ಬೆಂಗಳೂರು : ಬಿಗ್ ಬಾಸ್ ಸೀಸನ್ 9ರ (Bigg Boss Kannada) ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಆರ್ಯವರ್ಧನ್, ರೂಪೇಶ್ ಹಾಗೂ ಸಾನ್ಯಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರಶಾಂತ್ ಸಂಬರಗಿ ವಿಚಾರವಾಗಿ ಮೂವರು ಕ್ಯಾಪ್ಟನ್ ಬೆಡ್‌ರೂಮಿನಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಮೂವರ ನಡವಳಿಕೆ ನೋಡುಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಸುದೀಪ್ ಪ್ರಸ್ತಾಪಿಸಿದ್ದಾರೆ.
ಗಳಗಳನೆ ಅತ್ತ ರೂಪೇಶ್ ಶೆಟ್ಟಿ
ರೂಪೇಶ್ ಮಾತನಾಡಿ ʻʻನಾವು ಅಲ್ಲಿ ಮಲಗಿಕೊಂಡಿದ್ದು ಸತ್ಯ. ಆದರೆ ಸಿರಿಯಸ್‌ನೆಸ್ ಅರ್ಥ ಮಾಡಿಕೊಂಡಿಲ್ಲ. ನಾವು ಮಾತಾಡ್ತಾ ಇರುವಾಗ ಅಲ್ಲಿ ಕ್ಯೂ ಇತ್ತು. ನಮ್ಮಲ್ಲಿ ಇರುವ ಒಂದು ಕಫರ್ಟ್ ಜೋನ್‌ನಲ್ಲಿ, ಮಾತನಾಡಬೇಕು ಅಂತ ಹತ್ತಿರ ಬಂದೇ ಹೊರತುʼʼ ಎಂದರು. ಸುದೀಪ್ ಮಾತನಾಡಿ ʻʻಎಲ್ಲಾ ಸ್ಪರ್ಧಿಗಳಿಗೆ ಹೇಳುವುದಿಷ್ಟೇ ಯಾರು ಹತ್ತಿರ ಬರವುದು, ಹಗ್ ಮಾಡಿರುವುದು ಸಮಸ್ಯೆ ಬಂದಿಲ್ಲ 8 ಸೀಸನ್ ನಮಗೆ ಬೇಕಿತ್ತಾ? ಹೊರಗಡೆ ದೃಷ್ಟಿಕೋನ ಎಲ್ಲರಿಗೂ ಚೆನ್ನಾಗಿದೆ. ಬಿಗ್ ಬಾಸ್ ಅಂದರೆ ರಿಲೇಶನ್‌ಶಿಪ್. ಇಲ್ಲಿ ವೈರತ್ವ, ಸ್ನೇಹ, ಎಲ್ಲವೂ ರಿಲೇಶನ್‌ಶಿಪ್. ನೀವು ಡಿಸ್‌ಕಂಫರ್ಟ್‌ಗೆ ಹೋಗಬೇಕು ಎನ್ನುವ ಉದ್ದೇಶ ನಮ್ಮದಲ್ಲ. ಆದರೆ ಇದು ಏನಕ್ಕೆ ಹೇಳುತ್ತಾ ಇದ್ದೇವೆ ತಿಳಿದುಕೊಳ್ಳಿʼʼ ಎಂದರು.
ಇದನ್ನೂ ಓದಿ | Bigg Boss Kannada | ಪ್ರಶಾಂತ್-ರೂಪೇಶ್ ಮಾತಿನ ಚಕಮಕಿ: ಅವರವರ ಭಾವಕ್ಕೆ ಅವರವರ ವಾದ, ಯಾವುದು ಸರಿ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ತಯಾರಾಗಿದ್ದೇನೆ!
ರೂಪೇಶ್ ನಂತರ ಮಾತನಾಡಿ ʻʻನಾವು ಏನೋ ಆಲೋಚನೆಯಲ್ಲಿ ಬೆಡ್ ಅಲ್ಲಿ ಮಲಗಿ ಮಾತನಾಡಿದ್ದೇವೆ. ಬೇರೆ ಯಾವ ಉದ್ದೇಶವೂ ಇರಲಿಲ್ಲ. ನನ್ನ ತಾಯಿಗಿಂತ ದೊಡ್ಡದು ಬೇರೆ ಇಲ್ಲ. ಆ ತರ ಯಾವುದೇ ಭಾವನೆ ನನಗಿಲ್ಲ. ಆ ತರ ಪೋಟ್ರೆ ಆಗೋಕ್ಕೆ ತಯಾರಿಲ್ಲ. ಆ ತರ ಕಂಡರೆ ಇವತ್ತೇ ನಾನು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ತಯಾರಾಗಿದ್ದೇನೆ. ಆ ತರ ಕಂಡಿದ್ದರೆ ಅದು ನಂದೇ ತಪ್ಪುʼʼ ಎಂದು ಅತ್ತರು.
ನಾವು ಸೇತುವೆ ಅಷ್ಟೇ
ಸುದೀಪ್ ʻʻಒಳಗೆ ಹೋಗುವುದು ನಿಮ್ಮ ಆಸೆ, ಹಾಗೇ ಅದು ನಿಮ್ಮ ಅವಕಾಶ. ಹೊರಗೆ ಕರೆಸೋದು ಜನರ ಆಸೆ. ಒಂದು ವೇಳೆ ನಾಮಿನೇಷನ್‌ನಲ್ಲಿದ್ದು, ನೀವು ಸೇಫ್ ಆಗಿದ್ದಾರೆಂದರೆ, ಜನ ಒಂದು ಅವಕಾಶ ನೀಡಿದ್ದಾರೆ ಎಂದು ಅರ್ಥ. ಹೊರಗೆ ಕಳುಹಿಸಲು ಅಲ್ಲ. ಆದರೆ ಸೇಫ್ ಆದಲ್ಲಿ ಅದನ್ನು ಪ್ರೊಗೆಸ್ ಎಂದು ತಿಳಿದುಕೊಳ್ಳಿ. ಪ್ರೊಗೆಸ್ ಅಂದರೆ ಪ್ರತಿನಿತ್ಯ ಕಲಿಯುವುದು. ನಮ್ಮನ್ನು ನಾವು ಲಾಂಚ್ ಮಾಡಿಕೊಳ್ಳುವುದು. ನೀವು ಹೋಗ್ತೀರಿ ಹೋಗಲ್ಲ ಅದು ನಮಗೆ ಗೊತ್ತಿಲ್ಲ. ಆದರೆ ಜನಗಳು ಏನು ಅಂದುಕೊಂಡರು ಅದನ್ನು ನಿಮ್ಮ ಮುಂದೆ ಇಡುತ್ತೇವೆ. ಜನರು ನಿಮ್ಮನ್ನು ಸೇಫ್ ಮಾಡಿದ್ದಾರೆ ಎಂದರೆ ಅರ್ಥ ಮಾಡಿಕೊಳ್ಳಿ ಜನರು ನಿಮ್ಮನ್ನು ಸೇಫ್ ಮಾಡಿದ್ದಾರೆ ಎಂದು. ಪ್ರತಿ ಸಲ ಸ್ಪರ್ಧಿಗಳು ಸೇಫ್ ಆದಾಗ ಅವರ ಪ್ರತಿ ವೋಟ್ ಮೂಲಕ ತೊರಿಸಿದ್ದಾರೆ ಎಂದು. ಕಳಿಸೋದು ಉಳಿದುಕೊಳ್ಳೊದು ನಮ್ಮ ಕೈಯಲ್ಲಿ ಇಲ್ಲಾ ಅದು ನಿಮ್ಮ ಕೈಯಲ್ಲಿ ಇದೆ. ನಾವು ಬರೀ ಸೇತುವೆ. ನಾವು ಅದನ್ನು ಹೇಳಬೇಕಿತ್ತು ಹೇಳಿದ್ದೇವೆʼʼ ಎಂದರು.
ನಂತರ ರೂಪೇಶ್ ಅರುಣ್ ಸಾಗರ್ ತಬ್ಬಿಕೊಂಡು ಅತ್ತಿದ್ದಾರೆ. ಅರುಣ್ ಸಾಗರ್ ಮಾತನಾಡಿ ʻʻನೀನು ತಪ್ಪು ಮಾಡಿದ್ದೀರಿ ಎಂದು ಅಲ್ಲ. ಅದೊಂದು ಎಚ್ಚರಿಕೆ. ಅವರು ಏನು ಹೇಳಿದರು ಯೋಚನೆ ಮಾಡು. ಅದು ಒಳ್ಳೆದಕ್ಕೆ ಆಗಿರೋದು. ನೀನು ಎಷ್ಟೋ ಮೆಟ್ಟಲನ್ನು ಏರಿದ್ದೀಯಾ. ನೀನು ಈ ಸಲ ಹೋಗಲ್ಲ. ನೀನು ಉಳಿಯುತ್ತೀಯಾʼʼ ಎಂದು ಸಮಾಧಾನ ಮಾಡಿದ್ದಾರೆ.
ಇದನ್ನೂ ಓದಿ | Bigg Boss Kannada | ಮನೆಯ ಕ್ಯಾಪ್ಟನ್ ರೂಮ್ ಪಿಕ್ನಿಕ್ ಸ್ಪಾಟ್ ಅಲ್ಲ: ರೂಪೇಶ್, ಸಾನ್ಯ, ಗುರೂಜಿಗೆ ಕಿಚ್ಚ ಎಚ್ಚರಿಕೆ!