Site icon Vistara News

Bigg Boss Kannada | ಹಾವು – ಏಣಿ ಆಟಕ್ಕೆ ಮಂಜು ಪಾವಗಡ ಸ್ಪೆಷಲ್ ಗೆಸ್ಟ್: ರಾಕೇಶ್‌ ಅಡಿಗ ಕಕ್ಕಾ ಬಿಕ್ಕಿ ಆಗಿದ್ದೇಕೆ?

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9 (Bigg Boss Kannada) ಆಟ ಕೊನೆಯ ಹಂತದಲ್ಲಿ ಇದೆ. ಇದೀಗ ಮನೆಗೆ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಮಂಜು ಪಾವಗಡ ಅತಿಥಿಯಾಗಿ ಪ್ರವೇಶ ಪಡೆದಿದ್ದಾರೆ. ಮನೆಯಲ್ಲಿ ನಗುತ್ತಲೇ, ನಗಿಸುತ್ತಲೇ ಹಾವು ಏಣಿ ಆಟ ಆಡಿಸಿದ್ದಾರೆ.

ಹಾವು -ಏಣಿ  ಟಾಸ್ಕ್ ವೇಳೆ ಮಂಜು ಪಾವಗಡ ಕೂಡ ಸ್ಪರ್ಧಿಗಳ ಜತೆಗೆ ಆಟವಾಡಿದ್ದಾರೆ. ಸ್ಪರ್ಧಿಗಳು ಹೇಳುವ ಸಂಖ್ಯೆಗೆ ದಾಳ ಕೂಡ ಹಾಕಿದ್ದಾರೆ. ಈ ವೇಳೆ ಮಂಜು ಅವರಿಗೆ ಅಮೂಲ್ಯ ಗೌಡ ‘ಐ ಲವ್​ ಯೂ’ ಎಂದು ಹೇಳಿದರು. ಇದನ್ನು ರಾಕೇಶ್‌ ಅಡಿಗ ನೋಡಿ ʻʻಅಯ್ಯೋ ನನಗೆ ಹಾವು ಕಚ್ಚಿದ ಹಾಗೇ ಆಗುತ್ತಿದೆʼʼ ಎಂದಿದ್ದಾರೆ. ರಾಕಿ ಮಾತಿಗೆ ಮನೆಮಂದಿ ನಕ್ಕಿದ್ದಾರೆ.

ಇದನ್ನೂ ಓದಿ | Bigg Boss Kannada | ʻಕಳಪೆʼ ವಿಚಾರಕ್ಕೆ ಅಮೂಲ್ಯಗೆ ಕಿಚ್ಚನ ಕ್ಲಾಸ್‌!

ಮೊದಲಿಂದಲೂ ರಾಕೇಶ್‌ ಅಡಿಗ ಹಾಗೂ ಅಮೂಲ್ಯ ಗೌಡ ಅತ್ಯಂತ ಆತ್ಮೀಯತೆ ಇಂದ ಇದ್ದ ಜೋಡಿ. ಇತ್ತೀಚಿನ ದಿನಗಳಲ್ಲಿ ರಾಕೇಶ್ ಅಡಿಗನ ಜತೆಯೇ ಅಮೂಲ್ಯ ಹೆಚ್ಚು ಸಮಯ ಕಳೆಯುತ್ತಾರೆ.ಈ ಹಿಂದೆ ಅಷ್ಟೇ ರಾಕೇಶ್‌ ಅಡಿಗ ಹಾಗೂ ಅಮೂಲ್ಯ ಅಮ್ಮ ಮಗನ ಕುರಿತಾಗಿ ಡ್ರಾಮ ಮಾಡಿದ್ದರು. ರಾಕೇಶ್ ಅಡಿಗ ತಮ್ಮ ಮನಸ್ಸಲ್ಲಿರುವ ಮಾತನ್ನು ಇನ್‍ಡೈರೆಕ್ಟ್ ಆಗಿ ಹೇಳಿದ್ದಾರೆ ಅಮೂಲ್ಯಗೆ ಮದುವೆ ಬೇಡಿಕೆ ಇಟ್ಟಿದ್ದಾರೆ. ಇದು ಜೋಕ್ ಆದರೂ ನಿಜ ಇರಬಹುದು ಎಂದು ಅಭಿಮಾನಿಗಳು ಕಮೆಂಟ್‌ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸದ್ಯ ಎಂಟು ಆಟಗಾರರು ಇದ್ದಾರೆ. ಅರುಣ್ ಸಾಗರ್, ಅಮೂಲ್ಯ ಗೌಡ, ಆರ್ಯವರ್ಧನ್​ ಗುರೂಜಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ಆಟ ಮುಂದುವರಿಸಿದ್ದಾರೆ. ಈ ವಾರ ಎಲ್ಲರೂ ನಾಮಿನೇಟ್ ಆಗಿದ್ದಾರೆ. 

ಇದನ್ನೂ ಓದಿ | Bigg Boss Kannada | ರೂಪೇಶ್‌ ರಾಜಣ್ಣಗೆ ತಪ್ಪು ಒಪ್ಪಿನ ಕ್ಲಾಸ್‌ ತೆಗೆದುಕೊಂಡ ಕಿಚ್ಚ!

Exit mobile version