ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ (Bigg Boss Kannada) ಎಂದು ಹೆಸರು ಪಡೆದ ಬಿಗ್‌ಬಾಸ್ ಶೋ ಇದುವರೆಗೆ ಎಂಟು ಸೀಸನ್ ಯಶಸ್ವಿಯಾಗಿ ಪೂರೈಸಿದೆ. ಈಗ ಹೊಸತಾಗಿ ಒಟಿಟಿಯಲ್ಲಿ ಪ್ರದರ್ಶನಗೊಳ್ಳುತ್ತಿರುವ ಮಿನಿ “ಬಿಗ್ ಬಾಸ್” ಬಿಗ್ ಹಿಟ್ ಕಂಡಿದೆ ಎಂಬ ಖುಷಿಯ ಸಂಗತಿಯನ್ನು ಸ್ವತಃ ಕಿಚ್ಚ ಸುದೀಪ್ ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್ ಶೋ ಇದುವರೆಗೆ ಎಂಟು ಸೀಸನ್ ಯಶಸ್ವಿಯಾಗಿ ಪೂರೈಸಿದೆ. ಒಂಬತ್ತನೇ ಸೀಸನ್ ಮುಂಚೆಯೇ ಬಿಗ್‌ಬಾಸ್ ಕನ್ನಡ ಒಟಿಟಿ ಶುರು ಆಗಿದೆ. ಈಗಾಗಲೇ ಒಂದು ವಾರ ಕಳೆದಿದೆ. ಬೇರೆ ಭಾಷೆಗಳಲ್ಲಿ ಬಿಗ್‌ಬಾಸ್ ಒಟಿಟಿ ಹೋಲಿಸಿದರೆ ಕನ್ನಡದ ಒಟಿಟಿ ಶೋಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಬಿಗ್‌ಬಾಸ್ ಕನ್ನಡ ಒಟಿಟಿಯನ್ನು ಲಕ್ಷಾಂತರ ಜನರು ನೋಡುತ್ತಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಅವರೇ ಹೇಳಿಕೊಂಡಿದ್ದಾರೆ.
ಒಟಿಟಿ ವಿಕ್ಷಣೆಯ ನಿಖರ ಮಾಹಿತಿ ಲಭ್ಯವಿಲ್ಲ
ʻʻಮೊದಲನೇ ಸಲ ಬಿಗ್‌ಬಾಸ್ ಕನ್ನಡ ಒಟಿಟಿ ಮಾಡುವಾಗ ಭಯ ಇತ್ತು. ಜನರು ಇದನ್ನು ಹೇಗೆ ಸ್ವೀಕರಿಸುತ್ತಾರೋ ಎನ್ನುವ ಆತಂಕ ಕಾಡಿತ್ತು. ಒಂದು ವಾರದ ನಂತರ ಭಯ ಹೋಯಿತು. ಸಾವಿರ ಸಂಖ್ಯೆಯಲ್ಲಿ ಬಂದು ಲಕ್ಷಗಳಲ್ಲಿ ಈ ಪ್ರೋಗ್ರಾಂ ನೋಡುತ್ತಾರೆ ಎನ್ನುವ ನಂಬಿಕೆ ಇತ್ತು. ನಂತರ ಮಿಲಿಯನ್ ಲೆಕ್ಕದಲ್ಲಿ ನೋಡಿದ್ದೀರಿ. ಈ ಸಂತೋಷವನ್ನು ನಮ್ಮದಾಗಿಸಿದ್ದಕ್ಕೆ ಧನ್ಯವಾದʼʼ ಎಂದು ಬಿಗ್‌ಬಾಸ್ ವೇದಿಕೆಯಲ್ಲಿ ಸುದೀಪ್ ಹೇಳಿಕೊಂಡಿದ್ದಾರೆ. ಹೀಗಾಗಿ ಲಕ್ಷಾಂತರ ಮಂದಿ ಒಟಿಟಿಯಲ್ಲಿ ವೀಕ್ಷಣೆ ಮಾಡಿದ್ದಾರೆಂದು ಹೇಳಿಕೊಂಡಿದ್ದು, ನಿಖರವಾಗಿ ಎಷ್ಟು ಲಕ್ಷ ಮಂದಿ ನೋಡಿದ್ದಾರೆ ಎಂಬ ಮಾಹಿತಿಯು ಇನ್ನೂ ಬಹಿರಂಗಗೊಂಡಿಲ್ಲ.
ಮೊದಲ ವಾರವೇ ಮನೆಯಿಂದ ಕಿರಣ್ ಯೋಗೇಶ್ವರ್ ಔಟ್ ಆಗಿದ್ದಾರೆ. ಎರಡನೇ ವಾರ ಬಿಗ್‌ಬಾಸ್ ಮನೆಯಿಂದ ಅಕ್ಷತಾ, ನಂದಿನಿ, ಸೋನು, ಸ್ಫೂರ್ತಿ ಗೌಡ, ಸಾನ್ಯ ಅಯ್ಯರ್, ಜಯಶ್ರೀ ಆರಾಧ್ಯ, ಸೋಮಣ್ಣ ಮಾಚಿಮಾಡ, ರಾಕೇಶ್ ಅಡಿಗ ಮತ್ತು ಆರ್ಯವರ್ಧನ್ ಗುರೂಜಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಯಾರು ಔಟ್ ಆಗುತ್ತಾರೆ ಎಂಬುದನ್ನು ನೋಡಬೇಕಿದೆ.
ಇದನ್ನೂ ಓದಿ | Bigg Boss Kannada | ಹಾಸಿಗೆ ಇದ್ದಷ್ಟು ಕಾಸು ಚಾಚು ಅಂದ್ರು ಸೋನು: ಜಾಗರಣೆ ಮಾಡ್ತಿರೋದ್ಯಾಕೆ?