Site icon Vistara News

Bigg Boss Kannada | ಆಟದಲ್ಲಿ ಫೇವರ್ ಗಲಾಟೆ: ಮನೆ ಬಿಟ್ಟು ಹೊರಟ ರೂಪೇಶ್ ರಾಜಣ್ಣ?

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಅನುಪಮಾ ಕ್ಯಾಪ್ಟನ್‌ ಅಗಿದ್ದಾರೆ. ಅವರ ನೇತೃತ್ವದಲ್ಲಿ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್ಸಿ ಟಾಸ್ಕ್‌ಗಳು ನಡೆಯುತ್ತಿವೆ. ಮನೆಯಲ್ಲಿ ಕ್ಯಾಪ್ಟನ್‌ ಅನುಪಮಾ ಒಬ್ಬರ ಪರ ಆಡುತ್ತಿದ್ದಾರೆ ಎಂಬ ಕಾರಣಕ್ಕೆ ರೂಪೇಶ್ ರಾಜಣ್ಣ ತಮ್ಮ ಬ್ಯಾಗ್ ತಗೆದುಕೊಂಡು ದೊಡ್ಮನೆಯಿಂದ ಹೊರ ಹೋಗುವುದಾಗಿ ಅಬ್ಬರಿಸಿದ್ದಾರೆ.

ಈ ವಾರ ಸ್ಪರ್ಧಿಗಳ ಆಯ್ಕೆಯಂತೆ ಅವರ ಎದುರಾಳಿ ಜತೆ ಆಡಬೇಕು. ಇದರ ಅನುಸಾರ ಪ್ರತಿ ಬಾರಿ ಬಿಗ್‌ ಬಾಸ್‌ ಅಲರ್ಟ್‌ ಸೌಂಡ್‌ ಕೊಟ್ಟಾಗ , ಸದಸ್ಯರು ಬಜರ್‌ ಒತ್ತಬೇಕು. ಯಾರು ಮೊದಲು ಬಜರ್‌ ಒತ್ತುತ್ತಾರೋ ಅವರು ತನ್ನ ಪ್ರತಿ ಸ್ಪರ್ಧಿಗಳನ್ನು ಆರಿಸಿಕೊಳ್ಳುವ ಅವಕಾಶ ಪಡೆಯುತ್ತಾರೆ. ಟಾಸ್ಕ್‌ನಲ್ಲಿ ಗೆದ್ದ ಸದಸ್ಯ ವಿಶೇಷ ಪವರ್‌ ಅನ್ನು ಪಡೆಯುತ್ತಾನೆ. ಅತಿ ಹೆಚ್ಚು ಬಾರಿ ಬಜರ್‌ ಒತ್ತುವ ಸದಸ್ಯ ಮುಂದಿನ ಬಾರಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುತ್ತಾರೆ.

ಈ ಟಾಸ್ಕ್‌ ಆಗುವಾಗ ಆರಂಭದಿಂದಲೂ ರೂಪೇಶ್‌ ರಾಜಣ್ಣ ಅವರು ಅನುಪಮಾ ಅವರು ಫೇವರ್‌ ಗೇಮ್‌ ಆಡುತ್ತಿದ್ದಾರೆ ಎಂದು ಹೋರಾಟಕ್ಕೆ ಇಳಿದಿದ್ದರು. ಅರುಣ್‌ ಸಾಗರ್‌ ಆಟದಲ್ಲಿಯೂ ಧ್ವನಿ ಎತ್ತಿದ್ದಾಗ, ಅನುಪಮಾ ಮತ್ತು ರೂಪೇಶ್‌ ರಾಜಣ್ಣ ಮಧ್ಯೆ ಗಲಾಟೆ ತಾರರಕ್ಕೇರಿತು. ರೂಪೇಶ್‌ ರಾಜಣ್ಣ ಬ್ಯಾಗ್ ಎತ್ತಿಕೊಂಡು ಮನೆಯಿಂದ ತಮ್ಮನ್ನು ಕಳುಹಿಸುವಂತೆ ಮನೆಯ ಮುಖ್ಯ ಬಾಗಿಲಿನವರೆಗೂ ಬಂದರು. ಮೊದಲು ಬಜರ್ ಮುಟ್ಟಿದ್ದು ನಾನೇ ಪ್ರಶಾಂತ್‌ ಸಂಬರಗಿ ಅಲ್ಲ ಎಂದು ರೂಪೇಶ್‌ ರಾಜಣ್ಣ ವಾದ ಮಾಡಿದರು.

ಇದನ್ನೂ ಓದಿ | Bigg Boss Kannada | ಕಾಂಪಿಟೇಟರ್ ಅಲ್ಲ ಅಂತ ಹೇಳೋಕೂ ಮನೆಯಲ್ಲಿ ಬಿಗ್ ಕಾಂಪಿಟೇಶನ್!

ಸಂಬರಗಿ ಅವರ ಬೆನ್ನಿಗೆ ನಿಂತು ಅವರಿಗೆ ಕ್ಯಾಪ್ಟನ್ ಅನುಪಮಾ ಗೌಡ ಸಪೋರ್ಟ್ ಮಾಡಿದ್ದು ರೂಪೇಶ್ ರಾಜಣ್ಣಗೆ ಕೋಪ ತರಿಸಿದೆ. ಹಾಗಾಗಿ ಇಬ್ಬರ ಮಧ್ಯೆ ಮಾತಿನ ಚಕಮಕಿಯೇ ನಡೆಯಿತು. ಈ ರೀತಿಯಾದರೆ ನಾನು ಮನೆಯಲ್ಲಿ ಇರಲಾರೆ ಎಂದು ಬ್ಯಾಗ್ ಸಮೇತ ಹೊರಟು ನಿಂತರು. ಅನುಪಮಾ ಗೌಡ ಮಾತ್ರ ತಾವೇನೂ ತಪ್ಪು ಮಾಡಿಲ್ಲ, ಸುಮ್ಮನೆ ರೂಪೇಶ್ ರಾಜಣ್ಣ ಕೂಗಾಡಿದ್ದರು ಎಂದು ಮನೆಮಂದಿ ಮುಂದೆ ಕಣ್ಣೀರು ಹಾಕಿದರು. ಉಳಿದ ಸ್ಪರ್ಧಿಗಳು ರೂಪೇಶ್‌ ರಾಜಣ್ಣ ಅವರಿಗೆ ಸಮಾಧಾನ ಮಾಡಿದ್ದು, ರೂಪೇಶ್‌ ರಾಜಣ್ಣ ಸುಮ್ಮನಾದರು.

ಮೊದಲು ರೂಪೇಶ್‌ ಶೆಟ್ಟಿ ಬಜರ್‌ ಒತ್ತಿದ್ದು, ಪ್ರತಿಸ್ಪರ್ಧಿಯಾಗಿ ಆರ್ಯವರ್ಧನ್‌ ಗುರೂಜಿ ಜತೆ ಆಡಿದರು. ʻಪವರ್‌ ಸೇತುವೆʼ ಎನ್ನುವ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದರು. ಇದರ ಅನುಸಾರ ಅಪೂರ್ಣವಾದ ಸೇತುವೆಯ ಎರಡು ತುದಿಯಲ್ಲಿ ನಿಂತು ತಮಗೆ ಮೀಸಲಿರುವ ಹಲಗೆಯನ್ನು ಜೋಡಿಸುತ್ತಾ ಕಾಲುದಾರಿಯನ್ನು ನಿರ್ಮಿಸಬೇಕು. ಈ ಟಾಸ್ಕ್‌ನಲ್ಲಿ ಆರ್ಯವರ್ಧನ್‌ ಗುರೂಜಿ ವಿಜೇತರಾಗಿ ಹೊರಹೊಮ್ಮಿದರು.

ಟಿಷ್ಯೂ ಪೇಪರ್‌ ಮತ್ತು ಗಾಜಿನ ಲೋಟದ ಟಾಸ್ಕ್‌ನಲ್ಲಿ ಪ್ರಶಾಂತ್‌ ಸಂಬರಗಿ ಹಾಗೂ ಕಾವ್ಯಶ್ರೀ ಆಡಿದ್ದು ಪ್ರಶಾಂತ್‌ ಸಂಬರಗಿ ವಿಜೇತರಾದರು. ಮೂರನೇ ಬಾರಿ ಅರುಣ್‌ ಸಾಗರ್‌ ಬಜರ್‌ ಒತ್ತಿದ ಕಾರಣ ರೂಪೇಶ್‌ ಶೆಟ್ಟಿ ಅವರನ್ನು ಎದುರಾಳಿಯಾಗಿ ಆಯ್ಕೆ ಮಾಡಿದರು. ʻಬಿರುಗಾಲಿʼ ಟಾಸ್ಕ್‌ನಲ್ಲಿ ಅರುಣ್‌ ಸಾಗರ್‌ ವಿಜೇತರಾಗಿದ್ದು ವಿಶೇಷ ಪವರ್‌ ಪಡೆದರು.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಲ್ಲಿ ಅರುಣ್‌ ಸಾಗರ್‌ ಅಂಥೋನಿ ಆದ್ರೆ ದೀಪಿಕಾ ದಾಸ್‌ ಮಿಸ್‌ ರೀಟಾ!

Exit mobile version