Site icon Vistara News

Bigg Boss Kannada | ಲಕ್ಷುರಿ ಬಜೆಟ್‌ನಲ್ಲಿ ಲೋಕೇಶ್‌-ಸೋನು ಫೈಟ್‌: ಯಾರು ಈ ವಾರದ ಬೆಸ್ಟ್ & ವರ್ಸ್ಟ್?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಒಟಿಟಿ (Bigg Boss Kannada) ದಿನೇದಿನೆ ಹೊಸ ರಂಗನ್ನು ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳು ಈ ಮನೆಗೆ ಬಂದು ಕೆಲವು ದಿನಗಳು ಕಳೆದಿವೆ. ಹಾಗಾಗಿ ಇದೀಗ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಲಕ್ಸೂರಿ ಬಜೆಟ್‌ ಹಕ್ಕನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಲೊಕೇಶ್‌ ಹಾಗೂ ಸೋನು ಗೌಡ ಮಧ್ಯೆ ಸಣ್ಣ ಜಟಾಪಟಿ ನಡೆದಿದೆ.

ಈ ಹಿಂದೆ ಅಷ್ಟೇ ಸೋನು ಗೌಡ ಮತ್ತು ಲೋಕೇಶ್‌ ಫೋನ್‌ ನಂಬರ್‌ ವಿಚಾರವಾಗಿ ಸುದ್ದಿಯಾಗಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಫಾಲೊವರ್ಸ್‌ ಹೊಂದಿರುವ ಸೋನುಗೆ ಲೋಕೇಶ್‌ ಕಾಂಟ್ಯಾಕ್ಟ್‌ ನಂಬರ್‌ ಕೇಳಿದ್ದರು. ಸೋನು ಗೌಡ ತಮ್ಮ ನಂಬರ್‌ ಬಿಗ್‌ಬಾಸ್‌ ಮನೆಯಲ್ಲಿ ಶೇರ್‌ ಮಾಡಿಕೊಂಡಿದ್ದರು. ಲೋಕೇಶ್‌ ಅವರು ಸೋನು ಗೌಡಗೆ ನಂಬರ್‌ ಹೇಳು ಎಂದಾಗ ಸೋನು ಉಲ್ಟಾ ಪಲ್ಟಾ ಹೇಳಿ, ʻʻನಿಮಂಥ ಜಾಣರು ಇರುತ್ತಾರೆ ನಂಗೆ ಗೊತ್ತುʼʼ ಎಂದಿದ್ದರು. ಈಗ ಲಕ್ಸೂರಿ ಬಜೆಟ್‌ ವಿಚಾರಕ್ಕೆ ಇವರಿಬ್ಬರು ಏಕಾಏಕಿ ಕೂಗಾಡಿಕೊಂಡಿದ್ದಾರೆ.

ಒಟ್ಟು ಲಕ್ಸೂರಿ ಬಜೆಟ್‌ ಮೊತ್ತ 4000 ಪಾಯಿಂಟ್ಸ್‌ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಬಿಗ್‌ ಬಾಸ್‌ ನೀಡಿರುವ ಸಮಯದಲ್ಲಿ ಮನೆಗೆ ಬೇಕಾಗುವ ಸಾಮಾನುಗಳನ್ನು ಪಟ್ಟಿ ಮಾಡಬೇಕಿತ್ತು. ಸೋನು ಗೌಡ ಲಿಸ್ಟ್‌ ಬರೆಯಲು ಮುಂದಾಗಿದ್ದರು. ಆದರೆ ಸ್ಪರ್ಧಿಗಳು ಒಮ್ಮೆಲೆ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಹೇಳಿದರು. ಇತ್ತ ಸೋನು ಗೌಡ ಕನ್ಫ್ಯೂ‌ಸ್‌ ಆಗಿ ಪಟ್ಟಿಯನ್ನು ಕಂಪ್ಲೀಟ್‌ ಮಾಡದೆ ಕೈಬಿಟ್ಟಿದ್ದರು.

ಇದನ್ನೂ ಓದಿ | Bigg Boss Kannada | ಸೋಷಿಯಲ್‌ ಮೀಡಿಯಾದಲ್ಲಿ ರಾಕೇಶ್‌-ಸ್ಫೂರ್ತಿ ಮಾತು: ಲವ್‌ ಕಹಾನಿ ಶುರು?

ಇದರಿಂದ ಕೋಪಗೊಂಡ ಲೋಕೇಶ್‌ ಅವರು ಸೋನು ಗೌಡಗೆ ತರಾಟೆ ತೆಗೆದುಕೊಂಡರು. ಇದಕ್ಕೆ ಸೋನು ಗೌಡ ʻʻಒಬ್ಬರೇ ಹೇಳಬೇಕು. ಅದನ್ನು ಬಿಟ್ಟು ಒಮ್ಮೆಲೇ ಎಲ್ಲರೂ ಪಟ್ಟಿ ಹೇಳಿದರೆ ಕನ್ಫ್ಯೂಸ್‌ ಆಗಲ್ವಾʼʼ ಎಂದು ಕೂಗಾಡಿದ್ದಾರೆ. ಇದಕ್ಕೆ ಲೋಕೇಶ್‌ ʻʻನಾನು ಬರೆದು ತೋರಿಸುತ್ತೇನೆ. ಬೋರ್ಡ್‌ ನೋಡಿ ಬರೆಯಬೇಕಿತ್ತು. ಅದನ್ನು ಬಿಟ್ಟು ಇಲ್ಲಿ ನೋಡುವುದಲ್ಲ. ಬರೆದು ತೋರಿಸುತ್ತೇನೆʼʼ ಎಂದು ಫುಲ್‌ ಗರಂ ಆದರು. ಈ ಕುರಿತಂತೆ ಸ್ಪರ್ಧಿಗಳ ಮಧ್ಯೆ ಗಲಾಟೆ ಶುರುವಾಗಿದ್ದು, ಇದನ್ನು ನೋಡಿ ಪ್ರತಿಸ್ಪರ್ಧಿ ರೂಪೇಶ್‌ ಶೆಟ್ಟಿ ʻʻಜಗಳ ಆಡಿಕೊಂಡು ಸಾಯುತ್ತಿದ್ದಾರೆʼʼ ಎಂದು ಕಿಚಾಯಿಸಿದ್ದಾರೆ.

ಉಳಿದ ಸ್ಪರ್ಧಿಗಳು ಒಮ್ಮೆಲೇ ಕಿರುಚಾಡಿ ಮಾತನಾಡುತ್ತಿದ್ದಂತೆ ರಾಕೇಶ್‌ ಅಡಿಗ ʻʻನಾನು ಮಾತನಾಡುವಾಗ ಯಾರಾದರೂ ಮಾತನಾಡಿದರೆ ಸರಿಯಾಗಿ ಬೈತೇನೆ. ನನಗೆ ಮುಲಾಜೇ ಇಲ್ಲʼʼ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ನಡುವೆ ಬಿಗ್‌ ಬಾಸ್‌, ಈ ವಾರದ ಬೆಸ್ಟ್‌ ಪರ್‌ಫಾರ್ಮರ್‌ ರಾಕೇಶ್‌ ಅಡಿಗ ಎಂದು ಅನೌನ್ಸ್‌ ಮಾಡಿದ್ದಾರೆ. ವರ್ಸ್ಟ್ ಪರ್‌ಫಾರ್ಮರ್‌ ಆಗಿ ಅಕ್ಷತಾ ಹೊರ ಹೊಮ್ಮಿದ್ದಾರೆ. ಇದಕ್ಕೆ ಕಾರಣ ಏನು ಎಂಬುದು ಮುಂದಿನ ಸಂಚಿಕೆಯಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ | Bigg Boss Kannada | ನನ್ನ ರಕ್ತ ಕುದಿಯುತ್ತಿದೆ ಎಂದ ಆರ್ಯವರ್ಧನ್ ಗುರೂಜಿ!

Exit mobile version