Site icon Vistara News

BBK SEASON 10: ಅಮ್ಮ ಎಂದರೆ ಏನೋ ಹರುಷವು! ಫ್ಯಾಮಿಲಿ ಕಂಡು ಸ್ಪರ್ಧಿಗಳು ಭಾವುಕ!

Bigg Boss Kannada Family Week Contestants get emotional

ಬಿಗ್‌ ಬಾಸ್ ಸೀಸನ್‌ 10 (BBK SEASON 10) 12ನೇ ವಾರಕ್ಕೆ ಕಾಲಿಟ್ಟಿದೆ. ಕೆಲವೇ ವಾರಗಳಲ್ಲಿ ಸೀಸನ್‌ ಮುಕ್ತಾಯಗೊಳ್ಳಲಿದೆ. ಇದೀಗ ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ಸರ್‌ಪ್ರೈಸ್‌ ನೀಡಿದ್ದಾರೆ.

80 ದಿನಗಳ ಬಳಿಕ ಬಿಟ್ಟು ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಕುಟುಂಬದವರನ್ನು ಭೇಟಿ ಮಾಡುವ ಅವಕಾಶ ಕೊಟ್ಟಿದ್ದಾರೆ ಬಿಗ್‌ ಬಾಸ್‌.

ವರ್ತೂರು ಸಂತೋಷ್ ತಾಯಿ, ನಮ್ರತಾ ತಾಯಿ ದೊಡ್ಮನೆ ಒಳಗೆ ಆಗಮಿಸುತ್ತಿದ್ದಂತೆ ನಮ್ರತಾ ಭಾವುಕರಾದರು. ಅಮ್ಮನನ್ನು ಬಿಗಿದಪ್ಪಿಕೊಂಡರು.

ವರ್ತೂರ್‌ ಸಂತೋಷ್‌ ಕೂಡ ಅಮ್ಮನನ್ನು ಅಪ್ಪಿಕೊಂಡರು. ಅದೇ ರೀತಿ ವಿನಯ್‌ ಕೂಡ ವರ್ತೂರ್‌ ಅವರ ಅಮ್ಮನ ಜತೆ ಮಾತನಾಡಿದ್ದಾರೆ.

ಉಳಿದ ಸ್ಪರ್ಧಿಗಳು, ಡ್ರೋನ್‌, ಸಂಗೀತಾ ಹೀಗೆ ತಂದೆ ತಾಯಿಯ ಆಗಮನಕ್ಕೆ ಎಲ್ಲರೂ ಕಾದಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version