Site icon Vistara News

Bigg Boss Kannada | ಬಿಗ್‌ ಬಾಸ್‌ ಮನೆಯಿಂದ ನಟಿ ಮಯೂರಿ ಔಟ್‌!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada ) ಈ ವಾರ ಮಯೂರಿ ಮನೆಯಿಂದ ಹೊರ ನಡೆದಿದ್ದಾರೆ. ಸುದೀಪ್ ಅವರು ವಿದೇಶ ಪ್ರವಾಸದಲ್ಲಿರುವ ಕಾರಣ ಬೇರೆ ರೀತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಯಿತು. ಬಿಗ್‌ ಬಾಸ್‌ ಏಳು ಹಂತದಲ್ಲಿ ಆಟ ಆಡಿಸಿದ್ದರು. ಕೊನೆಯ ಹಂತದಲ್ಲಿ ಬೈಕ್‌ ಮೂಲಕ ಮಯೂರಿಯನ್ನು ಕರೆದುಕೊಂಡು ಹೋಗಿದ್ದಾರೆ.

ಈ ವಾರ ಮಯೂರಿ, ಆರ್ಯವರ್ಧನ್ ಗುರೂಜಿ, ಪ್ರಶಾಂತ್ ಸಂಬರಗಿ, ಕಾವ್ಯಶ್ರೀ ಗೌಡ, ನೇಹಾ ಗೌಡ, ಸಾನ್ಯ ಐಯ್ಯರ್, ರೂಪೇಶ್ ಶೆಟ್ಟಿ ಹಾಗೂ ದಿವ್ಯಾ ಉರುಡುಗ ನಾಮಿನೇಷನ್​ ಆಗಿದ್ದರು. ಈ ಪೈಕಿ ದಿವ್ಯಾ ಉರುಡುಗ ಅವರು ಮೊದಲು ಸೇವ್ ಆದರು. ನಂತರ, ರೂಪೇಶ್ ಶೆಟ್ಟಿ, ಪ್ರಶಾಂತ್, ಆರ್ಯವರ್ಧನ್, ಸಾನ್ಯಾ, ಕಾವ್ಯಾ ಸೇವ್ ಆದರು. ಕೊನೆಯ ರೌಂಡ್​ನಲ್ಲಿ ಮಯೂರಿ ಹಾಗೂ ನೇಹಾ ಇದ್ದರು. ಆ ಪೈಕಿ ಮಯೂರಿ ಔಟ್ ಆದರು.

ಇದನ್ನೂ ಓದಿ | Bigg Boss Kannada | ಭಾನುವಾರವೂBigg Boss Kannada ಕಿಚ್ಚ ಸುದೀಪ್‌ ಗೈರು: ಈ ವಾರ ನೋ ಎಲಿಮಿನೇಷನ್‌?

ಕಿಚ್ಚ ಸುದೀಪ್ ಅವರು ಪತ್ನಿ ಪ್ರಿಯಾ ಜತೆ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಅಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಅಕ್ಟೋಬರ್ 23 ಭಾರತ ಹಾಗೂ ಪಾಕಿಸ್ತಾನ ನಡುವಣ ಮ್ಯಾಚ್ ವೀಕ್ಷಿಸಿದ್ದಾರೆ ದಂಪತಿ. ಇಂದಿನ ಎಪಿಸೋಡ್ ಆರಂಭಕ್ಕೂ ಮೊದಲು ಸುದೀಪ್ ಬರುವುದಿಲ್ಲ ಎಂಬ ವಿಚಾರವನ್ನು ಘೋಷಿಸಲಾಯಿತು. ‘ಸುದೀಪ್ ಅವರು ವಿದೇಶ ಪ್ರಯಾಣದಲ್ಲಿ ಇದ್ದಾರೆ. ಹೀಗಾಗಿ, ಅವರು ಇಂದಿನ ಕಾರ್ಯಕ್ರಮ ನಡೆಯುವುದಿಲ್ಲ. ಆದರೆ, ಎಲಿಮಿನೇಷನ್ ಪ್ರಕ್ರಿಯೆ ಇರುತ್ತದೆ’ ಎಂದು ಘೋಷಿಸಲಾಯಿತು.

ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ಮಯೂರಿ ಎರಡನೇ ಸ್ಪರ್ಧಿಯಾಗಿ ಮನೆಗೆ ಎಂಟ್ರಿ ಕೊಟ್ಟಿದ್ದರು. ಈ ಬಾರಿ ಮುಯೂರಿ ಬಿಗ್‌ ಬಾಸ್‌ ಮನೆಗೆ ಹೊಸ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದರು. ಕೃಷ್ಣಲೀಲಾ, ಪೊಗರು ಚಿತ್ರದವರೆಗೂ ನಟಿ ಮಯೂರಿ ತಮ್ಮ ನಟನೆಯ ಮೂಲಕ ಮೋಡಿ ಮಾಡುತ್ತಲೇ ಬಂದಿದ್ದರು. 

ಇದನ್ನೂ ಓದಿ | Bigg Boss Kannada | ದೇವರು ನಿನ್ನನ್ನು ಮೆಚ್ಚೋದಿಲ್ಲಾ: ಸಾನ್ಯ ವಿರುದ್ಧ ಪ್ರಶಾಂತ್‌ ಸಂಬರಗಿ ಹಿಡಿ ಶಾಪ!

Exit mobile version