Site icon Vistara News

Bigg Boss Kannada | ʻವಾರದ ಕತೆ ಕಿಚ್ಚನ ಜತೆʼ ಎಪಿಸೋಡ್‌ಗೆ ಕಿಚ್ಚ ಗೈರು?

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9 (Bigg Boss Kannada) ಯಶಸ್ವಿಯಾಗಿ ನಡೆಯುತ್ತಿದೆ. ಈಗಾಗಲೇ ಮೂವರು ಸ್ಪರ್ಧಿಗಳು ಮನೆಯಿಂದ ಹೊರ ನಡೆದಿದ್ದಾರೆ. ನಾಲ್ಕನೇ ವಾರ ಯಾರು ಎಲಿಮಿನೇಟ್‌ ಆಗಲಿದ್ದಾರೆ ಎಂಬುದನ್ನು ವೀಕ್ಷಕರು ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ ವಾರದ ಕತೆ ಕಿಚ್ಚನ ಜತೆ ಎಪಿಸೋಡ್‌ಗೆ ಈ ವಾರ ಕಿಚ್ಚ ಬರುತ್ತಿಲ್ಲ ಎಂಬ ಸುದ್ದಿ ಕೇಳಿ ಬರುತ್ತಿದೆ.

ಬಿಗ್‌ ಬಾಸ್‌ ಸೀಸನ್‌ 1ರ ಒಟಿಟಿಯನ್ನು ಕಿಚ್ಚ ಸುದೀಪ್‌ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಇದುವರೆಗೂ ಗೈರು ಆಗಿದ್ದು ಅಂದರೆ ಕೋವಿಡ್ ಸಮಯದಲ್ಲಿ ಮಾತ್ರ. ಕೊರೊನಾ ಸಮಯದಲ್ಲಿ ಕಿಚ್ಚನಿಗೂ ಅನಾರೋಗ್ಯ ಕಾಡಿತ್ತು. ಹಾಗಾಗಿ ಕೆಲವು ವಾರ ಬಿಗ್ ಬಾಸ್‌ಗೆ ಕಿಚ್ಚ ಸುದೀಪ್‌ ಗೈರಾಗಿದ್ದರು.

ಸುದೀಪ್‌ ಸದ್ಯ ವಿದೇಶದಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಕ್ಕೋಬರ್‌ 18ರಂದು ಸುದೀಪ್‌ ಮತ್ತು ಪ್ರಿಯಾ ಸುದೀಪ್‌ ಅವರ ವಿವಾಹ ವಾರ್ಷಿಕೋತ್ಸವ. ವಿದೇಶದಲ್ಲಿಯೇ ಈ ಬಾರಿ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ, ಅವರು ವಾರದ ಕತೆ ಕಿಚ್ಚನ ಜತೆ ಎಪಿಸೋಡ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ | Bigg Boss Kannada | ಅಟ್ಯಾಚ್‌ಮೆಂಟ್‌ ಬೆಳೆಸಿಕೊಳ್ಳಬಾರದು ಎಂದ ರಾಕಿ: ಏನಿದು ಕೋಲ್ಡ್‌-ಹಾಟ್‌ ವೈಬ್ಸ್‌?

ಪುನೀತ ಪರ್ವ ಹೆಸರಿನಲ್ಲಿ ಕಾರ್ಯಕ್ರಮ
ವಿದೇಶದಿಂದ ವಾಪಾಸ್ ಆಗುತ್ತಿದ್ದಂತೆ ಕಿಚ್ಚ ಗಂಧದ ಗುಡಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾದ ʻಗಂಧದ ಗುಡಿʼ ಪ್ರಿ ರಿಲೀಸ್ ಕಾರ್ಯಕ್ರಮ ಶುಕ್ರವಾರ (ಅಕ್ಟೋಬರ್ 21) ಅದ್ಧೂರಿಯಾಗಿ ಮಾಡಲಾಗುತ್ತಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯುತ್ತಿದೆ. ದಕ್ಷಿಣ ಭಾರತದ ಅನೇಕ ಸ್ಟಾರ್ ಕಲಾವಿದರು ಭಾಗಿಯಾಗುತ್ತಿದ್ದಾರೆ. ಪುನೀತ ಪರ್ವ ಹೆಸರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಕಿಚ್ಚ ಕೂಡ ಹಾಜರಾಗುತ್ತಿದ್ದಾರೆ. ಹಾಗಾಗಿ ಬಿಗ್ ಬಾಸ್ ಶೋ ನಡೆಸಿಕೊಡಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕಲರ್ಸ್‌ ಕನ್ನಡ ಆಗಲಿ ನಟ ಕಿಚ್ಚ ಸುದೀಪ್‌ ಆಗಲಿ ಹೇಳಿಕೊಂಡಿಲ್ಲ.

ಇದನ್ನೂ ಓದಿ | Bigg Boss Kannada | ಗುಂಪಿಗೆ ಸೇರದ ಪದ, ತಂಡಗಳ ನಡುವೆ ವಾದ ಪ್ರತಿವಾದ

Exit mobile version