಮಾ ಆಫರ್ ಕೂಡ ಬಂದು ಅದರಲ್ಲಿ ಯಶಸ್ಸು ಸಾಧಿಸಿದ್ದರು. ಸೈಡ್​ ಆ್ಯಕ್ಟರ್ ಆಗಿಯೂ ಇವರು ನಟಿಸಿದ್ದಾರೆ. ಆದರೆ, ಬಿಗ್‌ ಬಾಸ್‌ನಲ್ಲಿ ಇವರ ಬಗ್ಗೆ ಹಲವಾರು ನೆಗೆಟಿವ್‌ ಕಮೆಂಟ್‌ಗಳು ಸ್ಪರ್ಧಿಗಳಿಂದ ಕೇಳಿ ಬಂದಿತ್ತು. ಅಕ್ಷತಾ ನನಗೆ ಸ್ವಲ್ಪವೂ ಇಷ್ಟವಿಲ್ಲ ಎಂದು ಜಯಶ್ರೀ ಈ ಹಿಂದೆ ಹೇಳಿಕೊಂಡಿದ್ದರು.

ಅಕ್ಷತಾ ನನಗೆ ಸ್ವಲ್ಲವೂ ಇಷ್ಟವಿಲ್ಲ ಎಂದಿದ್ದ ಜಯಶ್ರೀ
ʻʻಅಕ್ಷತಾ ಮನೆಯ ಸದಸ್ಯರೊಂದಿಗೆ ನ್ಯೂಟ್ರಲ್‌ ಆಗುತ್ತಿದ್ದಾರೆ. ಎಲ್ಲರೊಂದಿಗೆ ಚೆನ್ನಾಗಿ ಇರಲು ಪ್ರಯತ್ನಿಸುತ್ತಿದ್ದಾರೆ. ಅವರ ಈ ನಡೆ ಸರಿಯಲ್ಲ. ನನಗೆ ಆಕೆ ಕಂಡರೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಆದರೆ, ಚೈತ್ರಾ ನನಗೆ ತುಂಬಾ ಇಷ್ಟ. ಏಕೆಂದರೆ ಸ್ಪರ್ಧಿಗಳು ನನಗೆ ಟಾರ್ಗೆಟ್‌ ಮಾಡಿದರೂ ಅವರು ನನ್ನ ಜತೆ ಇರುತ್ತಾರೆ. ಒಂದು ವೇಳೆ ನಾನೂ ತಪ್ಪು ಮಾಡಿದರೂ ನನ್ನನ್ನು ವಹಿಸಿಕೊಂಡು ಮಾತನಾಡುತ್ತಾರೆ. ನಾನು ಫ್ರೆಂಡ್‌ಶಿಪ್‌ ಮಾಡಿಕೊಳ್ಳುವುದು ತುಂಬಾ ರೇರ್‌. ಆದರೆ, ಒಂದು ಸಲ ಒಬ್ಬರೊಂದಿಗೆ ಕ್ಲೋಸ್‌ ಆದೆನೆಂದರೆ, ಅವರನ್ನು ಯಾವತ್ತೂ ಬಿಟ್ಟು ಕೊಡುವುದಿಲ್ಲʼʼ ಎಂದು ಆರ್ಯವರ್ಧನ್‌ ಗುರೂಜಿ ಅವರೊಂದಿಗೆ ಹೇಳಿಕೊಂಡಿದ್ದರು.

ಸಾನ್ಯ ಔಟ್‌ ಆದರೆ ಜಶ್ವಂತ್‌-ನಂದಿನಿ ರಿಲೇಶನ್‌ಶಿಪ್‌ ಉಳಿಯುತ್ತೆ ಎಂದರು ನೆಟ್ಟಿಗರು!
ನಂದಿನಿ-ಜಶ್ವಂತ್‌ ಮನಸ್ತಾಪ ಹೆಚ್ಚಾಗಿದೆ. ಸಾನ್ಯ ವಿಚಾರವಾಗಿಯೇ ಜಶ್ವಂತ್‌ ಮತ್ತು ನಂದಿನಿ ಒಬ್ಬರಿಗೊಬ್ಬರು ಕಿತ್ತಾಡಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ. ಹಾಗೆಯೇ ಸಾನ್ಯ ಮನೆಯಿಂದ ಹೊರ ನಡೆದರೆ ಇವರಿಬ್ಬರೂ ಟಾಸ್ಕ್‌ನಲ್ಲಿ ಒಟ್ಟಾಗಿ ನಿಭಾಯಿಸುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಮೊದ ಮೊದಲು ಬಿಗ್‌ ಬಾಸ್‌ನಲ್ಲಿ ಸಾನ್ಯ ಟಾಸ್ಕ್‌ಗಳಲ್ಲಿ ಹೆಚ್ಚಿನ ಗಮನ ಕೊಡುತ್ತಿದ್ದರು. ನಂತರದ ದಿನಗಳಲ್ಲಿ ರೂಪೇಶ್‌ ಜತೆ ಹೆಚ್ಚು ಸಮಯ ಕಳೆಯುತ್ತಿದುದನ್ನು ಕಂಡ ಸೋಮಣ್ಣ ಕ್ಲಾಸ್‌ ತೆಗೆದುಕೊಂಡಿದ್ದರು. ಸಾನ್ಯ, ರೂಪೇಶ್‌, ಜಶ್ವಂತ್‌ ಮತ್ತು ನಂದಿನಿ ಗ್ರೂಪಿಸಮ್‌ ಮಾಡುತ್ತಿದ್ದಾರೆ ಎಂಬ ಮಾತುಗಳು ಬಿಗ್‌ ಬಾಸ್‌ ಮನೆಯಲ್ಲಿ ಕೇಳಿ ಬಂದಿತ್ತು. ಇದೀಗ ನಾಮಿನೇಟ್‌ ಆದವರಲ್ಲಿ ಈ ವಾರ ಯಾರು ಮನೆಯಿಂದ ಹೊರಗೆ ಬರಲಿದ್ದಾರೆ ಎಂಬುದು ಕಿಚ್ಚನ ವೀಕೆಂಡ್‌ ಪಂಚಾಯಿತಿಯಲ್ಲಿ ರಿವೀಲ್‌ ಆಗಲಿದೆ.

ಇದನ್ನೂ ಓದಿ | Bigg Boss Kannada | ಫಿನಾಲೆಗೆ ಇನ್ನು ಎರಡೇ ಹೆಜ್ಜೆ: ಮೆಟ್ಟಿಲು ಹತ್ತೋರು ಯಾರು? ಎಡವೋರು ಯಾರುBigg Boss Kannada ? 

Exit mobile version