Site icon Vistara News

Bigg Boss Kannada | ಪ್ರಶಾಂತ್‌ ಆಟಕ್ಕೆ ಮನೆಯವರ ಹೊಗಳಿಕೆ: ನಿಮ್ಮನ್ನು ಟ್ರಸ್ಟ್‌ ಮಾಡೋದು ಕಷ್ಟ ಅಂದ್ರು ನೇಹಾ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌9ರಲ್ಲಿ (Bigg Boss Kannada) 20ನೇ ದಿನ ಪ್ರಶಾಂತ್‌ ಸಂಬರಗಿ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಏನಾದರೂ ಒಂದು ವಿಚಾರಕ್ಕೆ ಧ್ವನಿ ಎತ್ತುವ ಪ್ರಶಾಂತ್‌ ಕ್ಯಾಪ್ಟನ್ಸಿ ಟಾಸ್ಕ್‌ ವಿಚಾರಕ್ಕೆ ನೇಹಾ ಹಾಗೂ ಅನುಪಮಾ ಕ್ಲಾಸ್‌ ತೆಗೆದುಕೊಂಡರು.

ಲೀವಿಂಗ್‌ ಏರಿಯಾದಲ್ಲಿ ಸ್ಪರ್ಧಿಗಳ ಜತೆ ಪ್ರಶಾಂತ್‌ ಮಾತನಾಡುತ್ತಿದ್ದಾಗ ಅನುಪಮಾ ಮಾತನಾಡಿ ʻʻಪ್ರಶಾಂತ್‌ ಸಂಬರಗಿ ಅವರು ಗೇಮ್‌ನಲ್ಲಿ ಎಲ್ಲ ಸ್ಟೇಟ್‌ಮೆಂಟ್‌ಗಳನ್ನು ಪಾಸ್‌ ಮಾಡಿರುತ್ತಾರೆ. ಮೆಂಟಲಿ ಕುಗ್ಗಿಸಿ ಬಿಡುತ್ತಾರೆ. ಮಯೂರಿ ತರ ಇದ್ದರೆ, ಕಷ್ಟ, ಅಂತವರು ಇದ್ದರೆ ಧ್ವಂಸ ಮಾಡಿ ಬಿಡುತ್ತಾರೆ. ಗೇಮ್‌ ಆದ ಮೇಲೆ ಮತ್ತೆ ಬರುತ್ತಾರೆ. ನೋಡಿ ಜಸ್ಟ್‌ ಗೇಮ್‌ ಆಡಿದ್ದು, ಟಾಸ್ಕ್‌ ಆಡಿದ್ದು ಎಂದು ಬರುತ್ತಾರೆ. ಅಲ್ಲಿ ಪರ್ಸನಲ್‌ ಏನೂ ಇಲ್ಲ ಸ್ಟ್ರ್ಯಾಟಜಿ ಅಷ್ಟೇ ಎನ್ನುತ್ತಾರೆʼʼ ಎಂದು ನಕ್ಕು ವ್ಯಂಗ್ಯವಾಗಿ ಹೇಳಿದರು.

Bigg Boss Kannada

ಇದನ್ನೂ ಓದಿ | Bigg Boss Kannada | ಕ್ಯಾಪ್ಟನ್‌ ಆದ ದೀಪಿಕಾ ದಾಸ್‌: ಕಳಪೆ ಪ್ರದರ್ಶನ ತೋರಿದ ಅರುಣ್‌ ಸಾಗರ್‌!

ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಶಾಂತ್‌ ʻʻಕ್ರಿಕೆಟ್‌ಗೆ ಹೋದಾಗ ಇವತ್ತು ಸಿಕ್ಸರ್‌ ನೋಡು ಎಂದು ಹೊಡೆಯಲ್ವಾ ಹಾಗೆ ಇದುʼʼ ಎಂದರು. ನೇಹಾ ಮಾತನಾಡಿ ʻʻನನಗೆ ನಿಮ್ಮ ಅಗ್ರೆಷನ್‌, ಪ್ಲಾನಿಂಗ್‌ ಎಲ್ಲ ಸೂಪರ್‌ ಆದರೆ ನಿಮ್ಮನ್ನು ಟ್ರಸ್ಟ್‌ ಮಾಡುವುದು ಕಷ್ಟ. ಈ ತರ, ಟೀಮ್‌ ಗೇಮ್‌ನಲ್ಲಿ ಇನ್ನೂ ಕಷ್ಟ. ಇನ್ನೊಂದು ಕ್ಯಾಪ್‌ ಬಿಸಾಕುವುದು ಸ್ಪೋರ್ಟಿವ್‌ ಆಗಿ ತೆಗೆದುಕೊಳ್ಳಬಹುದು ಆದರೆ ಮಾತು ಬಿಸಾಕುತ್ತಿರಲ್ಲ. ಅದು ಮರೆಯಲಿಕ್ಕೆ ಆಗುವುದಿಲ್ಲʼʼ ಎಂದರು. ಅನುಪಮಾ ಮಾತನಾಡಿ ʻʻಅದರಲ್ಲಿಯೂ ಮಯೂರಿಗೆ 300ಗ್ರಾಂ ನಲ್ಲಿ ಹೊಡತೀನಿ ಅಂದ್ರಲ್ಲ ಅದುʼʼಎಂದರು. ಅದಕ್ಕೆ ಪ್ರಶಾಂತ್‌ ʻʻಕಡಿಮೆ ಅಲ್ಲಿ ಹೊಡಿತೀನಿ ಅಂದಿದ್ದು ನಾನುʼʼ ಎಂದಿದ್ದಾರೆ.ʻʻನಿಮ್ಮ ಸ್ಟ್ರಾಟಜಿ ಅರ್ಥ ಆಯ್ತು ಅಂದ್ರುʼʼ ಅನುಪಮಾ. ಪ್ರಶಾಂತ್‌ ಇದಕ್ಕೆ ಒಪ್ಪಿದರು.

Bigg Boss Kannada

ಇನ್ನೊಂದು ಕಡೆ ಆರ್ಯವರ್ಧನ್‌, ಸಾನ್ಯ ಹಾಗೂ ರೂಪೇಶ್‌ ಪ್ರಶಾಂತ್‌ ಆಟದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಆರ್ಯವರ್ಧನ್‌ ಮಾತನಾಡಿ ʻʻವಾರದಲ್ಲಿ ಚೆನ್ನಾಗಿ ಆಡಿದ್ದು ಪ್ರಶಾಂತ್‌ ಸಂಬರಗಿ. ಮ್ಯಾಚ್‌ನ್ನು ಮ್ಯಾಚ್‌ ತರ ಆಡಿದ್ದರುʼʼ ಎಂದರು. ಈ ಬಗ್ಗೆ ರೂಪೇಶ್‌ ಪ್ರತಿಕ್ರಿಯೆ ನೀಡಿ ʻʻಆಡಿದ್ದಾರೆ ಚೆನ್ನಾಗಿ. ಚೆನ್ನಾಗಿ ಆಡಿದರೋ ಗೊತ್ತಿಲ್ಲʼʼಎಂದರು. ʻದುಡ್ಡು ಇಲ್ಲದೇ ಹೊಡೆದಿದ್ದಾರೆʼ ಎಂದರು ಆರ್ಯವರ್ಧನ್‌. ನಂತರ ರೂಪೇಶ್‌ ಅವರು ʻಸಾನ್ಯ ಅವರ ಜತೆ ಸೇರಿದ್ದಾರೆʼ ಎಂದರು.

Bigg Boss Kannada

ಇದನ್ನೂ ಓದಿ | Bigg Boss Kannada | ಇನ್ನು ಮುಂದೆ ವಾರಾಂತ್ಯದ ಎಪಿಸೋಡ್‌ಗಳು ರಾತ್ರಿ 9ಕ್ಕೆ ಪ್ರಸಾರ: ಸಿಹಿ ಸುದ್ದಿ ನೀಡಿದ ಬಿಗ್‌ ಬಾಸ್‌!

Exit mobile version