Site icon Vistara News

Bigg Boss Kannada | ಕನ್ನಡ ಕಲಿಸೋಣ, ಕಲಿಸಿದರೆ ಮಾತ್ರ ಭಾಷೆಯ ಅಸ್ತಿತ್ವ ಎಂದ ಅರುಣ್‌ ಸಾಗರ್‌

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌9ರ (Bigg Boss Kannada) 20ನೇ ದಿನ ದೀಪಿಕಾ ದಾಸ್‌ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದಾರೆ. ಹಾಗೂ ಅತ್ಯುತ್ತಮ ಪ್ರದರ್ಶನಕಾರರಾಗಿದ್ದಾರೆ. ಆದರೆ ಅರುಣ್‌ ಸಾಗರ್‌ ಈ ವಾರ ಕಳಪೆ ಪ್ರದರ್ಶನ ತೋರಿದ್ದಾರೆ. ಅರುಣ್‌ ಸಾಗರ್‌ ಮನೆಯವರ ಮೇಲೆ ಗರಂ ಆಗಿದ್ದಾರೆ. ಹಾಗೇ ರೂಪೇಶ್‌ ರಾಜಣ್ಣ ಜತೆ ಕನ್ನಡದ ಬಗ್ಗೆ ಚರ್ಚೆಗಳನ್ನು ಮಾಡಿದ್ದಾರೆ. ರೂಪೇಶ್‌ ರಾಜಣ್ಣಗೆ ವ್ಯವಧಾನದಿಂದ ಹೇಳುವ ಮಾತನ್ನು ಕೇಳಿಸಿಕೊಳ್ಳಿ ಎಂದು ಕನ್ನಡ ಬಗ್ಗೆ ಹಲವಾರು ಅಂಶಗಳನ್ನು ಹೇಳಿಕೊಂಡರು.

ಅರುಣ್ ಸಾಗರ್ ಮಾತನಾಡಿʻʻಹಳ್ಳಿ ಭಾಷೆಯಲ್ಲಿ ಮಾತನಾಡಿದರೆ ಅದು ಮ್ಯೂಸಿಕ್ ಅನಿಸುತ್ತದೆ. ಭಾಷೆಯ ಕೆಲಸ ಎಲ್ಲಿ ಆಗಬೇಕಾಗಿದೆ ಅಂದರೆ, ಮಕ್ಕಳಿಗೆ ಹೇಳಿಕೊಡುವ ಸ್ಕೂಲ್‌ಗಳು ಬೇಕಾಗಿವೆ. ಅದು ಬಿಟ್ಟರೆ, ಇನ್ಯಾವುದರಿಂದಲೂ ಕನ್ನಡ ಬೆಳೆಯಲ್ಲ. ಹುಟ್ಟಿದ ಮಕ್ಕಳ ಜತೆ ಮಾತನಾಡುತ್ತ, ಸ್ಕೂಲ್‌ನಲ್ಲಿ ಓದಿಸುತ್ತ ಕಲಿಸಿದರೆ ಬೆಳೆಯುತ್ತದೆʼʼ ಎಂದರು. ನಂತರ ರೂಪೇಶ್‌ ಪ್ರತಿಕ್ರಿಯೆ ನೀಡಿ ʻʻನಮ್ಮ ಕನ್ನಡ ಜನ ಎಂಥಾ ಮೂರ್ಖರು ಇದ್ದಾರೆ ಅಂದರೆ…ಹಿಂದಿ ಕಡ್ಡಾಯ ಮಾಡಿದರೆ ಓಕೆ, ಕನ್ನಡ ಕಡ್ಡಾಯ ಮಾಡಿ ಅಂದರೆ ಕೋರ್ಟ್‌ಗೆ ಹೋಗುತ್ತಾರೆ. ಎಷ್ಟೋ ಜನ ನಾಡಗೀತೆಯನ್ನು ಹಾಡುವುದಿಲ್ಲʼʼಎಂದರು.

ಇದನ್ನೂ ಓದಿ | Bigg Boss Kannada | ಪ್ರಶಾಂತ್‌ ಆಟಕ್ಕೆ ಮನೆಯವರ ಹೊಗಳಿಕೆ: ನಿಮ್ಮನ್ನು ಟ್ರಸ್ಟ್‌ ಮಾಡೋದು ಕಷ್ಟ ಅಂದ್ರು ನೇಹಾ!

Bigg Boss Kannada

ಅರುಣ್ ಸಾಗರ್ ಮಾತು ಮುಂದುವರಿಸಿ ʻʻರಾಜ್‌ಕುಮಾರ್ ಹಿಂದಿನ ಕಂಪನಿ ನಾಟಕ ಇದ್ಯಲ್ಲ. ಅದು ಬೆಳೆಸಿದ ಭಾಷೆ ದೊಡ್ಡದು. ಕುವೆಂಪು ಅಷ್ಟೇ ಗ್ರೇಟು ಈ ಕಂಪನಿ ನಾಟಕಗಳುʼ ಎಂದರು. ರೂಪೇಶ್ ರಾಜಣ್ಣ ಪ್ರತಿಕ್ರಿಯಿಸಿ ʻʻಕುವೆಂಪು ಸಪರೇಟು ಬಿಡಿ. ನೀವು ಅವರನ್ನು ಕಂಪೇರ್ ಮಾಡೋಕೆ ಆಗಲ್ಲʼʼಎಂದರು.

ಅರುಣ್ ಸಾಗರ್ ನಂತರ ಮಾತನಾಡಿ ʻʻನಾನು ಹೇಳುವುದು ಪೂರ್ತಿಯಾಗಿ ಕೇಳಿಸಿಕೊಳ್ಳಿ. ಕುವೆಂಪು ತಮ್ಮ ಭಾಷಾ ಜ್ಞಾನದಿಂದ ರಾಮಾಯಣ ದರ್ಶನಂ ಸೇರಿದಂತೆ ಇತರೆ ಸಾಹಿತ್ಯ ರಚಿಸಿದರು. ಅದು ಒಂದು ತರಹದ ಬೆಳವಣಿಗೆ. ಆದರೆ ಕಂಪನಿ ನಾಟಕಗಳು ಓದಲು ಬಾರದ ಅನಕ್ಷರಸ್ಥರನ್ನ ಬೆಳೆಸಿತು. ಕಂಪನಿ ನಾಟಕ ನೋಡಿ ಹಳ್ಳಿ ಹುಡುಗರು ಕಂದಪದ್ಯ ಹಾಡುತ್ತಾರೆ. ಶ್ರವಣ ಮಾಧ್ಯಮದಿಂದ ಕನ್ನಡ ಕಲಿಸಿದವರು ಬೇರೆ ಇದ್ದಾರೆ. ಪುಸ್ತಕದಿಂದ ಕನ್ನಡ ಕಲಿಸಿದವರು ಬೇರೆ ಇದ್ದಾರೆ. ಪ್ರೀತಿಯಿಂದ ಹಳ್ಳಿಯಲ್ಲಿ ತರಕಾರಿ ಮಾರೋದು ಕನ್ನಡ ಬೆಳೆಸುತ್ತಾರೆ. ಕನ್ನಡದ ಬೆಳವಣಿಗೆಗೆ ಹಣ್ಣು ಮಾರುವವನೂ ಮುಖ್ಯ, ಕುವೆಂಪು ಅವರೂ ಮುಖ್ಯ, ನಾಟಕ ಮಾಡುವವನೂ ಮುಖ್ಯ. ಕನ್ನಡವನ್ನ ಉಸಿರಾಗಿ ತೆಗೆದುಕೊಳ್ಳಬೇಕು. ಕನ್ನಡ ಅನ್ನೋದನ್ನ ಒಂದು ಪಕ್ಷವಾಗಿ ತೆಗೆದುಕೊಳ್ಳಬಾರದು. ಕನ್ನಡವನ್ನು ಕಲಿಸೋಣ. ಕಲಿಸಿದರೆ ಮಾತ್ರ ಕನ್ನಡ ಉಳಿಯೋದು. ಕಲಿಸದಿದ್ದರೆ ಕನ್ನಡ ಉಳಿಯುವುದಿಲ್ಲ. ಮಕ್ಕಳು ಕನ್ನಡ ಕಲಿಯಲೇಬೇಕುʼʼ. ಎಂದರು.

Bigg Boss Kannada

ಈ ವಾರ ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರಗಿ, ದರ್ಶ್, ದಿವ್ಯಾ ಉರುಡುಗ, ಮಯೂರಿ, ವಿನೋದ್, ದೀಪಿಕಾ ದಾಸ್, ರೂಪೇಶ್ ಶೆಟ್ಟಿ, ಅನುಪಮಾ ಗೌಡ ಹಾಗೂ ಅಮೂಲ್ಯ ಗೌಡ ನಾಮಿನೇಟ್ ಆಗಿದ್ದಾರೆ. ಯಾರು ಹೊರಗೆ ಹೋಗಲಿದ್ದಾರೆ ಎಂಬುದು ನೋಡಬೇಕಿದೆ.

ಇದನ್ನೂ ಓದಿ | Bigg Boss Kannada | ನಿಮ್ಮೊಳಗೆ ತುಂಬ ಜನಕ್ಕೆ ಮಾನವೀಯತೆ ಇಲ್ಲ: ಗರಂ ಆದ್ರು ಅರುಣ್‌ ಸಾಗರ್‌!

Exit mobile version