Site icon Vistara News

Bigg Boss Kannada | ಕಿಚ್ಚನಿಂದ ಬಂತು ಒಂದಿಷ್ಟು ಸಂದೇಶ, ಸಂತೋಷ: ಹಿಂದಿನ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಎರಡೂ ವಾರಗಳ ಟಾಸ್ಕ್‌ ಹಾಗೂ ಸ್ಪರ್ಧಿಗಳ ಕುರಿತಾಗಿ ಚರ್ಚಿಸಿದರು. ದೀಪಾವಳಿಗೆ ಸುದೀಪ್‌ ಅವರು ಗೈರಾಗಿದ್ದ ಕಾರಣ ಮನೆಮಂದಿಗೆ ಲೆಟರ್‌ ಕಳುಹಿಸಿ ಸರ್‌ಪ್ರೈಸ್‌ ನೀಡಿದ್ದಾರೆ. ಈ ವಾರ ಒಂಬತ್ತು ಮಂದಿ ನಾಮಿನೇಟ್‌ ಆಗಿದ್ದು ಮೂವರು ಸ್ಪರ್ಧಿಗಳು ಸೇಫ್‌ ಆಗಿದ್ದಾರೆ.

ಈ ವಾರ ರೂಪೇಶ್‌ ಶೆಟ್ಟಿ, ದೀಪಿಕಾ ದಾಸ್‌, ನೇಹಾ ಗೌಡ, ರೂಪೇಶ್‌ ರಾಜಣ್ಣ, ಪ್ರಶಾಂತ್‌ ಸಂಬರಗಿ, ಅಮೂಲ್ಯ ಗೌಡ, ರಾಕೇಶ್‌ ಅಡಿಗ ಮತ್ತು ಕಾವ್ಯಶ್ರೀ ನಾಮಿನೇಟ್‌ ಆಗಿದ್ದಾರೆ. ಸಾನ್ಯ ಅವರು ಆರ್ಯವರ್ಧನ್‌ ಗುರೂಜಿ ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದರು. ಇದರಲ್ಲಿ ರಾಕೇಶ್‌ ಅಡಿಗ, ಆರ್ಯವರ್ಧನ್‌ ಮತ್ತು ಕಾವ್ಯಶ್ರೀ ಗೌಡ ಈ ವಾರ ಸೇಫ್‌ ಆಗಿದ್ದಾರೆ. ಇನ್ನುಳಿದ ಆರು ಸ್ಪರ್ಧಿಗಳಲ್ಲಿ ಯಾರು ಸೇಫ್‌ ಆಗಿದ್ದಾರೆ ಎಂಬುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಹಿಂದಿನ ವಾರ ಸುದೀಪ್‌ ಅವರು ಗೈರಾಗಿದ್ದ ಕಾರಣ ಕಿಚ್ಚನ ಚಪ್ಪಾಳೆ ತಿಳಿದಿರಲಿಲ್ಲ. ಕಿಚ್ಚ ಸುದೀಪ್‌ ಅನೌನ್ಸ್‌ ಮಾಡಿದ್ದು, ಪ್ರಶಾಂತ್‌ ಸಂಬರಗಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.

ಇದನ್ನೂ ಓದಿ | Bigg Boss Kannada | ಅನುಪಮಾ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌: ಈ ವಾರದ ‘ಕಳಪೆ’ ಸಾನ್ಯ, ‘ಅತ್ಯುತ್ತಮ’ ಯಾರು?

ಕಿಚ್ಚ ಸುದೀಪ್‌ ದೀಪಾವಳಿಗೆ ಪ್ರತಿ ಸ್ಪರ್ಧಿಗಳಿಗೆ ಸಂದೇಶದ ಪತ್ರವನ್ನು ನೀಡಿದ್ದರು. ರೂಪೇಶ್‌ ರಾಜಣ್ಣ ಅವರಿಗೆ ʻʻಪ್ರಿಯ ರಾಜಣ್ಣ ಅವರೇ ನಿಮ್ಮ ಹಾರಾಟದ, ಅಲ್ಲ ಹೋರಾಟಕ್ಕೆ ಜಯವಾಗಲಿʼʼಎಂದು ಬರೆದರೆ, ಆರ್ಯವರ್ಧನ್‌ ಗುರೂಜಿಗೆ ನಗುತ್ತಾ ಇರಿ ಎಂದಿದ್ದಾರೆ. ಹೀಗೆ ಪ್ರತಿ ಸ್ಪರ್ಧಿಗಳಿಗೂ ಮಜವಾದ ಮೆಸೇಜ್‌ ನೀಡಿ, ಸಿಹಿಯನ್ನು ಕಳುಹಿಸಿದ್ದಾರೆ.

ಇದನ್ನೂ ಓದಿ | Bigg Boss Kannada | ಕೆಲಸಕ್ಕೆ ಚಕ್ಕರ್‌, ನಗುವಿಗೆ ಹಾಜರ್: ಕಾವ್ಯಶ್ರೀ-ರಾಕೇಶ್ ಮುನಿಸು!

Exit mobile version