Site icon Vistara News

Bigg Boss Kannada | ಗೋಲ್ಡ್ ಮೈನ್ ಟಾಸ್ಕ್‌ ಕುರಿತು ಮನೆಯಲ್ಲಿ ಚರ್ಚೆ: ಇದು ಗ್ಯಾಂಗ್‌ ಗೇಮ್‌ ಅಂದ್ರು ಆರ್ಯವರ್ಧನ್‌!

Bigg Boss kannada

ಬೆಂಗಳೂರು: ಈ ವಾರ ಕ್ಯಾಪ್ಟನ್ಸಿ ಅಭ್ಯರ್ಥಿಯಾಗಲು ‘ಬಿಗ್ ಬಾಸ್’ (Bigg Boss Kannada ) ಟಾಸ್ಕ್ ನೀಡಿದ್ದರು ಅದೇ ‘ಬಿಗ್ ಬಾಸ್ ಗೋಲ್ಡ್ ಮೈನ್’. ಬಿಡ್‌ ಟಾಸ್ಕ್‌ ಕೊನೆಯ ಹಂತ ತಲುಪುತ್ತಿದೆ. ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರ ಹಾಕಲ್ಪಟ್ಟಿರುವ ಸದಸ್ಯರಿಗೆ ಬಿಗ್‌ ಬಾಸ್‌ ಅವಕಾಶ ನೀಡಿತ್ತು. ಮುಂದಿನ ಟಿಕ್ಕರ್‌ ಸದ್ದು ಆದಾಗ ಕ್ಯಾಪ್ಟನ್ಸಿ ಟಾಸ್ಕ್‌ ಅಭ್ಯರ್ಥಿಯಾಗಲು ಸಲುವಾಗಿ ಯಾರನ್ನಾದರೂ ಆಟಕ್ಕೆ ಮರು ಸೇರಿಸಲು ಅಥವಾ ತಾವೇ ಮರಳಿ ಬರಲು ಸದಸ್ಯರು ವಿಸರ್ಜಕರಾದ ರೂಪೇಶ್‌ ಶೆಟ್ಟಿ ಹಾಗೂ ವಿನೋದ್‌ ಗೊಬ್ಬರಗಾಲ ಚಿನ್ನದ ವಿನಿಯೋಗ ಮಾಡಿ ಆಟವನ್ನು ಮರು ಪರಿಶಿಲಿಸಬಹುದಾಗಿತ್ತು.

ಇದರಲ್ಲಿ ದೀಪಿಕಾ ದಾಸ್‌ ಬ್ಯಾಕ್‌ ಆದರು. ನಂತರ ಅನುಪಮಾ ಮತ್ತು ಕಾವ್ಯಶ್ರೀ ಹಾಗೂ ದೀಪಿಕಾ ದಾಸ್‌ ಫೈನಲ್‌ವರೆಗೂ ಬಂದಿದ್ದಾರೆ. ನಂತರ ಕಾವ್ಯ ಔಟ್‌ ಆದರು. 13.550 ಗ್ರಾಂ ವಿನೋದ್‌ ಸಂಪಾದಿಸಿದ್ದಾರೆ. ರೂಪೇಶ್‌ ಅದರಕ್ಕಿಂತ ಹೆಚ್ಚು ಚಿನ್ನವನ್ನು ಸಂಪಾದಿಸಿ ವಿಸರ್ಜಕರಾಗಿ ಜಯಶೀಲರಾದರು. ಪರಿವರ್ತನೆಯಲ್ಲಿ ಅನುಪಮಾ ಮುನ್ನಡೆದಿದ್ದು ಜಯಶೀಲರಾದರು.

ಇದನ್ನೂ ಓದಿ | Bigg Boss Kannada | ಸನ್ನೆ ಭಾಷೆ ಮಾತಾಡ್ತಾರೆ ರೂಪೇಶ್‌-ಸಾನ್ಯ; ದರ್ಶ್‌ಗೆ ಆರ್ಯವರ್ಧನ್‌ ಫುಲ್ ಟ್ಯೂಷನ್!

ಈ ಕುರಿತು ಆರ್ಯವರ್ದನ್‌ ಮತ್ತು ಅರುಣ್‌ ಸಾಗರ್‌, ಪ್ರಶಾಂತ್‌ ಚರ್ಚೆ ಮಾಡಿದ್ದಾರೆ. ಆರ್ಯವರ್ಧನ್‌ ಮಾತನಾಡಿ ʻʻಅನುಪಮಾ ಅಖಾಡಕ್ಕೆ ಇಳಿದ ಕೂಡಲೇ ಎಲ್ಲರೂ ಸುಮ್ಮನಾಗಿ ಬಿಟ್ಟರುʼʼ ಎಂದರು. ಅದಕ್ಕೆ ಪ್ರಶಾಂತ್‌ ಪ್ರತಿಕ್ರಿಯೆ ನೀಡಿ ʻʻಎಲ್ಲರೂ ಗ್ಯಾಂಗ್‌ ಆಗಿ ಬಿಟ್ಟರು.ʼʼ ಎಂದಿದ್ದಾರೆ. ಅರುಣ್‌ ಸಾಗರ್‌ ನಂತರದಲ್ಲಿ ಮಾತನಾಡಿ ʻʻಇನ್ನೂ ಮೂವರ ಆಟ ಇದೆ. ನೋಡೋಣʼʼ ಎಂದಿದ್ದಾರೆ.

ಈ ಟಾಸ್ಕ್‌ನಲ್ಲಿ ಸ್ಪರ್ಧಿಗಳನ್ನು ಮೂರು ವಿಭಾಗಗಳಾಗಿ ವಿಭಜಿಸಲಾಗಿದೆ. ಕ್ಯಾಪ್ಟನ್ ಆರ್ಯವರ್ಧನ್ ಲೆಕ್ಕಾಧಿಕಾರಿ. ಟಾಸ್ಕ್‌ನಲ್ಲಿ ಗೆದ್ದಿದ್ದ ವಿನೋದ್ ಗೊಬ್ಬರಗಾಲ ಹಾಗೂ ರೂಪೇಶ್ ಶೆಟ್ಟಿ ವಿಸರ್ಜಕರು. ಉಳಿದ ಸ್ಪರ್ಧಿಗಳು ನಿಧಿ ಶೋಧಕರು.

ನಿಧಿ ಶೋಧಕರು ಗಣಿಯಲ್ಲಿ ಅಗೆದು ಚಿನ್ನ ಹುಡುಕಬೇಕು. ಅದನ್ನ ಲೆಕ್ಕಾಧಿಕಾರಿಯ ಬಳಿ ತೂಕ ಮಾಡಿಸಿ, ಲೆಕ್ಕ ಬರೆಯಿಸಬೇಕು. ಚಿನ್ನವನ್ನು ವಿನಿಯೋಗಿಸಿ, ಎದುರಾಳಿಯನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಡುವಂತೆ ವಿಸರ್ಜಕರ ಬಳಿ ಒಪ್ಪಂದ ಮಾಡಿಕೊಳ್ಳಬೇಕು. ವಾರದ ಕೊನೆಯಲ್ಲಿ ವಿಸರ್ಜಕರಿಗೆ ಬಲೆಯಾಗದೆ ಉಳಿಯುವ ಇಬ್ಬರು ಸ್ಪರ್ಧಿಗಳು ಹಾಗೂ ಅತಿ ಹೆಚ್ಚು ಚಿನ್ನ ಹೊಂದಿರುವ ಒಬ್ಬ ವಿಸರ್ಜಕ ಕ್ಯಾಪ್ಟನ್ ಟಾಸ್ಕ್‌ಗೆ ಆಯ್ಕೆ ಆಗುತ್ತಾರೆ.

ಇದನ್ನೂ ಓದಿ | Bigg Boss Kannada | ರೋಲ್‌ಕಾಲ್‌ ವಿಚಾರಕ್ಕೆ ರೂಪೇಶ್‌ ರಾಜಣ್ಣ-ಪ್ರಶಾಂತ್‌ ಕಿರಿಕ್‌!

Exit mobile version