Site icon Vistara News

Bigg Boss Kannada | ಮನೆಮಂದಿಗೆ ಚರ್ಚಿಸಿ ಎನ್ನಲು ಬಿಗ್ ಬಾಸ್‍ಗೆ ಭಯವಾಗಿದೆಯಂತೆ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಐದನೇ ವಾರ ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಸದಸ್ಯರ ಜತೆ ಖುಷಿಯಿಂದ ಮಾತನಾಡಿಸಿದ್ದಾರೆ. ಎಂದಿನಂತೆ ಈ ವಾರ ʻಯೆಸ್‌ʼ ಅಥವಾ ʻನೋʼ ಸುತ್ತಿನಲ್ಲಿ ಸುದೀಪ್‌ ಅವರು ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಿದರು. ಪ್ರಮುಖವಾಗಿ ಬಿಗ್‌ ಬಾಸ್‌ ಮನೆಗೆ ಕಳುಹಿಸುವ ಪತ್ರಗಳಲ್ಲಿ ಚರ್ಚಿಸಿ ಎಂದು ಬರೆಯಲು ಬಿಗ್‌ ಬಾಸ್‌ ಭಯ ಪಡುತ್ತಿದ್ದಾರೆ ಎಂಬ ಪ್ರಶ್ನೆಗೆ ಸದಸ್ಯರ ಪ್ರತಿಕ್ರಿಯೆ ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ.

ಮೊದಲಿಗೆ ಮನೆಯವರಲ್ಲಿ ಸುದೀಪ್‌ ಅವರು ʻʻಈ ಮನೆಯಲ್ಲಿ ಕ್ಯೂ ಪ್ರಕಾರ ಜಗಳ ಆಗುತ್ತೆʼʼಎಂದು ಹೇಳಿದರು. ಪ್ರತಿಕ್ರಿಯೆ ನೀಡಿದ ಪ್ರಶಾಂತ್‌ ಸಂಬರಗಿ ʻʻಖಂಡಿತ ಇಲ್ಲಿ ಯಾರೂ ಜಗಳ ಮಾಡುವುದೇ ಇಲ್ಲ. ನಾನೊಬ್ಬನೇ ಮಾಡುವುದುʼʼಎಂದು ಹೇಳಿದರು. ಈ ಬಗ್ಗೆ ಕಿಚ್ಚ ನಗುತ್ತಾ ಮಾತನಾಡಿ ʻʻನಿಮ್ಮ ಜತೆ ಯಾರೂ ಜಗಳ ಮಾಡುವುದಿಲ್ಲ ಎಂದು ಬೇಸರವಾʼʼಎಂದು ಕೇಳಿದರು. ಅದೇ ರೀತಿ ಈ ಮನೆಯಲ್ಲಿ ಬಿಗ್‌ ಬಾಸ್‌ ಮನೆಗೆ ಕಳುಹಿಸುವ ಪತ್ರಗಳಲ್ಲಿ ಚರ್ಚಿಸಿ ಎಂದು ಬರೆಯಲು ಬಿಗ್‌ ಬಾಸ್‌ ಭಯ ಪಡುತ್ತಿದ್ದಾರೆ ಎಂಬ ಪ್ರಶ್ನೆ ಕೇಳುತ್ತಿದ್ದಂತೆ ಮನೆಯವರು ನಕ್ಕಿದ್ದಾರೆ.

ಇದನ್ನೂ ಓದಿ | Bigg Boss Kannada | ಐದನೇ ಸ್ಪರ್ಧಿಯಾಗಿ ಮನೆಯಿಂದ ಹೊರ ನಡೆದ ನೇಹಾ ಗೌಡ!

ಈ ಬಗ್ಗೆ ರೂಪೇಶ್‌ ಶೆಟ್ಟಿ ಮಾತನಾಡಿ ʻʻಪ್ರತಿ ಬಾರಿ ಚರ್ಚೆ ಮಾಡಿ ಎಂದು ಬಿಗ್‌ ಬಾಸ್‌ ಹೇಳಿದಾಗ, ಇಲ್ಲಿ ನಿಯಮ ಬಿಟ್ಟು ಬೇರೆ ಎಲ್ಲ ಚರ್ಚೆಗಳು ನಡೆಯುತ್ತದೆ. ಎರಡನೇ ಬಾರಿ ಬಿಗ್‌ ಬಾಸ್‌ ಕೊನೆಯ ಕಾಲಾವಕಾಶ ನೀಡಿದ್ದರೂ ರೂಪೇಶ್‌ ರಾಜಣ್ಣ ಅಂತವರು 15 ನಿಮಿಷ ಇದೆಯಲ್ಲ ಎಂದು ಮತ್ತೆ ಚರ್ಚೆಗೆ ಇಳಿಯುತ್ತಾರೆʼʼಎಂದು ರೂಪೇಶ್‌ ರಾಜಣ್ಣ ಕಾಲೆಳೆದರು. ಈ ಬಗ್ಗೆ ಅರುಣ್‌ ಸಾಗರ್‌ ಅವರು ʻʻರೂಪೇಶ್‌ ರಾಜಣ್ಣ ಅವರನ್ನು ನೋಡಿಯೇ ಬಿಗ್‌ ಬಾಸ್‌ ಚರ್ಚಿಸಿ ಎಂದು ಹೇಳುತ್ತಾರೆʼʼಎಂದು ತಮಾಷೆ ಮಾಡಿದರು.

ಸಾನ್ಯ ಅವರ ʻʻಅತಿರೇಕದ ಯೋಚನೆಯಿಂದ ಟಾಸ್ಕ್‌ ಸರಿಯಾಗಿ ನಿಭಾಯಿಸಿಲ್ಲʼʼ ಎಂಬ ಕಿಚ್ಚನ ಪ್ರಶ್ನೆಗೆ , ಪ್ರತಿಕ್ರಿಯಿಸಿದ ನೇಹಾ, ʻʻಕ್ಯಾಪ್ಟನ್‌ ಆದ ಕಾರಣದಿಂದ ಬಹುಶಃ ಅವರು ಕನ್‌ಫ್ಯೂಸ್‌ ಆಗಿ ಓವರ್‌ ಥಿಂಕ್‌ ಮಾಡಿದ್ದಾರೆ. ಎಲ್ಲದರಲ್ಲಿಯೂ ಅವರು ಓವರ್‌ ಥಿಂಕ್‌ ನನ್ನ ಪ್ರಕಾರ ಮಾಡುವುದಿಲ್ಲʼʼ ಎಂದರು. ಸಾನ್ಯ ಈ ಬಗ್ಗೆ ಮಾತನಾಡಿ ʻʻನಾನು ಈ ವಾರ ಓವರ್‌ ಥಿಂಕ್‌ ಮಾಡಿದ್ದು ನಿಜʼʼ ಎಂದು ಒಪ್ಪಿದರು. ರೂಪೇಶ್‌ ಶೆಟ್ಟಿ ಮಾತನಾಡಿ ʻʻನನಗೆ ಯಾವಾಗಲೂ ಸಾನ್ಯ ಓವರ್‌ ಥಿಂಕ್‌ ಮಾಡಬಾರದು ಎಂದು ಸಲಹೆ ನೀಡುತ್ತಿದ್ದರು. ಆದರೆ ಅವಳ ಕ್ಯಾಪ್ಟನ್ಸಿ ವಾರದಲ್ಲಿ ನೋಡಿದ ಮಟ್ಟಿಗೆ ಆಕೆ ಓವರ್‌ ಥಿಂಕ್‌ ಮಾಡಿದ್ದು ನಿಜ, ನಾನೇ ಪರವಾಗಿಲ್ಲ ಎಂದೆನಿಸಿತುʼʼಎಂದರು.

ಇದನ್ನೂ ಓದಿ | Bigg Boss Kannada | ಕಿಚ್ಚ ಸ್ಟೈಲ್‌ಗೆ ಅಭಿಮಾನಿಗಳ ಮೆಚ್ಚುಗೆ, ಐದು ವಾರಗಳ ಅವರ ಗೆಟಪ್‌ ಇಲ್ಲಿದೆ ನೋಡಿ

Exit mobile version