Site icon Vistara News

Bigg Boss Kannada | ಜಡೆಗಳಿಂದ ಸಖತ್‌ ಪ್ರಾಬ್ಲಮ್‌ ಅಂದ್ರು ಪ್ರಶಾಂತ್‌: ಆಟದಲ್ಲಿ ನೀವೇ ಹೀರೊ ಎಂದ ಗುರೂಜಿ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ (Bigg Boss Kannada) ಮನೆಯಲ್ಲಿ ಗೋಲ್ಡ್‌ ಮೈನ್‌ ಟಾಸ್ಕ್‌ ವಿಚಾರವಾಗಿ ಮೂಲೆ ಮೂಲೆಯಲ್ಲಿಯೂ ಗಾಸಿಪ್‌ ಮಾತುಗಳು ಶುರುವಾಗಿವೆ. ಮನೆಯಲ್ಲಿ ಈಗಾಗಲೇ ಎರಡು ಗುಂಪುಗಳು ಆಗಿದಂತಿವೆ. ಇದರ ಬಗ್ಗೆ ಆರ್ಯವರ್ಧನ್‌, ಪ್ರಶಾಂತ್‌ ಸಂಬರಗಿ ಮಾತನಾಡಿಕೊಂಡಿದ್ದಾರೆ.

ಆರ್ಯವರ್ಧನ್‌, ಪ್ರಶಾಂತ್‌ ಸಂಬರಗಿ, ರೂಪೇಶ್‌ ಶೆಟ್ಟಿ ಹಾಗೂ ಅರುಣ್‌ ಸಾಗರ್‌ ಟಾಸ್ಕ್‌ ವಿಚಾರವಾಗಿ ಮಾತನಾಡಿಕೊಂಡರು. ಆರ್ಯವರ್ಧನ್‌ ಮಾತನಾಡಿ ʻʻಅನುಪಮಾ ಅವರೆಲ್ಲ ಪರಿವರ್ತನೆ ಆಗಿದ್ದಾರೆ. ಇಂಟು ಮಾರ್ಕ್‌ ಬಿದ್ದಾಗಿದೆʼ ಎಂದು ಎಲ್ಲರ ಸಮುಖದಲ್ಲಿ ಹೇಳಿದರು. ನಂತರ ಪ್ರಶಾಂತ್‌ ಸಂಬರಗಿ ಕಡೆ ತಿರುಗಿ ʻʻಈ ಟಾಸ್ಕ್‌ನಲ್ಲಿ ಹೀರೊನೂ ನೀವೇ. ಖಳನಾಯಕನೂ ನೀವೇ. ಆದರೆ ಹೀರೊ ಆಗಿ ನೀವು ನಂಬರ್‌ ಒನ್‌. ನೀವು ಇಲ್ಲ ಅಂದಿದ್ದರೆ ಮಜನೇ ಇರುತ್ತಿರಲಿಲ್ಲ. ನೀವು ಇಲ್ಲ ಅಂದಿದ್ದರೆ ಮ್ಯಾಚ್‌ ಮೊದಲೇ ಮುಗಿದು ಬಿಡುತ್ತಿತ್ತುʼʼಎಂದರು. ಇದಕ್ಕೆ ರೂಪೇಶ್‌ ಪ್ರತಿಕ್ರಿಯೆ ನೀಡಿʻʻ ಸ್ಟ್ರ್ಯಾಟಜಿ ಇಷ್ಟ ಆಯ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನೀವು (ಪ್ರಶಾಂತ್‌) ಆಟ ಮಾತ್ರ ಚೆನ್ನಾಗಿ ಆಡಿದ್ದೀರಾʼʼ ಎಂದರು. ಅರುಣ್‌ ಸಾಗರ್‌ ಮಾತನಾಡಿ ʻʻನಾನು ಕೂಡ ಒಂದು ಪೈಸೆ ಇಲ್ಲದೇ, ಎರಡು ವಿಕೆಟ್‌ ಕೆಡವಿದೆʼʼ ಎಂದರು.

ಹೆಣ್ಣು ಮಕ್ಕಳು ರೋಧನೆ ಕೊಡ್ತಿದ್ದಾರೆ!
ನಂತರದಲ್ಲಿ ಆರ್ಯವರ್ಧನ್‌ ಮತ್ತು ಪ್ರಶಾಂತ್‌ ಇಬ್ಬರೇ ಮಾತನಾಡಿಕೊಂಡಿದ್ದಾರೆ. ರಾತ್ರಿ 10.10ರ ಸಮಯದಲ್ಲಿ ಆರ್ಯವರ್ಧನ್‌ ಪ್ರಶಾಂತ್‌ ಸಂಬರಗಿ ಜತೆ ʻʻಕ್ಯಾಪ್ಟನ್‌ಶಿಪ್‌ ಮಾಡುವಾಗ ತುಂಬಾ ಕಷ್ಟವಿತ್ತು. ಏನೇನೋ ಡಬಲ್‌ ಗೇಮ್‌ ಇತ್ತು. ಕುಗ್ಗಿಸಿದ್ದರು, ಬಗ್ಗಿಸಿದ್ದರು. ಒಬ್ಬರನ್ನ ಮೇಲೆ ತರಕ್ಕೂ ಐಡಿಯಾ ಮಾಡುತ್ತಾರೆ. ಹಾಗೇ ಇರದನ್ನೂ ಹಾಳು ಮಾಡಲು ಐಡಿಯಾ ಮಾಡುತ್ತಾರೆ.ʼʼ ಎಂದರು.

ಪ್ರಶಾಂತ್‌ ಸಂಬರಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ ʻʻಇಡೀ ಬಿಗ್‌ ಬಾಸ್‌ ಇತಿಹಾಸದಲ್ಲೇ ಹೆಣ್ಣು ಮಕ್ಕಳ ಗ್ಯಾಂಗ್‌ ಇರಲಿಲ್ಲ. ಆದರೆ ಇದು ಯಾಕೋ ಗ್ಯಾಂಗ್‌ ಅಗಿ ಬಿಟ್ಟಿದೆ. ಎರಡು ಜಡೆ ಸೇರಲ್ಲ. ದೀಪಿಕಾ ಜತೆ ಯಾರಾದರೂ ಇದ್ದಿದ್ದರೆ, ಎರಡು ಹೆಣ್ಣು ಮಕ್ಕಳ ಗ್ಯಾಂಗ್‌ ಆಗಿ ಬಿಡೋದು. ಇಲ್ಲಿ ಒಂದು ಹೆಣ್ಣು ಮಕ್ಕಳ ಗ್ಯಾಂಗ್‌ ಅಗಿದ್ದು ರೋದನೆ ಕೊಡ್ತಾ ಇದ್ದಾರೆ. ಇವರಿಂದ ತೊಂದರೆ ಆಗುತ್ತಿದೆ. ಕಳಪೆಯನ್ನು ಡಿಸೈಡ್‌ ಮಾಡಿರುತ್ತಾರೆʼʼ ಎಂದರು. ಆರ್ಯವರ್ಧನ್‌ ನಂತರ ಮಾತನಾಡಿ ʻʻಸಾನ್ಯ ಒಬ್ಬಳು ದೂರ ಇದ್ದಾಳೆ. ಅವಳನ್ನು ಸೇರಿಸಿಕೊಳ್ಳಲ್ಲ ಅವರುʼʼ ಎಂದರು. ಅದಕ್ಕೆ ಪ್ರಶಾಂತ್‌ ಸಂಬರಗಿ ಮಾತನಾಡಿ ʻʻಸಾನ್ಯ ಯಾವಾಗಲೂ ರೂಪೇಶ್‌ ಶೆಟ್ಟಿ ಜತೆ ಇರ್ತಾಳೆʼʼಎಂದರು.

ಇದನ್ನೂ ಓದಿ | Bigg Boss Kannada | ಗೋಲ್ಡ್ ಮೈನ್ ಟಾಸ್ಕ್‌ ಕುರಿತು ಮನೆಯಲ್ಲಿ ಚರ್ಚೆ: ಇದು ಗ್ಯಾಂಗ್‌ ಗೇಮ್‌ ಅಂದ್ರು ಆರ್ಯವರ್ಧನ್‌!

ಇದನ್ನೂ ಓದಿ | Bigg Boss Kannada | ರೋಲ್‌ಕಾಲ್‌ ವಿಚಾರಕ್ಕೆ ರೂಪೇಶ್‌ ರಾಜಣ್ಣ-ಪ್ರಶಾಂತ್‌ ಕಿರಿಕ್‌!

Exit mobile version