Site icon Vistara News

Bigg Boss Kannada | ವೋಟ್‌ ಮಾಡಿರುವವರು ಫೇಕ್‌ ಅಂದ್ರು ಸೋನು: ಜಶ್ವಂತ್‌-ನಂದಿನಿ ನಡುವೆ ಬಿರುಕು!

Bigg Boss Kannada

ಬೆಂಗಳೂರು: ಬಿಗ್‌ಬಾಸ್‌ನಲ್ಲಿ (Bigg Boss Kannada) ಈ ವಾರದ ಬೆಸ್ಟ್‌ ಹಾಗೂ ವರ್ಸ್ಟ್‌ ಪರ್‌ಫಾರ್ಮ್‌ರ್‌ ಸ್ಪರ್ಧಿಗಳ ಹೆಸರು ರಿವೀಲ್‌ ಆಗಿದೆ. ಜಶ್ವಂತ್‌ ಮತ್ತು ನಂದು ನಡುವೆ ಭಿನ್ನಾಭಿಪ್ರಾಯ ಮೂಡುತ್ತಿದೆ. ರಾಕೇಶ್‌ ಕೂಡ ಸೋನು ಗೌಡಗೆ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಈ ವಾರ ಸೋನು ಗೌಡ ಕಳಪೆ ಪ್ರದರ್ಶನ ತೋರಿಸಿದರೆ, ಬೆಸ್ಟ್‌ ಪರ್‌ಫಾರ್ಮರ್‌ ಆಗಿ ಜಯಶ್ರೀ ಹೊರಹೊಮ್ಮಿದ್ದಾರೆ. ಈ ಕುರಿತು ರಾಕೇಶ್‌ ಮತ್ತು ಸೋನು ನಡುವೆ ಏಟಿಗೆ ಎದಿರೇಟು ನೀಡುವಂತೆ ಜಗಳವಾಗಿದೆ.

ರಾಕೇಶ್‌ ಅವರು ʻʻಸೋನು ಗೌಡ ಕಳಪೆ ಪ್ರದರ್ಶನ ತೋರಿಸಿದ್ದಾರೆ. ಹಾಗೇ ಈ ಮನೆಯಲ್ಲಿ ತುಂಬಾ ಸಲ ಅವರು ಮನೆ ಕೆಲಸಕ್ಕೆ ಬಂದಿದ್ದೇವಾʼʼ ಎಂದು ಹೇಳಿದ್ದಾರೆ. ಈ ಕುರಿತು ʻʻಸೋನು ಗೌಡ ಅವರು ಈ ಮನೆಯಲ್ಲಿ ವೋಟ್‌ ಮಾಡಿರುವವರೆಲ್ಲರೂ ಫೇಕ್‌ʼʼ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ಬಿಗ್‌ಬಾಸ್‌ ಮನೇಲಿ ಕಿಚ್ಚನದೇ ಧ್ಯಾನ: ಅಡುಗೆಯಲ್ಲಿ ಸೈ ಎನಿಸಿಕೊಳ್ತಾರಾ ರಾಕೇಶ್‌?

ಜಯಶ್ರೀ ಈ ವಾರ ಬೆಸ್ಟ್‌ಪರ್‌ಫಾರ್ಮರ್‌ ಆಗಿದ್ದು, ಈ ವಾರದ ಎಲ್ಲ ಟಾಸ್ಕ್‌ಗಳನ್ನು ನಿಭಾಯಿಸಿದ್ದಾರೆ. ಜತೆಗೆ ಈ ಹಿಂದೆ ಚೈತ್ರಾ ಅವರ ಕುರಿತು ಒಳ್ಳೆಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ ಆಟದಲ್ಲಿ ಟೀಂ ಲೀಡರ್‌ ಆಗಿ ನಿಭಾಯಿಸಿ ಒಳ್ಳೆಯ ಪ್ರದರ್ಶನ ತೋರಿದ್ದರು.

ಜಶ್ವಂತ್‌ ಮತ್ತು ನಂದು ನಡುವೆ ಬಿರುಕು?
ನಂದನಿ ಮತ್ತು ಜಶ್ವಂತ್‌ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿದೆ. ನಂದಿನಿ ಅವರು ಜಶ್ವಂತ್‌ ಜತೆ ʻʻಈ ನಡುವೆ ನಿನ್ನ ಕಂಫರ್ಟ್‌ ಜೋನ್‌ ಬೇರೆ ಕಡೆ ಇದೆ. ನಾನು ಏನಾದರೂ ಹೇಳಿದರೆ ಸ್ಟುಪಿಡ್‌ ರೆಸ್ಪಾನ್ಸ್‌ ಮಾಡುತ್ತೀಯ. ಏನಾದರೂ ಆಗುತ್ತಿದ್ದರೆ ಸಮಸ್ಯೆಗಳನ್ನು ಬಗೆಹರಿಸಬೇಕು. ನಮ್ಮಿಬ್ಬರ ನಡುವೆ ಮೊದಲ ಬಾರಿ ಈ ರೀತಿ ಆಗುತ್ತಿದೆʼʼ ಎಂದು ಹೇಳಿಕೊಂಡಿದ್ದಾರೆ.

ಈ ಹಿಂದೆ ಕೂಡ ಸಾನ್ಯ ವಿಚಾರವಾಗಿ ಜಶ್ವಂತ್‌ ಮತ್ತು ನಂದಿನಿ ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದು, ಮುನಿಸಿಕೊಂಡಿದ್ದರು. ನಂದಿನಿ ಬಳಿ ಮಾತನಾಡಿದ ಜಶ್ವಂತ್‌, ʻʻನಿನ್ನನ್ನು ಡೈವರ್ಟ್‌ ಮಾಡಬೇಕೆಂದು ಉಳಿದವರು ಈ ರೀತಿ ಸೀನ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ಆಟದ ಕಡೆ ಗಮನ ಕೊಡುʼʼ ಎಂದು ಕಿವಿಮಾತು ಹೇಳಿದ್ದರು.

ಕಿಚ್ಚ ಸುದೀಪ್‌ ಅವರಿಗೆ ವಿಶಸ್‌
ಬಿಗ್‌ ಬಾಸ್‌ ಸ್ಪರ್ಧಿಗಳಿಂದ ಕಿಚ್ಚ ಸುದೀಪ್‌ ಅವರಿಗೆ ಹುಟ್ಟುಹಬ್ಬದ ನಿಮಿತ್ತ ಶುಭ ಹಾರೈಕೆ ರವಾನೆಯಾಗಿದೆ. ಕ್ಯಾಮರಾ ಮುಂದೆ ಒಟ್ಟಾಗಿ ನಿಂತು ವಿಶ್‌ ಹೇಳಿದ್ದಾರೆ.

ಇದನ್ನೂ ಓದಿ | Bigg Boss Kannada | ನನಗೆ ಅಕ್ಷತಾ ಸ್ವಲ್ಪವೂ ಇಷ್ಟವಿಲ್ಲ, ಆದರೆ ಚೈತ್ರಾ ಫೇವರಿಟ್ ಎಂದ ಜಯಶ್ರೀ

 

Exit mobile version