Site icon Vistara News

Bigg Boss Kannada | ಕೆಲಸಕ್ಕೆ ಚಕ್ಕರ್‌, ನಗುವಿಗೆ ಹಾಜರ್: ಕಾವ್ಯಶ್ರೀ-ರಾಕೇಶ್ ಮುನಿಸು!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಅನುಪಮಾ ಅವರು ಬಿಗ್‌ ಬಾಸ್‌ ಟಾಸ್ಕ್‌ ನಿಯಮಗಳನ್ನು ಓದುವಾಗ ಕಾವ್ಯಶ್ರೀ ನಗಾಡುತ್ತಿದ್ದರು. ಈ ಬಗ್ಗೆ ರಾಕೇಶ್‌ ಅಡಿಗ ಅವರು ಕಾವ್ಯಶ್ರೀಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ಇಬ್ಬರ ಜಗಳ ತಾರಕಕ್ಕೇರಿದೆ.

ಅನುಪಮಾ ಬಿಗ್‌ ಬಾಸ್‌ ಟಾಸ್ಕ್‌ ನಿಯಮ ಓದುವಾಗ ಕಾವ್ಯಶ್ರೀ ಅವರು ನಗುತ್ತಿದ್ದರು. ಇದನ್ನು ಗಮನಿಸಿದ ರಾಕೇಶ್‌ ಅಡಿಗ ಅವರು ಕಾವ್ಯಶ್ರೀಗೆ ಮಾತನಾಡಿ ʻʻಓದುವಾಗ ನೀವು ಜೋಕ್‌ ಮಾಡಿ ನಗುವುದು ಸರಿ ಅಲ್ಲ. ಅದು ನಮಗೆ ಡಿಸ್ಟರ್ಬ್‌ ಆಗುತ್ತದೆ.ಅಡುಗೆ ಮಾಡುವಾಗ ಸಹಾಯ ಮಾಡು ಎಂದರೆ ನೀನು ಸಿರಿಯಸ್‌ ಆದೆ. ಇಲ್ಲಿ ನಿನಗೆ ಕಥೆ ಹೇಳೋಕೆ ಕರ್ದಿಲ್ಲ. ಕೆಲಸ ಮಾಡಲು ಕರೆದಿದ್ದುʼʼಎಂದು ಗರಂ ಆಗಿ ಹೇಳಿದರು. ಪ್ರತಿಕ್ರಿಯೆ ನೀಡಿದ ಕಾವ್ಯಶ್ರೀ ʻʻಮನೆಯಲ್ಲಿ ಎಲ್ಲಿ ಹೇಗಿರಬೇಕು ಎನ್ನುವ ಅರಿವು ನನಗಿದೆ. ಅದನ್ನು ನೀವು ನನಗೆ ಹೇಳುವ ಅವಶ್ಯಕತೆ ಇಲ್ಲ. ನಗುವುದು ನನ್ನ ಹಕ್ಕುʼʼ ಎಂದು ವಾದ ಮಾಡಿದರು.

ಇದನ್ನೂ ಓದಿ | Bigg Boss Kannada | ಪ್ರ್ಯಾಂಕ್‌ ಮಾಸ್ಟರ್‌ ರಾಕೇಶ್‌ ಅಡಿಗ ರ್‍ಯಾಪ್‌ ಹಾಡಿನ ಹೂರಣ: ವೈರಲ್‌ ಆಯ್ತು ವಿಡಿಯೊ!

ಕಾವ್ಯಶ್ರೀ ಬಗ್ಗೆ ಹಿಂದಿನ ವಾರ ಸ್ಪರ್ಧಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಸೋಷಿಯಲ್‌ ಮೀಡಿಯಾದಲ್ಲಿಯೂ ಕಾವ್ಯಶ್ರೀ ಅಟದ ಬಗ್ಗೆ ಪ್ರೇಕ್ಷಕರು ಕಮೆಂಟ್‌ ಮೂಲಕ ಹೊಗಳಿದ್ದರು. ಇದೀಗ ಕಲರ್ಸ್‌ ಕನ್ನಡ ಪ್ರೋಮೊ ಹಂಚಿಕೊಂಡಿದ್ದು, ಕಾವ್ಯಶ್ರೀ ಗೌಡ ಅವರಿಗೆ ಸಿರಿಯೆಸ್‌ನೆಸ್‌ ಕಡಿಮೆ ಆಗಿದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ | Bigg Boss Kannada | ದೀಪಾವಳಿ ಸಂಭ್ರಮಕ್ಕೆ ಸ್ಪರ್ಧಿಗಳಿಂದ ಹಾಡು, ಡಾನ್ಸ್, ಮಸ್ತ್ ಮನರಂಜನೆ!

Exit mobile version