Site icon Vistara News

Bigg Boss Kannada | ರೂಪೇಶ್‌ ರಾಜಣ್ಣಗೆ ತಪ್ಪು ಒಪ್ಪಿನ ಕ್ಲಾಸ್‌ ತೆಗೆದುಕೊಂಡ ಕಿಚ್ಚ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada ) ರೂಪೇಶ್‌ ರಾಜಣ್ಣ ಅವರಿಗೆ ಕಿಚ್ಚ ಸುದೀಪ್‌ ವೀಕೆಂಡ್‌ ಪಂಚಾಯಿತಿಯಲ್ಲಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ರೂಪೇಶ್‌ ರಾಜಣ್ಣ ಅವರು ಮನೆಯಲ್ಲಿ 84 ದಿನಗಳು ಕಳೆದ್ದರೂ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲ ಎಂಬುದರ ಕುರಿತು ಚರ್ಚೆ ಮಾಡಿದ್ದಾರೆ ಕಿಚ್ಚ ಸುದೀಪ್‌.

ಕಿಚ್ಚ ಸುದೀಪ್‌ ಅವರು ರೂಪೇಶ್‌ ರಾಜಣ್ಣ ಅವರಿಗೆ ʻʻನೀವು ಏನೋ ತಪ್ಪು ಮಾಡಿರುತ್ತೀರಿ, ಅದರಲ್ಲಿ ಏನೋ ತಪ್ಪಿದೆ ಎಂದು ನಾನು ಹೇಳಿದಾಗ, ನೀವು ಅದನ್ನು ಒಪ್ಪಿಕೊಳ್ಳುವುದಿಲ್ಲ ನಾನೇ ಸರಿ ಎಂದು ಹೇಳುತ್ತೀರಿ. ಪ್ರತಿಯೊಬ್ಬರ ತಪ್ಪು ಅಥವಾ ನಿಮಗೆ ತಪ್ಪು ಅನಿಸಿರಬಹುದು ಅದರ ಬಗ್ಗೆ ಮಾತನಾಡುತ್ತೀರಿ. ನೆನಪಿಟ್ಟುಕೊಳ್ಳುತ್ತೀರಿ. ಚರ್ಚೆ ಮಾಡುತ್ತೀರಿ. ಅವರು ಒಪ್ಪುವ ತನಕ ನೀವು ಮಾತನಾಡುತ್ತೀರಿ. ಯಾರಾದರೂ ನಿಮ್ಮಲ್ಲಿ ತಪ್ಪು ಕಂಡಲ್ಲಿ ನಿಮಗೆ ಹೇಳಿದ್ದರೆ ಅದನ್ನು ಒಪ್ಪಿಕೊಳ್ಳುವುದು ಸ್ವಲ್ಪ ಸಮಸ್ಯೆ ಆಗುತ್ತದೆ ನಿಮಗೆ ಎಂದು ಕೇಳಿದ್ದಾರೆ.

ಇದನ್ನೂ ಓದಿ | Bigg Boss Kannada | ʼಕಳಪೆʼ ನೀಡುವಾಗ ಬೇಸರ ಹೊರಹಾಕಿದ ಅಮೂಲ್ಯ ಗೌಡ!

ರೂಪೇಶ್‌ ರಾಜಣ್ಣ ಈ ಬಗ್ಗೆ ಪ್ರತಿಕ್ರಿಯೆ ನೀಡಿ ʻʻನನಗೆ ಒಬ್ಬರು ಹೇಳಿದಾಗ ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಿದೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಖಂಡಿತ ಒಪ್ಪಿಕೊಳ್ಳುತ್ತೇನೆ. ನನ್ನ ತಪ್ಪು ಇಲ್ಲ ಎಂದಾಗ ನಾನು ಒಪ್ಪಿಕೊಳ್ಳುವುದಿಲ್ಲʼʼಎಂದಿದ್ದಾರೆ. ದಿವ್ಯಾ ಉರುಡುಗ ಈ ಬಗ್ಗೆ ಮಾತನಾಡಿ ʻʻಯಾವುದೇ ವಿಚಾರವನ್ನು ರೂಪೇಶ್‌ ರಾಜಣ್ಣ ಅವರು ಒಪ್ಪಿಕೊಳ್ಳುವುದಿಲ್ಲ. ಹುಡುಗಿಯರ ಜತೆ ಜೋರಾಗಿ ಮಾತನಾಡುತ್ತಾರೆ ಹಾಗೆ ಮಾತನಾಡಬೇಡಿ ಎಂದು ಹೇಳಿದ್ದರೆ ಹೊರಗಡೆ ಹೋಗಿ ನೋಡಿ. ನಾನು ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡುತ್ತೇನೆ ಎನ್ನುತ್ತಾರೆ. ಅವರು ಮಾಡಿರುವುದೇ ಸರಿ ಎನ್ನುತ್ತಾರೆʼ ʼಎಂದರು. ದೀಪಿಕಾ ದಾಸ್‌ ಈ ಬಗ್ಗೆ ಮಾತನಾಡಿ ʻʻರಾಜಣ್ಣ ಅವರಿಗೆ ಸ್ವೀಕಾರ ಮನೋಭಾವನೆ ಸ್ವಲ್ಪವೂ ಇಲ್ಲ. ಜನರಿಗೆ ಹೇಗೆ ಬಿಂಬಿಸಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತುʼʼ ಎಂದಿದ್ದಾರೆ.

ಸುದೀಪ್‌ ನಂತರದಲ್ಲಿ ರೂಪೇಶ್‌ ರಾಜಣ್ಣ ಅವರಲ್ಲಿ ಮಾತನಾಡಿ, ʻʻನಿಮ್ಮಲ್ಲಿ ಈ ಗುಣ ಇದೆಯಾ, ನಿಮಗೆ ಗೊತ್ತ ಎಂದು ಅರ್ಥ ಮಾಡಿಸಿಲು ಈ ಪ್ರಶ್ನೆ ಕೇಳಿದೆ ನಾನು. ನೀವು ಉತ್ತರ ಕೊಡಲಿಲ್ಲ ಎನ್ನುವ ಕಾರಣಕ್ಕೆ ಇನ್ನಿತರರ ಬಳಿ ಉತ್ತರ ಕೇಳಿದ್ದು. ಮನೆಯಲ್ಲಿ ಎಷ್ಟೇ ಕನ್ನಡಿಗಳು ಇದ್ದರೂ ರಾಜಣ್ಣ ನಾನು ಒಂದು ಒಂದು ಕನ್ನಡಿ ತೋರಿಸಬೇಕಾಗುತ್ತದೆʼʼ ಎಂದು ಹೇಳಿದರು.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಿಂದ ಹೊರ ನಡೆದ ಅನುಪಮಾ ಗೌಡ!

Exit mobile version