Site icon Vistara News

Bigg Boss Kannada | ಮುಗಿಯಿತು 5 ವಾರ; ಎಲಿನಿಮಿನೇಷನ್ನಿಂದ ಯಾರು ಪಾರು, ಯಾರು ಗಡಿಪಾರು?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada) ಒಟಿಟಿ ಕಾರ್ಯಕ್ರಮ ಶುರುವಾಗಿ ಐದು ವಾರಗಳು ಕಳೆದಿವೆ. ಮುಂದಿನ ವಾರ ಗ್ರ್ಯಾಂಡ್ ಫಿನಾಲೆ ವೀಕ್ ಆಗಿದ್ದು, ಮುಂದಿನ ವಾರಾಂತ್ಯದಲ್ಲಿ ಫಿನಾಲೆ ನಡೆಯಲಿದೆ. ಈ ವಾರ ಕೊನೇ ವಾರವಾಗಿದ್ದು, ಫಿನಾಲೆ ವಾರಕ್ಕೆ ಮುನ್ನಡೆ ಯಾರಿಗೆ? ಹಿನ್ನಡೆ ಯಾರಿಗೆ? ಎಂಬುದು ಇವತ್ತಿನ ಸಂಚಿಕೆಯಲ್ಲಿ ಪ್ರಸಾರವಾಗಲಿದೆ.

ಈಗಾಗಲೇ ಬಿಗ್‌ ಬಾಸ್‌ ಮನೆಯಲ್ಲಿ ಯಾರು ಹೊರಗೆ ಹೋಗಲಿದ್ದಾರೆ ಎಂದು ಸ್ಪರ್ಧಿಗಳ ಮಧ್ಯೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಆರ್ಯವರ್ಧನ್‌ ಅವರು ಎರಡು ದಿನಗಳಿಂದ ಬಿಗ್‌ ಬಾಸ್‌ ಮನೆಯಲ್ಲಿ ಅಸಮಾಧಾನವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ | Bigg Boss Kannada | ರೂಪೇಶ್ ಕ್ಯಾಪ್ಟನ್ಸಿ ಪರೀಕ್ಷೆ ಮುಗೀತು: ಮನೆಯವರು ಕೊಟ್ಟ ರೇಟಿಂಗ್ಸ್, ರಿವ್ಯೂ ಏನು?

ʻʻಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ನನ್ನನ್ನು ಟಾಸ್ಕ್‌ಗೆ ಕರೆದುಕೊಳ್ಳುತ್ತಿಲ್ಲ. ಇದು ನನಗೆ ಬೇಕಾಗಿತ್ತಾ? ನಾನು ಮನೆಯಲ್ಲಿ ಕೂತು ಬಿಗ್‌ ಬಾಸ್‌ ಒಟಿಟಿಯನ್ನು ನೋಡಬಹುದಿತ್ತು. ಏತಕ್ಕೆ ಬೇಕಾಗಿತ್ತು ನನಗೆʼʼಎಂದು ಸೋಮಣ್ಣ ಹಾಗೂ ಜಯಶ್ರೀ ಮುಂದೆ ಆರ್ಯವರ್ಧನ್‌ ಗುರೂಜಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ ʻʻಹಲವು ಟಾಸ್ಕ್‌ಗಳನ್ನು ಚೆನ್ನಾಗಿ ನಿಭಾಯಿಸಿದ್ದೀರಿ. ನೀವು ಇಲ್ಲಿ ಅಡುಗೆ ಮಾಡಲು ಬಂದಿಲ್ಲ. ನೀವು ಟಾಸ್ಕ್‌ನಲ್ಲಿ ನುಗ್ಗಬೇಕುʼʼಎಂದು ಹೇಳಿದ್ದಾರೆ.

ಈ ವಾರ ಸೋನು ಶ್ರೀನಿವಾಸ್ ಗೌಡ, ಸೋಮಣ್ಣ ಮಾಚಿಮಾಡ, ಆರ್ಯವರ್ಧನ್ ಗುರೂಜಿ, ನಂದಿನಿ, ಜಶ್ವಂತ್ ಬೋಪಣ್ಣ ಮತ್ತು ಜಯಶ್ರೀ ನಾಮಿನೇಟ್‌ ಆಗಿದ್ದಾರೆ. ಬಿಗ್‌ ಬಾಸ್‌ನಲ್ಲಿ ಈ ವಾರ ಜಶ್ವಂತ್‌ ಕಳಪೆ ಪ್ರದರ್ಶನ ತೋರಿದ್ದರೆ, ರೂಪೇಶ್‌ ಶೆಟ್ಟಿಗೆ ಬೆಸ್ಟ್‌ ಪರ್‌ಫಾರ್ಮರ್‌ ಕ್ರೆಡಿಟ್‌ ಸಿಕ್ಕಿದೆ.

ಐದನೇ ವಾರದ ನಾಮಿನೇಷನ್‌ನಿಂದ ರಾಕೇಶ್ ಅಡಿಗ ಅವರನ್ನು ವೀಕ್ಷಕರೇ ಸೇಫ್ ಮಾಡಿದ್ದರು. ಹೀಗಾಗಿ, ರಾಕೇಶ್ ಅಡಿಗ ನೇರವಾಗಿ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ರಾಕೇಶ್ ಅಡಿಗ ಜತೆಗೆ ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್ ಕೂಡ ಫಿನಾಲೆ ವಾರಕ್ಕೆ ಲಗ್ಗೆ ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಯಾರು ಉಳಿಯಲಿದ್ದಾರೆ? ಯಾರು ಹೊರಬರಲಿದ್ದಾರೆ? ಅಂತಿಮವಾಗಿ ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಕುತೂಹಲವಂತೂ ಹೆಚ್ಚಾಗಿದೆ.

ಇದನ್ನೂ ಓದಿ | Bigg Boss Kannada | ಜಶ್ವಂತ್‌ಗೆ ಸಖತ್‌ ಕ್ಲಾಸ್‌ ತೆಗೊಂಡ್ರು ಜಯಶ್ರೀ: ಐದನೇ ವಾರದ ಬಾಸ್‌ ಇವರೆ!

Exit mobile version