Site icon Vistara News

Bigg Boss Kannada | ಸೋನು ಗೌಡಗೆ ಕ್ಲಾಸ್‌ ತೆಗೆದುಕೊಂಡ ಕಿಚ್ಚ: ಈ ವಾರ ನಾಮಿನೇಟ್‌ ಆದ ಸ್ಪರ್ಧಿಗಳು ಇವರೇ!

Bigg Boss Kannada

ಬೆಂಗಳೂರು: ಬಿಗ್ ಬಾಸ್ ಒಟಿಟಿಯಲ್ಲಿ (Bigg Boss Kannada) ನಾಲ್ಕನೇ ವಾರ ಡಬಲ್ ಎಲಿಮಿನೇಷನ್ ಆಗಿದೆ. ಚೈತ್ರಾ ಹಾಗೂ ಅಕ್ಷತಾ ಕುಕ್ಕಿ ಮನೆಯಿಂದ ಹೊರ ಬಂದಿದ್ದಾರೆ. ಐದನೇ ವಾರ ಮತ್ತೆ ನಾಮಿನೇಷನ್‌ ಪ್ರಕ್ರಿಯೆ ಆರಂಭಗೊಂಡಿದೆ. ಈ ವಾರ ಜಯಶ್ರೀ, ಸೋನು ಗೌಡ, ನಂದಿನಿ, ಸೋಮಣ್ಣ ಮಾಚಿಮಾಡ ಹಾಗೂ ಆರ್ಯವರ್ಧನ್‌ ಗುರೂಜಿ ನಾಮಿನೇಟ್‌ ಆಗಿದ್ದಾರೆ. ಬಿಗ್‌ ಬಾಸ್‌ ಕ್ಯಾಪ್ಟನ್‌ಶಿಪ್‌ನಲ್ಲಿರುವ ರೂಪೇಶ್‌ ಅವರಿಗೆ ನೇರವಾಗಿ ನಾಮಿನೇಟ್‌ ಮಾಡಲು ಬಿಗ್‌ ಬಾಸ್‌ ಆದೇಶ ನೀಡಿತ್ತು. ಅದರಂತೆ ಜಸ್ವಂತ್‌ ಅವರನ್ನು ಈ ವಾರ ನೇರವಾಗಿ ನಾಮಿನೇಟ್‌ ಮಾಡಿದ್ದಾರೆ.

ಜನರ ವೋಟಿನಿಂದಾಗಿ ಈ ವಾರ ರಾಕೇಶ್‌ ಅಡಿಗ ಅವರು ನೇರವಾಗಿ ಫಿನಾಲೆಗೆ ಹೋಗಿದ್ದಾರೆ. ಅದೇ ರೀತಿ ಕ್ಯಾಪ್ಟನ್ ಆಗುವ ಮೂಲಕ ಐದನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ರೂಪೇಶ್ ಶೆಟ್ಟಿ ಸೇಫ್ ಆಗಿದ್ದಾರೆ. ಹೀಗಾಗಿ, ನೇರವಾಗಿ ರೂಪೇಶ್ ಶೆಟ್ಟಿ ಆರನೇ ವಾರ ಅಂದರೆ ಫಿನಾಲೆ ವಾರಕ್ಕೆ ಲಗ್ಗೆ ಇಟ್ಟಿದ್ದಾರೆ. ಈ ವಾರ ಇವರಿಬ್ಬರನ್ನು ಹೊರತು ಪಡಿಸಿ ನಾಮಿನೇಟ್‌ ಮಾಡಲು ಬಿಗ್‌ ಬಾಸ್‌ ಆದೇಶ ನೀಡಿತ್ತು.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಿಂದ ಈ ಇಬ್ಬರಿಗೆ ಗೇಟ್‌ ಪಾಸ್‌?

ಸೋನು ಗೌಡಗೆ ಸಖತ್‌ ಕ್ಲಾಸ್‌ ತೆಗೆದುಕೊಂಡ ಕಿಚ್ಚ!
ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಮನೆಯಲ್ಲಿ ಸೋನು ಗೌಡ ನಡೆದುಕೊಂಡ ರೀತಿ ಇಷ್ಟವಾಗದೇ ಕ್ಲಾಸ್‌ ತೆಗೆದುಕೊಂಡಿದ್ದಾರೆ. ʻʻನಿಮ್ಮ ಮಾತುಗಳು ಕ್ಯೂಟ್‌ ಆಗಿರಲಿಲ್ಲ. ಬಿಗ್‌ ಬಾಸ್‌ಗೆ ಅವಮಾನ ಮಾಡುವ ರೀತಿಯಲ್ಲಿ ಇತ್ತು. ಇನ್ನು ಮುಂದೆ ನಿಮಗೆ ಬಿಗ್‌ ಬಾಸ್‌ ಆದೇಶವೇ ನೀಡುವುದಿಲ್ಲ ಎಂದುಕೊಳ್ಳಿʼʼ ಎಂದು ಸುದೀಪ್‌ ಎಚ್ಚರಿಕೆ ನೀಡಿದ್ದಾರೆ.

ಅಷ್ಟೇ ಅಲ್ಲದೇ ಅಡುಗೆ ವಿಚಾರಕ್ಕೆ ʻʻಬಿಗ್‌ ಬಾಸ್‌ ಮನೆಯಲ್ಲಿ ಅಡುಗೆ ಮಾಡುವುದು ಮುಖ್ಯ ಕೆಲಸ. ಸೋನು ಗೌಡ ನೀವು ಅಡುಗೆ ಬರುವುದಿಲ್ಲ ಎಂದು ತಪ್ಪಿಸಿಕೊಂಡಿದ್ದೀರಿ. ತಮಗೆ ಅಡುಗೆ ಬರುತ್ತದೆ ಎಂಬುದು ಮುಚ್ಚಿಟ್ಟಿದ್ದೀರಿ. ನಾಲ್ಕನೇ ವಾರ ಸತ್ಯ ಬಯಲಾಗಿದೆʼʼ ಎಂದು ಸುದೀಪ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಮನೆಯಲ್ಲಿ ಉಳಿದ ಸದಸ್ಯರು ಏಕವಚನದಲ್ಲಿ ಮಾತನಾಡುವದರ ಬಗ್ಗೆ ʻʻನಿಮ್ಮಲ್ಲಿ ಮಾತನಾಡುವ ಏಕವಚನ ಚಪ್ಪಲಿ ತೆಗೆದುಕೊಂಡು ಹೊಡೆದಂತೆ ಇರುತ್ತದೆ. ಸ್ನೇಹಿತರಾದ ನಂತರ ಏಕವಚನ ಇರಬಾರದು ಅಂತಲ್ಲ. ಆದರೆ ನಿಮ್ಮ ಏಕವಚನದಲ್ಲಿ ಗೌರವ ಕಾಣಿಸಿಲ್ಲʼʼ ಎಂದು ಸುದೀಪ್‌ ಹೇಳಿದ್ದಾರೆ.

ಒಟ್ಟಿನಲ್ಲಿ ಒಟಿಟಿಯಲ್ಲಿ ಮೊದಲ ಬಾರಿಗೆ ಪ್ರಸಾರವಾಗಿ, ಜನಮನ್ನಣೆಗೆ ಪಾತ್ರವಾಗಿರುವ ಬಿಗ್‌ ಬಾಸ್‌ ಶೋ ಮುಗಿಯಲು ದಿನಗಣನೆ ಆರಂಭವಾಗಿದೆ. ಜನರ ಕುತೂಹಲ ಹೆಚ್ಚಿಸಿದೆ. ಅಕ್ಷತಾ ಹಾಗೂ ಚೈತ್ರಾ ಅವರು ಹೊರಬಂದಿರುವುದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರೂ ಮುಂದಿನ ದಿನಗಳಲ್ಲಿ ಯಾರು ಉಳಿಯಲಿದ್ದಾರೆ, ಯಾರು ಹೊರಬರಲಿದ್ದಾರೆ ಹಾಗೂ ಅಂತಿಮವಾಗಿ ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಕುತೂಹಲವಂತೂ ಹೆಚ್ಚಾಗಿದೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಿಂದ ಅಕ್ಷತಾ ಕುಕ್ಕಿ, ಚೈತ್ರಾ ಹಳ್ಳಿಕೇರಿ ಔಟ್!

Exit mobile version