Site icon Vistara News

Bigg Boss Kannada | ಒಂದು ಹೇಳಿದ್ರೆ ಜಾಸ್ತಿ, ಇನ್ನೊಂದು ಹೇಳಿದ್ರೆ ಕಮ್ಮಿ: ಕ್ಯಾಪ್ಟನ್‌ ಆದ ಮೇಲೆ ಕಾವ್ಯಶ್ರೀ ಬದಲಾದರಾ?

Bigg Boss Kannada (kavyashree captain)

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada ) ಎಂಟನೇ ವಾರ ಕಾವ್ಯಶ್ರೀ ಗೌಡ ಕ್ಯಾಪ್ಟನ್‌ ಆಗಿದ್ದಾರೆ. ಗೊಂಬೆ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದು, ಸ್ಪರ್ಧಿಗಳ ಕಿರುಚಾಟದ ನಡುವೆ ಶಾಂತವಾಗಿದ್ದ ಕಾವ್ಯಶ್ರೀ ಅವರು ಉಗ್ರರೂಪ ತಾಳಿದಂತಿದೆ. ಸದಸ್ಯರ ನಡವಳಿಕೆಯಲ್ಲಿಯೂ ಯಾಕಾದರೂ ಕಾವ್ಯಶ್ರೀ ಕ್ಯಾಪ್ಟನ್‌ ಆದರೋ ಎಂದು ಎನಿಸಬೇಕು ಅಷ್ಟರಮಟ್ಟಿಗೆ ಕಾವ್ಯಾ ನಡವಳಿಕೆಯಲ್ಲಿ ಬದಲಾವಣೆಯಾಗಿದೆ.

ಕಾವ್ಯಶ್ರೀ ಕ್ಯಾಪ್ಟನ್ ಆದ ಮೇಲೆ ತಮ್ಮ ನಡವಳಿಕೆಯಲ್ಲಿ ಸಂಪೂರ್ಣವಾಗಿ ಬದಲಾವಣೆ ಮಾಡಿಕೊಂಡಿದ್ದಾರೆ. ಕ್ಯಾಪ್ಟನ್ ಆಗುವುದಕ್ಕೂ ಮುನ್ನ, ಎಲ್ಲರೊಂದಿಗೆ ನಗು ನಗುತ್ತ ಮಾತನಾಡುತ್ತಿದ್ದರು ಕಾವ್ಯಶ್ರೀ ಗೌಡ. ಇಷ್ಟು ದಿನ ಅಡುಗೆ ಮನೆಯೆಂದರೆ ದೂರ ಓಡುವ ಕಾವ್ಯಾ, ಕ್ಯಾಪ್ಟನ್ ಆದ ಮೇಲೆ ಅಂದೊಂದು ದಿನ ಮನೆಯವರು ದೀಪಿಕಾ ಅವರನ್ನು ರೇಗಿಸುತ್ತ ಇದ್ದರು. ಇದನ್ನು ಸಹಿಸದ ಕಾವ್ಯಾ ತಾವೇ ಅಡುಗೆ ಮಾಡಲು ನಿಂತಿದ್ದರು. ಇದೀಗ ಅರುಣ್ ಸಾಗರ್, ರೂಪೇಶ್ ರಾಜಣ್ಣ, ರಾಕೇಶ್, ಅಮೂಲ್ಯ, ವಿನೋದ್‌ ಗೊಬ್ಬರಗಾಲ ಇಷ್ಟು ಜನ ಸೇರಿ ಬಾಗಿನಲ್ಲಿ ಕಾಯುತ್ತಿದ್ದರು. ಇದನ್ನು ಕಂಡ ಕಾವ್ಯಶ್ರೀ, ಎಲ್ಲರೂ ಲಿವಿಂಗ್‌ ಏರಿಯಾಗೆ ಬನ್ನಿ ಎಂದಿದ್ದಾರೆ. ಡೋರ್ ಹಾಳು ಮಾಡಬೇಡಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ | Bigg Boss Kannada | ಗೊಂಬೆಗಳ ನಡುವೆ ದೊಂಬಿ ಆಟ: ಸ್ಪರ್ಧಿಗಳ ನಡುವೆ ಹೆಚ್ಚಾಗ್ತಿದೆ ಕಾದಾಟ!

Bigg Boss Kannada

ಇಷ್ಟು ದಿನ ಕ್ಯಾಪ್ಟನ್ ಆದವರು, ಏನಾದರೂ ಬಿಗ್ ಬಾಸ್‌ನಿಂದ ಸಂದೇಶ ಬಂದರೆ ಅಥವಾ ಆಟವಾಡುವುದಕ್ಕೆ ನಿಯಮಗಳನ್ನು ಹೇಳುವಾಗ ಲಿವಿಂಗ್ ಏರಿಯಾದಲ್ಲಿ ಕುಳಿತುಕೊಳ್ಳುವಂತೆ ಹೇಳುತ್ತಿದ್ದರು. ಕ್ಯಾಪ್ಟನ್ ಕೂಡ ಈ ಬಗ್ಗೆ ಹೇಳುತ್ತ ಇರಲಿಲ್ಲ. ಬದಲಿಗೆ ಎಲ್ಲರೂ ಅವರವರ ಕರ್ತವ್ಯದಂತೆ ಬಂದು ಕುಳಿತುಕೊಳ್ಳುತ್ತಿದ್ದರು. ಆದರೆ ಈ ಬಾರಿ ಆ ರೀತಿ ನಡೆಯುತ್ತಿಲ್ಲ. ಕಾವ್ಯಶ್ರೀ ಆರ್ಡರ್ ಮಾಡಲು ಯತ್ನಿಸುತ್ತಿದ್ದಾರೆ.”ಹೇ ಎಲ್ಲ ಬಂದು ಲಿವಿಂಗ್ ಏರಿಯಾದಲ್ಲಿ ಬಂದು ಕುಳಿತುಕೊಳ್ಳಿ” ಎಂದ ಮಾತು ರೂಪೇಶ್ ರಾಜಣ್ಣ ಅವರನ್ನು ಕೆರಳಿಸಿದೆ.

ಲಿವಿಂಗ್ ಏರಿಯಾದಲ್ಲಿ ಬಂದು ಕುಳಿತುಕೊಳ್ಳಿ ಎನ್ನುತ್ತಿದ್ದಂತೆ ಅಲ್ಲಿದ್ದವರೆಲ್ಲ ಅದನ್ನು ನಿರಾಕರಿಸಿದ್ದಾರೆ. ಇದಕ್ಕೆ ಉತ್ತರಿಸಿದ ಕಾವ್ಯಾ, ”ಬಾಗಿಲ ಮೇಲೆ ಬೀಳಬೇಡಿ ಹಾಳಾಗುತ್ತೆ. ನಾನು ಬಾಗಿಲ ಮೇಲೆ ಬೀಳಬೇಡಿ ಎಂದು ಹೇಳಿದ್ದಷ್ಟೇ” ಎಂದು ವಾಯ್ಸ್ ಜೋರು ಮಾಡಿದ್ದಾರೆ. ತಕ್ಷಣ ಮಾತನಾಡಿದ ಅರುಣ್ ಸಾಗರ್, ”ಎಲ್ಲಿ ನಿಂತುಕೊಳ್ಳಬೇಕು, ಎಲ್ಲಿ ಕುಳಿತುಕೊಳ್ಳಬೇಕು ಎಂದು ಕ್ಯಾಪ್ಟನ್ ಹೇಳುವ ಹಾಗಿಲ್ಲ” ಎಂದಿದ್ದಾರೆ. ಆಗ ಕಾವ್ಯಾ ಮತ್ತಷ್ಟು ರೊಚ್ಚಿಗೆದಿದ್ದಾರೆ.

Bigg Boss Kannada

ಇದನ್ನೂ ಓದಿ | Bigg Boss Kannada | ಗೊಂಬೆ ತಯಾರಿಕೆಯಲ್ಲಿ ದೊಡ್ಡ ಮಕ್ಕಳ ಜಗಳ: ಇದು ಗೊಂಬೆಯಾಟವಯ್ಯಾ!

Exit mobile version