Site icon Vistara News

Bigg Boss Kannada | ʻಕಳಪೆʼ ವಿಚಾರಕ್ಕೆ ಅಮೂಲ್ಯಗೆ ಕಿಚ್ಚನ ಕ್ಲಾಸ್‌!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9 (Bigg Boss Kannada)ರ ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ʻಕಳಪೆʼ ವಿಚಾರಕ್ಕೆ ಅಮೂಲ್ಯ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅಮೂಲ್ಯ ಗೌಡ ತನಗೆ ಕಳಪೆ ಕೊಡಲು ಮನಸಾಕ್ಷಿ ಒಪ್ಪುತ್ತಿಲ್ಲ ಎಂದು ಆರ್ಯವರ್ಧನ್ ಗುರೂಜಿಗೆ ‘ಕಳಪೆ’ ಕೊಟ್ಟಿದ್ದರು. ಅಮೂಲ್ಯ ಅವರ ಈ ನಡೆಯ ಬಗ್ಗೆ ಕಿಚ್ಚ ಪ್ರಶ್ನೆ ಮಾಡಿದ್ದಾರೆ. 

ಕಳಪೆ ವಿಚಾರಕ್ಕೆ ಕಿಚ್ಚ ಸುದೀಪ್‌ ಅವರು ಅಮೂಲ್ಯ ಅವರಿಗೆ ʻʻಕಳಪೆ ಮತ್ತು ಉತ್ತಮ ಎಂದು ಹೇಗೆ ಪರಿಗಣಿಸುತ್ತೇವೆ. ಬಿಗ್ ಬಾಸ್ ಏನಾದರೂ ಕಳಪೆಗೆ ರೂಲ್ಸ್ ಹೇಳಿದ್ದಾರಾʼʼ ಎಂದು ಸುದೀಪ್ ಕೇಳಿದ್ದಾರೆ. ಬಳಿಕ ಸುದೀಪ್,ʻʻನಿಮಗೆ ಕಳಪೆ ಕೊಡುವ ವಿಚಾರದಲ್ಲಿ ಜಡ್ಜ್ ಮಾಡುವುದಕ್ಕೆ ಬರಲಿಲ್ಲ ಎಂದು ಹೇಳಿʼʼ ಎಂದು ಕಿಚ್ಚ ಸುದೀಪ್‌ ಅವರು ಅಮೂಲ್ಯ ಅವರಿಗೆ ಹೇಳಿದ್ದಾರೆ. ಈ ಬಗ್ಗೆ ಅಮೂಲ್ಯ ಅವರು ಪ್ರತಿಕ್ರಿಯೆ ನೀಡಿ ʻʻಈ ವಾರ ಮನೆಯಲ್ಲಿ ಎಲ್ಲರೂ ಚೆನ್ನಾಗಿ ಆಡಿದ್ದರು. ಒಬ್ಬರಿಗೆ ಕಳಪೆ ಕೊಡುವುದು ಕಷ್ಟವಾಗಿತ್ತು. ಹಾಗೆ ನೋಡಿದ್ದರೆ ನಾನು ಈ ವಾರ ಕೆಲ ಆಟದಲ್ಲಿ ಸೋತಿದ್ದೆʼʼಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | Bigg Boss Kannada | ರೂಪೇಶ್‌ ರಾಜಣ್ಣಗೆ ತಪ್ಪು ಒಪ್ಪಿನ ಕ್ಲಾಸ್‌ ತೆಗೆದುಕೊಂಡ ಕಿಚ್ಚ!

ಏನಿದು ಕಳಪೆ ವಿಚಾರ?
ಕಳಪೆಗೆ ಹೆಸರನ್ನು ಸೂಚಿಸಲು ಮೊದಲು ಅಮೂಲ್ಯ ಗೌಡ ಹಾಗೂ ಅರುಣ್ ಸಾಗರ್ ತಕರಾರು ಮಾಡಿದರು. ಆ ನಂತರ ಅರುಣ್ ಸಾಗರ್ ಅವರು ಗುರೂಜಿ ಹೆಸರನ್ನ ಕಳಪೆಗೆ ಸೂಚಿಸಿದರು. ಕಾರಣ ನೀಡಿದ ಅರುಣ್‌ ಸಾಗರ್‌ ʻಗುರೂಜಿ ಅವರು ಅಮೂಲ್ಯ ಅವರನ್ನು ತಂದೆಯ ಸ್ಥಾನದಲ್ಲಿ ನಿಂತು ಕ್ಷಮಿಸಬೇಕಿತ್ತುʼ ಎಂದು ಹೇಳಿಕೆ ನೀಡಿದರು. ಅಮೂಲ್ಯ ಅವರು ʻಕಳಪೆಗೆ ಹೆಸರು ಹೇಳಲೇಬೇಕು ಎಂದು ಎಲ್ಲರೂ ಹೇಳಿದ ಬಳಿಕ ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ. ನನಗೆ ನಾನೇ ಕಳಪೆ ಹೆಸರು ಹೇಳಲೇಬೇಕು ಎಂಬ ಕಾರಣಕ್ಕೆ ಗುರೂಜಿ ಹೆಸರು ಹೇಳುತ್ತಿದ್ದೇನೆ. ಆದರೆ, ಅವರು ನಿಜವಾಗಿಯೂ ಕಳಪೆ ಅಲ್ಲʼ ಎಂದು ಹಿಂದಿನ ವಾರ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್‌ ಪಂಚಾಯಿತಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಿಂದ ಹೊರ ನಡೆದ ಅನುಪಮಾ ಗೌಡ!

Exit mobile version