ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಶೀಘ್ರದಲ್ಲಿಯೇ ಶುರು ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರತಿ ಬಾರಿ ಅಕ್ಟೋಬರ್ ತಿಂಗಳಲ್ಲಿ ಶೋ ಆರಂಭವಾಗುತ್ತದೆ. ಈ ಬಾರಿ ಅದೇ ರೀತಿ ಪ್ಲ್ಯಾನ್ ಮಾಡಲಾಗುತ್ತಿದೆ. ತೆರೆಮರೆಯಲ್ಲಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕೂಡ ನಡೀತಿದೆ ಎನ್ನಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಂಭಾವಿತರ ಪಟ್ಟಿ ವೈರಲ್ ಆಗುತ್ತಿದೆ. ಇದೀಗ ನಟಿ ಜ್ಯೋತಿ ರೈ,ʻʻ ಕನ್ನಡ ಬಿಗ್ ಬಾಸ್‌ನಿಂದ ನನಗೆ ಕರೆ ಬಂದಿದ್ದು ನಿಜಾ. ಆದರೆ.. ನಾನು ಬಂದ ಈ ಅವಕಾಶವನ್ನು ಅಷ್ಟೇ ಗೌರವದಿಂದ ನಾನು ತಿರಸ್ಕರಿಸಿದ್ದೇನೆʼʼ ಎಂದಿದ್ದಾರೆ.
ಸೆಪ್ಟೆಂಬರ್‌ನಲ್ಲೇ ಈ ಬಾರಿ ಸೀಸನ್ 11 ಶುರುವಾಗುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ಕಿರುತೆರೆ ಕಲಾವಿದರ ಜತೆಗೆ ಬೇರೆ ಬೇರೆ ಕ್ಷೇತ್ರಗಳ ಹಲವರು ದೊಡ್ಮನೆ ಪ್ರವೇಶಿಸಲಿದ್ದಾರೆ. ವಿವಾದಾತ್ಮಕ ವ್ಯಕ್ತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ದೊಡ್ಮನೆ ಒಳಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ‘ಅನುರಾಗ ಸಂಗಮ’, ‘ಜೋಗುಳ’, ‘ಗೆಜ್ಜೆಪೂಜೆ’, ‘ಲವಲವಿಕೆ’, ‘ಕನ್ಯಾದಾನ’, ‘ಗೆಜ್ಜೆಪೂಜೆ’, ‘ಪ್ರೇರಣಾ’, ‘ಕಿನ್ನರಿ’, ‘ಮೂರು ಗಂಟು’, ‘ಕಸ್ತೂರಿ ನಿವಾಸ’ ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಜ್ಯೋತಿ ರೈ ಅವರಿಗೆ ಬಿಗ್ ಬಾಸ್ ಆಫರ್ ಬಂದಿತ್ತು. ಆದರೆ ನಟಿ ಈ ಅವಕಾಶವನ್ನು ಅಷ್ಟೇ ಗೌರವದಿಂದ ನಾನು ತಿರಸ್ಕರಿಸಿದ್ದೇನೆ ಎಂದಿದ್ದಾರೆ.
ʻʻಈಗಾಗಲೇ ಒಪ್ಪಿಕೊಂಡ ಕೆಲಸಗಳ ಕಾರಣದಿಂದ ನಾನು ಈ ನಿರ್ಧಾರ ತೆಗೆದುಕೊಂಡಿದ್ದು ಅಭಿಮಾನಿಗಳ ಬೆಂಬಲಕ್ಕೆ ಮತ್ತು ಬಿಗ್ ಬಾಸ್ ನೀಡಿದ ಅವಕಾಶಕ್ಕೆ ನಾನು ಚಿರಋಣಿʼʼ ಎಂದು ತಮ್ಮ ಇನ್ಸ್ಟಾಗ್ರಾಮ್ಸ್ಟೋರಿಯಲ್ಲಿ ಜ್ಯೋತಿ ರೈ ಬರೆದುಕೊಂಡಿದ್ದಾರೆ. ಉಳಿದಂತೆ ಈ ಬಾರಿಯ ಬಿಗ್ ಬಾಸ್‌ನಲ್ಲಿ ‘ಬೃಂದಾವನ’ ಖ್ಯಾತಿಯ ವರುಣ್ ಆರಾಧ್ಯ.. ಯೂಟ್ಯೂಬರ್ ವರ್ಷಾ ಕಾವೇರಿ.. ತುಕಾಲಿ ಸಂತು ಅವರ ಪತ್ನಿ ಮಾನಸಾ.. ಸುನಿಲ್ ರಾವ್.. ಮೋಕ್ಷಿತಾ ಪೈ.. ರೀಲ್ಸ್ ರೇಷ್ಮಾ.. ಹೀಗೆ ಒಂದಿಷ್ಟು ಹೆಸರುಗಳು ಅಂತೆ-ಕಂತೆ ಸಂತೆಯಲ್ಲಿ ಕೇಳಿ ಬರುತ್ತಿವೆ.
ಇದನ್ನೂ ಓದಿ: Bigg Boss Kannada: ಈ ಬಾರಿ ʻಬಿಗ್ ಬಾಸ್ ಕನ್ನಡʼ ಹೋಸ್ಟ್ ಮಾಡ್ತಿದ್ದಾರಂತೆ ರಿಷಬ್ ಶೆಟ್ಟಿ; ಕಿಚ್ಚ ಸುದೀಪ್ ಔಟ್?
ಬಾರಿ ಸುದೀಪ್ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿಲ್ಲ ಎಂದು ವರದಿಯಾಗಿದೆ.ಸಾಮಾಜಿಕ ಮಾಧ್ಯಮದಲ್ಲಿ ಕಿಚ್ಚ ಸುದೀಪ್ ಅವರು ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ರಮೇಶ್ ಅರವಿಂದ್ ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಬ್ಬರಲ್ಲಿ ಒಬ್ಬರು ಹೋಸ್ಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ, ರಮೇಶ್ ಅರವಿಂದ ಈಗಾಗಲೇ ಮಹಾನಟಿ ಶೋ ಮೂಲಕ ವೀಕ್ಷಕರನ್ನು ತಲುಪಿದಿದ್ದಾರೆ. ಈಗಾಗಲೆ ಕೋಟ್ಯಾಧಿಪತಿ ಮತ್ತು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರದಲ್ಲಿ ರಮೇಶ್ ಅರವಿಂದ್ ಹೋಸ್ಟ್ ಮಾಡಿದ್ದಾರೆ.ಇನ್ನು ರಿಷಬ್ ಕೂಡ ಮಾಡಬಹುದು ಎನ್ನಲಾಗಿದೆ.