Site icon Vistara News

Bigg Boss Kannada | ಮೊದಲ ದಿನವೇ ಜಶ್ವಂತ್ ಬೋಪಣ್ಣಗೆ ಸರ್ಪ್ರೈಸ್ ನೀಡಿದ ಬಿಗ್‌ ಬಾಸ್‌!

Bigg Boss Kannada

ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆದ ಬಿಗ್‌ ಬಾಸ್‌ (Bigg Boss Kannada) ಈಗ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿದೆ. ಒಟ್ಟು 16 ಅಭ್ಯರ್ಥಿಗಳು ಈ ಶೋನಲ್ಲಿ ಭಾಗವಹಿಸಿದ್ದಾರೆ. ಮೊದಲ ದಿನವೇ ಬಿಗ್‌ ಬಾಸ್‌ ಭಾನುವಾರ (ಆ.7) ಫಿಟ್‌ನೆಸ್ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಸ್ಟಾರ್ ಜಶ್ವಂತ್ ಬೋಪಣ್ಣ ಅವರಿಗೆ ಸರ್ಪ್ರೈಸ್ ನೀಡಿದೆ.

ಭಾನುವಾರ ಜಶ್ವಂತ್ ಬೋಪಣ್ಣ ಅವರ ಹುಟ್ಟು ಹಬ್ಬದ ದಿನವಾಗಿದ್ದು, ಬಿಗ್‌ ಬಾಸ್‌ ಕೇಕ್‌ ನೀಡಿ ಮನೆಯಲ್ಲಿ ಖುಷಿ ಹೆಚ್ಚಿಸಿದೆ. ಬಿಗ್‌ ಬಾಸ್‌ ಮನೆಯವರೆಲ್ಲರೂ ಸಂತಸದಿಂದ ಜಶ್ವಂತ್ ಬೋಪಣ್ಣ ಅವರಿಗೆ ಕೇಕ್‌ ತಿನ್ನಿಸಿ ಶುಭ ಹಾರೈಸಿದ್ದಾರೆ. ಈಗಾಗಲೇ ಮನೆಯಲ್ಲಿ ಸ್ಫರ್ಧಿಗಳು ಅಡುಗೆಯಲ್ಲಿ ನಿರತರಾಗಿದ್ದು, ಜಶ್ವಂತ್‌ ಅವರ ಬರ್ತಡೇ ಖುಷಿಯಲ್ಲಿದ್ದಾರೆ.

ಇದನ್ನೂ ಓದಿ | Bigg Boss Kannada | ಈ ಬಾರಿಯ ಬಿಗ್‌ ಬಾಸ್‌ ಮನೆಯಲ್ಲಿರುವ 16 ಜನರು ಯಾರು?

ಜಶ್ವಂತ್ ತಮ್ಮ ವೃತ್ತಿಜೀವನವನ್ನು ಫಿಟ್ನೆಸ್ ತರಬೇತುದಾರ ಮತ್ತು ಫಿಟ್ನೆಸ್ ಮಾಡೆಲ್ ಆಗಿ ಪ್ರಾರಂಭಿಸಿ ಪ್ರಸಿದ್ಧಿ ಪಡೆದಿದ್ದಾರೆ. ಅನೇಕರು ಇವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೆ ಸರಳವಾದ ಡ್ಯಾನ್ಸ್ ಸ್ಟೆಪ್ಸ್ ಮೂಲಕ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ಹೇಳಿಕೊಡುತ್ತಾರೆ. ಬಿಗ್‌ ಬಾಸ್‌ನಲ್ಲಿ ಇವರ ಪರ್ಫಾರ್ಮೆನ್ಸ್‌ ಹೇಗಿರಲಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ.

ಇದನ್ನೂ ಓದಿ | Bigg Boss Kannada | ಜೋಶ್‌ ಸಿನಿಮಾ ಖ್ಯಾತಿಯ ರಾಕೇಶ್‌ ಅಡಿಗ ಬಿಗ್‌ ಬಾಸ್‌ ಮನೆಗೆ ಪ್ರವೇಶ

Exit mobile version