Site icon Vistara News

Bigg Boss Kannada | ಫಿನಾಲೆ ದಿನಾಂಕ ಬದಲಾವಣೆ: ಮಿಡ್‌ ವೀಕ್‌ನಲ್ಲಿ ಎಲಿಮಿನೇಟ್‌ ಆಗೋದು ಯಾರು?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಅಮೂಲ್ಯ ಗೌಡ ಹಾಗೂ ಅರುಣ್‌ ಸಾಗರ್‌ ಮನೆಯಿಂದ ಹೊರ ನಡೆದಿದ್ದಾರೆ. ಈಗಾಗಲೇ ರೂಪೇಶ್‌ ಶೆಟ್ಟಿ ಹಾಗೂ ರಾಕೇಶ್‌ ಅಡಿಗ ನೇರವಾಗಿ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಸದ್ಯದಲ್ಲೇ ಇನ್ನೊಂದು ಎಲಿಮಿನೇಷನ್‌ ನಡೆಯಲಿದೆ.

ಒಬ್ಬ ಸ್ಪರ್ಧಿ ಟ್ರೋಫಿಯನ್ನು ಎತ್ತಿ ಹಿಡಿಯಲಿದ್ದಾರೆ. ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ, ದೀಪಿಕಾ ದಾಸ್, ದಿವ್ಯಾ ಉರುಡುಗ ನಡುವೆ ಸ್ಪರ್ಧೆ ಮುಂದುವರೆದಿದೆ. ಮನೆಯಲ್ಲಿ ಇರುವ 6 ಜನರ ಪೈಕಿ ಒಬ್ಬರು ಮಿಡ್ ವೀಕ್‌ ಎಲಿಮಿನೇಷನ್‌ನಲ್ಲಿ ಔಟ್ ಆಗಲೇಬೇಕಿದೆ. ಈ 6 ಮಂದಿ ಪೈಕಿ ಒಬ್ಬರು ಗ್ರ್ಯಾಂಡ್ ಫಿನಾಲೆಗೂ ಮುನ್ನ ಎಲಿಮಿನೇಟ್ ಆಗಲಿದ್ದಾರೆ. ವಾರದ ಮಧ್ಯ ಭಾಗದಲ್ಲಿ, ಮಧ್ಯ ರಾತ್ರಿ ನಡೆಯುವ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಒಬ್ಬ ಸ್ಪರ್ಧಿ ಔಟ್ ಆಗಲಿದ್ದಾರೆ.

ಇದನ್ನೂ ಓದಿ | Bigg Boss Kannada | ಫಿನಾಲೆಗೆ ಹೋಗುವ ಇಬ್ಬರು ಸ್ಪರ್ಧಿಗಳ ಹೆಸರು ರಿವೀಲ್‌

‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಬರುವ ಶುಕ್ರವಾರ ಹಾಗೂ ಶನಿವಾರ ನಡೆಯಲಿದೆ.
‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಯ ಮೊದಲ ಭಾಗ ಶುಕ್ರವಾರ (ಡಿಸೆಂಬರ್ 30) ಸಂಜೆ 7:30ಕ್ಕೆ ಪ್ರಸಾರವಾಗಲಿದೆ. ಗ್ರ್ಯಾಂಡ್ ಫಿನಾಲೆಯ ಎರಡನೇ ಭಾಗ ಶನಿವಾರ (ಡಿಸೆಂಬರ್ 31) ಸಂಜೆ ಪ್ರಸಾರವಾಗಲಿದೆ.

ಇದನ್ನೂ ಓದಿ | Bigg Boss Kannada | ಈ ವಾರ ಡಬಲ್‌ ಎಲಿಮಿನೇಷನ್‌: ಮನೆಯಿಂದ ಹೊರನಡೆದ ಅಮೂಲ್ಯ ಗೌಡ, ಅರುಣ್‌ ಸಾಗರ್‌!

Exit mobile version