Site icon Vistara News

Bigg Boss Kannada | ಬಿಗ್‌ ಬಾಸ್‌ ಮನೆಯಿಂದ ಕಿರಣ್‌ ಔಟ್‌?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಕನ್ನಡದಲ್ಲಿ (Bigg Boss Kannada) ಈಗಾಗಲೇ ಸ್ಪರ್ಧಿಗಳ ನಾಮಿನೇಶನ್ ಆಯ್ಕೆ ಪ್ರಕ್ರಿಯೆ ಕೂಡ ನಡೆದಿದೆ. 42 ದಿನಗಳ ಕಾಲ ನಡೆಯುವ ಈ ಶೋನಲ್ಲಿ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.  ಸೋನು ಗೌಡ, ಸ್ಫೂರ್ತಿ ಗೌಡ, ಆರ್ಯವರ್ಧನ್‌ ಗುರೂಜಿ, ಜಯಶ್ರೀ ಆರಾಧ್ಯ, ನಂದಿನಿ ಜಶ್ವಂತ್‌ ಹಾಗೂ ಕಿರಣ್‌ ಯೋಗೇಶ್ವರ್‌, ಅಕ್ಷತಾ ಕುಕಿ ನಾಮಿನೇಟ್‌ ಆಗಿದ್ದಾರೆ.

ಈಗಾಗಲೇ ಸ್ಪರ್ಧಿಗಳ ಮಧ್ಯೆ ಒಂದಷ್ಟು ಜಗಳ, ಮನಸ್ತಾಪ ಶುರು ಆಗಿವೆ. ಆರ್ಯವರ್ಧನ್, ಸೋನು ಗೌಡ ಅವರ ಕೆಲ ಮಾತುಗಳು ಕೆಲವರಿಗೆ ಇಷ್ಟ ಆಗುತ್ತಿಲ್ಲ. ಸ್ಫೂರ್ತಿ ಗೌಡ, ರಾಕೇಶ್ ಅಡಿಗ ಮಧ್ಯೆ ಏನೋ ಶುರುವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಾರಿ ಒಟ್ಟು 16 ಸ್ಪರ್ಧಿಗಳು ಬಿಗ್ ಬಾಸ್ ಒಟಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ಕಿರಣ್‌ ಅವರು ಮನೆಯಿಂದ ಹೊರ ಹೋಗುತ್ತಿದ್ದಾರೆ ಎಂದು ನೆಟ್ಟಿಗರು ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಾನ್ಯ ಜತೆ ಫ್ಲರ್ಟ್‌ ಮಾಡುತ್ತಿದ್ದ ರಾಕೇಶ್‌ ಈ ನಡುವೆ ಕಿರಣ್‌ ಅವರತ್ತ ಕೂಡ ಚಿತ್ತ ಹರಿಸಿದ್ದಾರೆ. 

ಇದನ್ನೂ ಓದಿ | Bigg Boss Kannada | ಆಚೆ ಹೋದ ಮೇಲೆ ಏನೋ ಹೇಳ್ತೀನಿ ಎಂದ ರೂಪೇಶ್‌: ರೂಪೇಶ್‌-ಸಾನ್ಯಾ ಗುಸುಗುಸು

ಇನ್ನು ರಾಜಸ್ತಾನದ ಹುಡುಗಿ ಕಿರಣ್‌ ಯೋಗೇಶ್ವರ್‌ ಅವರ ಕನ್ನಡದ ಬಗ್ಗೆ ಸುದೀಪ್‌ ಸಹ ಮೆಚ್ಚಿಕೊಂಡಿದ್ದರು. ಇನ್ನು ಮನೆಯಲ್ಲಿ ಕೂಡ ಸಖತ್‌ ಜೋಶ್‌ನಲ್ಲಿಯೇ ಇದ್ದ ಕಿರಣ ಅವರು ಮನೆಯನ್ನು ಮಿಸ್‌ ಮಾಡಿಕೊಳ್ಳುತ್ತಿದ್ದರು. ಸ್ಪರ್ಧಿಗಳು ಈ ವಿಚಾರಕ್ಕೆ ಅವರನ್ನು ನಾಮಿನೇಟ್‌ ಮಾಡಿದ್ದರು. ಈ ಹಿಂದೆ ರಾಕೇಶ್‌ ಕೂಡ ಕಿರಣ್‌ ಮೇಲೆ ಕೂಗಾಡಿದ್ದಿದೆ.

ಇನ್ನೊಂದು ಕಡೆ ಸೋನು ಗೌಡ ಮನೆಯಿಂದ ಹೊರಕ್ಕೆ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದೇನೆ ಇರಲಿ ಈ ವಾರ ವಾರದ ಕಥೆ ಕಿಚ್ಚನ ಜತೆಯಲ್ಲಿ ಎಲಿಮಿನೇಶನ್ ಪ್ರಕ್ರಿಯೆ ನಡೆಯಲಿದ್ದು, ಯಾರು ಬಿಗ್ ಬಾಸ್ ಶೋನಿಂದ ಹೊರಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ | Bigg Boss kannada | ಮೇಕಪ್‌ ಅಲ್ಲಿ ಆರ್ಯವರ್ಧನ್‌ ಮಿಂಚಿಂಗ್‌: ಸಖತ್‌ ಎಂಟರ್ಟೈನರ್‌ ಅಂದ್ರು ಗುರೂಜಿ ಫ್ಯಾನ್ಸ್‌!

Exit mobile version