Site icon Vistara News

Bigg Boss Kannada | ಹೆಣ್ಣಿಗೆ ಹೆಣ್ಣೇ ಶತ್ರು , ಆ ಗ್ರೂಪ್‌ನಲ್ಲಿ ಇದ್ದಿದ್ದರೆ ನಾಮಿನೇಟ್‌ ಆಗ್ತಾ ಇರಲಿಲ್ಲ: ಕಾವ್ಯಶ್ರೀ

Bigg Boss Kannada

ಬೆಂಗಳೂರು: ಬಿಗ್‌ ಬಾ ಸೀಸನ್‌ 9ರ (Bigg Boss Kannada) 23ನೇ ನಾಮಿನೇಟ್‌ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈ ವಾರ ನಾಮಿನೇಟ್‌ ಆದ ಆರ್ಯವರ್ಧನ್‌ ಮತ್ತು ಕಾವ್ಯಶ್ರೀ ಬಗ್ಗೆ ಸ್ಪರ್ಧಿಗಳು ಕಾರಣ ನೀಡಿದ್ದಾರೆ. ಆರ್ಯವರ್ಧನ್‌ ಕಿಚ್ಚ ಜತೆ ಮಾತಾಡಿದ ರೀತಿಗೆ ಹಾಗೂ ಕಾವ್ಯಶ್ರೀ ಬರು ಬರುತ್ತಾ ಟಾಸ್ಕ್‌ ಆಡುತ್ತಿಲ್ಲ , ವೀಕ್‌ ಆಗುತ್ತಿದ್ದಾರೆ ಎಂಬ ಕಾರಣಕ್ಕೆ ನಾಮಿನೇಟ್‌ ಮಾಡಿದ್ದಾರೆ. ಕಾವ್ಯಶ್ರೀ ಈ ಕುರಿತು ಪ್ರಶಾಂತ್‌ ಸಂಬರಗಿ ಜತೆ ಮಾತನಾಡಿದ್ದಾರೆ.

ನಾಮಿನೇಟ್‌ ಆದ ನಂತರ ಪ್ರಶಾಂತ್‌ ಸಂಬರಗಿ ಅವರು ಕಾವ್ಯಶ್ರೀ ಜತೆ ಮಾತಾಡಿದ್ದಾರೆ. ಪ್ರಶಾಂತ್‌ ಸಂಬರಗಿ ಕಾವ್ಯಶ್ರೀಗೆ ಏನು ಹೆಣ್ಣು ಮಕ್ಕಳೆಲ್ಲ ಸೇರಿ ಒಟ್ಟಿಗೆ ನಿಮ್ಮನ್ನು ನಾಮಿನೇಟ್‌ ಮಾಡಿದ್ದಾರಲ್ಲ? ಎಂದು ಕೇಳಿದ್ದಾರೆ. ಕಾವ್ಯಶ್ರೀ ಪ್ರತಿಕ್ರಿಯೆ ನೀಡಿ ʻʻಹೆಣ್ಣಿಗೆ ಹೆಣ್ಣೆ ಶತ್ರು. ನಾಮಿನೇಟ್‌ ಆಗಬಾರದು ಎಂದರೆ ಆ ಗ್ರೂಪ್‌ನಲ್ಲಿ ಇರಬೇಕಾಗುತ್ತದೆ. ಆ ಗ್ರೂಪ್‌ನಲ್ಲಿದ್ರೆ ನಾಮಿನೇಟ್‌ ಆಗಲ್ಲ, ಅಂದರೆ ಅವರು ನಾಮಿನೇಟ್‌ ಮಾಡಲ್ಲ. ಹಾಗಂತ ಅಲ್ಲಿ ನಮಗೆ ಕಿಂಗ್‌ ತರ ಹೇಳಿದ್ದು ಮಾಡಕ್ಕೆ ಆಗಲ್ಲ. ನಮ್‌ ಪಾಡಿಗೆ ನಾವು ಇರಬೇಕು. ಇಂಪ್ರೆಸಿವ್‌ ಮಾಡಕ್ಕೆ ಹೋದರೆ ಫೇಕ್‌ ಆಗ್‌ ಬಿಡ್ತೀವಿ. ಇವಾಗ ಅವರು ಹೇಳಿದಕ್ಕೆಲ್ಲ ತಲೆ ಅಲ್ಲಾಡಿಸಿದ್ರೆ ಅಥವಾ ಏನೋ ಹೇಳಕ್ಕೆ ಹೋಗಿ, ನಾವು ಏನೋ ಹೇಳ್ತೀವಿ ಅದು ಫೇಕ್‌ ಅನ್ಸತ್ತೆ, ನಾನು ಅದು ಮಾಡ್ತಿಲ್ಲ, ಅದು ಇಷ್ಟವೂ ಇಲ್ಲʼʼ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ನಾಲ್ಕನೇ ವಾರ ನಾಮಿನೇಟ್‌ ಆದ ಸ್ಪರ್ಧಿಗಳು ಇವರೇ: ಏನಿದು ಪಟ ಪಟ ಕ್ಯಾಪ್ಟನ್ ಚಿತ್ರಪಟ?

ನಂತರ ಪ್ರಶಾಂತ್‌ ಸಂಬರಗಿ ಪ್ರತ್ಯೇಕವಾಗಿ ದಿವ್ಯಾ ಉರುಡುಗ ಅವರನ್ನು ಮಾತನಾಡಿಸಿದ್ದಾರೆ ʻʻನಮ್ಮ ಟೀಮ್‌ಗೆ ಬಾ. ಅವಕಾಶ ಸಿಕ್ಕರೆ. ಈ ಸಲ ಕ್ಯಾಪ್ಟನ್ಸಿ ಟಾಸ್ಕ್‌ಗೆ ಹೋಗುತ್ತೀಯಾ ನನ್ನ ಜತೆ ಆಡು ನೀನುʼʼ ಎಂದಿದ್ದಾರೆ. ದಿವ್ಯಾ ಪ್ರತಿಕ್ರಿಯೆ ನೀಡಿದ್ದು ʻʻಯಾವ ಟೀಮ್‌ಗೆ ಹೋಗುತ್ತೇನೆ ಅಲ್ಲಿ ಚೆನ್ನಾಗಿ ಆಡುತ್ತೇನೆʼʼ ಎಂದರು.

ಇದನ್ನೂ ಓದಿ | Bigg Boss Kannada | ಈ ವಾರ ಅರುಣ್‌ ಸಾಗರ್‌ಗೆ ಕಿಚ್ಚನ ಚಪ್ಪಾಳೆ!

Exit mobile version