ಬೆಂಗಳೂರು: ಬಿಗ್ ಬಾಸ್ ಸೀಸನ್ 9ನೇ (Bigg Boss Kannada) ವಾರಕ್ಕೆ ಕಾಲಿಟ್ಟಿದೆ. ಈ ವಾರ ಕ್ಯಾಪ್ಟನ್ ಇಲ್ಲದ ಕಾರಣ ಬಿಗ್ ಬಾಸ್ ಒಂದು ಆದೇಶ ನೀಡಿದ್ದಾರೆ. ಮನೆಯ ಎಲ್ಲ ಸದಸ್ಯರನ್ನು ಬಿಗ್ ಬಾಸ್ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಮನೆಯ ಸದಸ್ಯರು ವಿಶೇಷ ಅಧಿಕಾರ ಪಡೆಯಲು ಬಿಗ್ ಬಾಸ್ ಮೂರು ಟಾಸ್ಕ್‌ಗಳನ್ನು ನೀಡಿದ್ದಾರೆ.
ಮೊದಲನೇ ಟಾಸ್ಕ್‌ನಲ್ಲಿ ಎಲ್ಲ ಸದಸ್ಯರು ಮರದ ಇಟ್ಟಿಗೆಗಳ ಮೇಲೆ ಸಾಗುತ್ತಾ ನೆಲದ ಮೇಲೆ ಕಾಲಿಡದೇ ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಬೇಕು. ಅಂತಿಮ ಗೆರೆ ದಾಟುವ ಐದು ಸದಸ್ಯರು ಈ ಟಾಸ್ಕ್‌ನಲ್ಲಿ ವಿನ್ ಆಗುತ್ತಾರೆ. ಈ ಸುತ್ತಿನಲ್ಲಿ ವಿನೋದ್ ಗೊಬ್ಬರಗಾಲ, ಅನುಪಮಾ, ಆರ್ಯವರ್ಧನ್, ದಿವ್ಯಾ ಉರುಡಗ ಹಾಗೂ ಪ್ರಶಾಂತ್ ಸಂಬರಗಿ ಆಯ್ಕೆ ಆದರು. ಬಳಿಕ ಈ ಐದು ಸ್ಪರ್ಧಿಗಳಲ್ಲಿ ವಿನೋದ್ ಗೊಬ್ಬರಗಾಲ ವಿಜೇತರಾದರು.
ಇದನ್ನೂ ಓದಿ | Bigg Boss Kannada | ಕ್ಯಾಪ್ಟನ್ಸಿ ಅಭ್ಯರ್ಥಿ ಆಯ್ಕೆಯ ಕುರಿತಾಗಿ ಕಿಚ್ಚ ಸುದೀಪ್ ನೀಡಿದ ಖಡಕ್ ವಾರ್ನಿಂಗ್ ಏನು?
ಎರಡನೇ ಸುತ್ತಿನಲ್ಲಿ ವಿಶೇಷ ಅಧಿಕಾರ ಪಡೆಯಲು ʻಗೆಲುವ ಗುರಿʼ ಎನ್ನುವ ಟಾಸ್ಕ್ ಬಿಗ್ ಬಾಸ್ ನೀಡಿದ್ದರು. ಇದರ ಅನುಸಾರ ಚೆಂಡುಗಳ ಎರಡು ಬದಿಯಲ್ಲಿ ಇರುವ ಹಗ್ಗಗಳನ್ನು ಎದುರಿರುವ ಕಂಬಕ್ಕೆ ಸಿಕ್ಕಿಸಬೇಕು. ಚೆಂಡಿನ ಹಗ್ಗ ಸಿಕ್ಕಿಸಿಕೊಂಡ ಸಂಖ್ಯೆಗಳ ಪ್ರಕಾರ, ಅಂಕ ಸಿಗುತ್ತದೆ. ಟಾಸ್ಕ್‌ನಲ್ಲಿ ಅತಿ ಹೆಚ್ಚು ಅಂಕ ಯಾರು ಗಳಿಸುತ್ತಾರೋ ಅವರು ವಿಜೇತರಾಗುತ್ತಾರೆ. ಇದರಲ್ಲಿ ಕಾವ್ಯಶ್ರೀ ಗೌಡ ವಿಜೇತರಾದರು.
ಮೂರನೇ ಹಂತದಲ್ಲಿ ʻಚೆಂಡುಗಳು ಸಾರ್ ಚೆಂಡುಗಳುʼ ಎನ್ನುವ ಟಾಸ್ಕ್ ಬಿಗ್ ಬಾಸ್ ನೀಡಿದ್ದು, ಇದರ ಅನುಸಾರ ಐದು ನಿಮಿಷದಲ್ಲಿ ತಮ್ಮ ಆಯ್ಕೆಯ ಬಕೆಟ್ ಒಳಗೆ ಚೆಂಡುಗಳನ್ನು ಎಸೆಯಬೇಕು. ಯಾರ ಬಕೆಟ್‌ನಲ್ಲಿ ಅತಿ ಹೆಚ್ಚು ಚೆಂಡಗಳು ಬಕೆಟ್‌ನಲ್ಲಿ ಇರುತ್ತದೆಯೋ ಅವರು ವಿನ್ ಆಗುತ್ತಾರೆ. ಈ ಸುತ್ತಿನಲ್ಲಿ ರೂಪೇಶ್ ರಾಜಣ್ಣ ವಿಜೇತರಾದರು. ಮೂರು ಸುತ್ತಿನ ಅನುಸಾರ ವಿನೋದ್ ಗೊಬ್ಬರಗಾಲ, ಕಾವ್ಯಶ್ರೀ ಗೌಡ ಮತ್ತು ರೂಪೇಶ್ ರಾಜಣ್ಣ ವಿಶೇಷ ಅಧಿಕಾರ ಪಡೆದಿದ್ದಾರೆ.
ಇದನ್ನೂ ಓದಿ | Bigg Boss Kannada | ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡ ಬಿಗ್ ಬಾಸ್ ಕನ್ನಡ ಒಟಿಟಿ ಸ್ಪರ್ಧಿಗಳು!