ಬೆಂಗಳೂರು : ಬಿಗ್ ಬಾಸ್ ಸೀಸನ್9ರ (Bigg Boss Kannada ) ರಲ್ಲಿ ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಸಾನ್ಯ, ಆರ್ಯವರ್ಧನ್ ಹಾಗೂ ರೂಪೇಶ್‌ಗೆ ಕ್ಯಾಪ್ಟನ್ ರೂಮ್ ಬಗ್ಗೆ ತಿಳಿ ಹೇಳಿದ್ದಾರೆ. ಹಾಗೇ ಆಟದ ಮಹತ್ವದ ಕುರಿತು ಮಾತನಾಡಿದ್ದಾರೆ.
ನಾವು ಸೇತುವೆ ಅಷ್ಟೇ
ಸುದೀಪ್ ಅವರು ರೂಪೇಶ್‌ಗೆ ತಿಳಿ ಹೇಳಿ ʻʻಒಳಗೆ ಹೋಗುವುದು ನಿಮ್ಮ ಆಸೆ, ಹಾಗೇ ಅದು ನಿಮ್ಮ ಅವಕಾಶ. ಹೊರಗೆ ಕರೆಸೋದು ಜನರ ಆಸೆ. ಒಂದು ವೇಳೆ ನಾಮಿನೇಷನ್‌ನಲ್ಲಿದ್ದು, ನೀವು ಸೇಫ್ ಆಗಿದ್ದೀರೆಂದರೆ ಜನರು ಒಂದು ಅವಕಾಶ ನೀಡಿದ್ದಾರೆ ಎಂದು ಅರ್ಥ, ಹೊರಗೆ ಕಳುಹಿಸಲು ಅಲ್ಲ. ಆದರೆ ಸೇಫ್ ಆದಲ್ಲಿ ಅದನ್ನು ಪ್ರೊಗೆಸ್ ಎಂದು ತಿಳಿದುಕೊಳ್ಳಿ. ಪ್ರೊಗೆಸ್ ಅಂದರೆ ಪ್ರತಿನಿತ್ಯ ಕಲಿಯುವುದು. ನಮ್ಮನ್ನು ನಾವು ಲಾಂಚ್ ಮಾಡಿಕೊಳ್ಳುವುದು. ನೀವು ಹೋಗ್ತೀರಿ ಹೋಗಲ್ಲ ಅದು ನಮಗೆ ಗೊತ್ತಿಲ್ಲ. ಆದರೆ ಜನ ಏನು ಅಂದುಕೊಂಡರು ಅದನ್ನು ನಿಮ್ಮ ಮುಂದೆ ಇಡುತ್ತೇವೆ. ಜನರು ನಿಮ್ಮನ್ನು ಸೇಫ್ ಮಾಡಿದ್ದಾರೆ ಎಂದರೆ ಅರ್ಥ ಮಾಡಿಕೊಳ್ಳಿ ಜನರು ನಿಮ್ಮನ್ನು ಸೇಫ್ ಮಾಡಿದ್ದಾರೆ ಎಂದು. ಪ್ರತಿ ಸಲ ಸ್ಪರ್ಧಿಗಳು ಸೇಫ್ ಆದಾಗ ಅವರ ಪ್ರತಿ ವೋಟ್ ಮೂಲಕ ತೊರಿಸಿದ್ದಾರೆ ಎಂದು. ಕಳಿಸೋದು ಉಳಿದುಕೊಳ್ಳೋದು ನಮ್ಮ ಕೈಯಲ್ಲಿ ಇಲ್ಲ ಅದು ನಿಮ್ಮ ಕೈಯಲ್ಲಿ ಇದೆ. ನಾವು ಬರೀ ಸೇತುವೆ. ನಾವು ಅದನ್ನು ಹೇಳಬೇಕಿತ್ತು ಹೇಳಿದ್ದೇವೆʼʼ ಎಂದರು.
ಇದನ್ನೂ ಓದಿ | Bigg Boss Kannada | ಮನೆಯ ಕ್ಯಾಪ್ಟನ್ ರೂಮ್ ಪಿಕ್ನಿಕ್ ಸ್ಪಾಟ್ ಅಲ್ಲ: ರೂಪೇಶ್, ಸಾನ್ಯ, ಗುರೂಜಿಗೆ ಕಿಚ್ಚ ಎಚ್ಚರಿಕೆ!
ಹೊರಗಡೆ ಏನೂ ಡ್ಯಾಮೇಜ್ ಆಗಿಲ್ಲ!
ಸುದೀಪ್ ನಂತರ ಮತ್ತೆ ರೂಪೇಶ್‌ಗೆ ಮಾತನಾಡಿ ʻʻನಾನು ನಿಮಗೆ ಎಚ್ಚರಿಕೆ ನೀಡಿದ್ದೇನೆ. ಹೊರಗಡೆ ಏನೂ ಡ್ಯಾಮೇಜ್ ಆಗಿಲ್ಲ. ಆದರೆ ನಂತರ ಆಗುವುದನ್ನು ತಡೆಯಲು, ವೀಕ್ಷಕರಿಗೆ ಡಿಸ್‌ಕಂಫರರ್ಟ್ ಆಗುತ್ತೆ ಎನ್ನುವ ಲೆಕ್ಕದಲ್ಲಿ ನಾನು ಹೆಳಲೇಬೇಕು. ಒಟಿಟಿಯಿಂದ 61ನೇ ದಿನ ಇದು ನಿಮ್ಮದು. ಸಿನಿಮಾ ಕೆಲವೊಂದು ಓಡಲ್ಲ. ಆದರೆ ಜನ ಇಷ್ಟ ಪಡಲ್ಲ ಅಂತಲ್ಲ. ಆ ಒಂದು ಸಿನಿಮಾ ಇಷ್ಟ ಪಡಲ್ಲ. ಹಾಗಂತ ನಂತರದ ಸಿನಿಮಾ ಇಷ್ಟ ಆದರೆ ಕೈ ಹಿಡಿಯುತ್ತಾರೆ. ಚೆನ್ನಾಗಿ ಆಡುತ್ತೀದ್ದೀರಾ. ಉದ್ದೇಶ ಕೂಡ ಚೆನ್ನಾಗಿದೆ. ಅದು ಜನ ನೋಡಿದ್ದರೆ. ನಾನು ಇಲ್ಲಿ ಬರೀ ನಗಿಸಿ ಹೋದರೆ ನಾನು ನಿಮಗೆ ಕೊಡುವ ನ್ಯಾಯ ಅಲ್ಲ. ಯಾವುದೇ ವಿಷಯವನ್ನು ನಿಮಗೆ ತಲುಪಿಸಿ ನಂತರ ನಿಮ್ಮ ಬುದ್ಧಿವಂತಿಕೆಗೆ ಬಿಡುತ್ತೇನೆ. ತಿಳಿವಳಿಕೆಗೆ ಬಿಡುತ್ತೇನೆ. ಏನು ತೆಗೆದುಕೊಂಡಿದ್ದೀರಿ, ತಿದ್ದಿಕೊಂಡಿದ್ದೀರಿ ಎಂಬುದು ಬಿಡುತ್ತೇನೆʼʼ. ಎಂದರು.
ಸಾನ್ಯ ನಂತರ ಮಾತನಾಡಿ ʻʻಅಮ್ಮ ಹೇಳಿದ್ದಾರೆ ಎಂದು ಅಂದುಕೊಳ್ಳುತ್ತೇನೆ. ನಾವು ಕಂಫರ್ಟ್ ಜೋನ್ ಇದ್ದಾಗ ಮರೆತು ಹೋಗಿರಬಹುದು. ನಮ್ಮ ಮನೆ, ಜನ ಇದೆ ಆಗಿದೆ. ಆಚೆ ಜನರ ಯೋಚನೆ ಇರಲಿಲ್ಲ. ವೇಕ್‌ಅಪ್ ಕಾಲ್ ಕೊಟ್ಟಿದ್ದಕ್ಕೆ ಧನ್ಯವಾದʼʼ ಎಂದು ಹೇಳಿದರು.
ಸುದೀಪ್ ನಂತರ ಮಾತಾಡಿ ʻʻಅಲ್ಲಿ ಇಲ್ಲದೆ ಇರುವ ಉದ್ದೇಶ ಹೊರಗೆ ಕಾಣಿಸುವುದು ಬೇಡ. ನನ್ನ ಗೌರವ ಪ್ರತಿಯೊಬ್ಬ ಸ್ಪರ್ಧಿಗಳ ಮೇಲೆ ಇದೆ. ಅಲ್ಲಿ ಉದ್ದೇಶಗಳು ಚೆನ್ನಾಗಿದೆʼʼ ಎಂದರು. ನಂತರ ಅರುಣ್ ಸಾಗರ ಹಾಡಿ ನಗಿಸಿ ಚೀಯರ್‌ಅಪ್ ಮಾಡಿದರು.
ಇದನ್ನೂ ಓದಿ | Bigg Boss Kannada | ಪ್ರಶಾಂತ್-ರೂಪೇಶ್ ಮಾತಿನ ಚಕಮಕಿ: ಅವರವರ ಭಾವಕ್ಕೆ ಅವರವರ ವಾದ, ಯಾವುದು ಸರಿ?