Site icon Vistara News

Bigg Boss Kannada | ಬಿಗ್‌ ಬಾಸ್‌ ಮನೆಯ ಅವಸ್ಮರಣೀಯ ಘಟನೆಗಳ ಝಲಕ್ ಇಲ್ಲಿವೆ!

Bigg Boss Kannada

ಬೆಂಗಳೂರು: ಬಿಗ್ ಬಾಸ್ ಒಟಿಟಿ (Bigg Boss Kannada ) ಇನ್ನೇನು ಫೈನಲ್ ಹಂತಕ್ಕೆ ಸಮೀಪಿಸುತ್ತಿದೆ. ಮನೆಯೊಳಗಿರುವ ಸ್ಪರ್ಧಿಗಳು ಕೆಲವೊಂದು ಅವಿಸ್ಮರಣೀಯ ಕ್ಷಣಗಳನ್ನು ಅನುಭವಿಸಿದ್ದಾರೆ. ಮನೆಯಲ್ಲಿ ಆಚರಿಸಲಾಗಿರುವ ಕೆಲವು ಸುಂದರ ಕ್ಷಣಗಳ ಝಲಕ್ ಇಲ್ಲಿದೆ

ಜಶ್ವಂತ್ ಜನುಮದಿನ!

ಬಿಗ್ ಬಾಸ್ ಒಟಿಟಿ ಕನ್ನಡ ಜರ್ನಿಯು ಜಶ್ವಂತ್ ಅವರ ಹುಟ್ಟುಹಬ್ಬದೊಂದಿಗೆ ಆರಂಭವಾಯಿತು. ಇದು ಮನೆಯ ಅತಿ ದೊಡ್ಡ ಕಾರ್ಯಕ್ರಮವಾಗಿದ್ದು, ಈ ಸೀಸನ್ ಅತ್ಯಂತ ವಿಜೃಂಭಣೆಯಿಂದ ಆರಂಭವಾಯಿತು.

ಸ್ವಾತಂತ್ರ್ಯ ದಿನಚಾಚರಣೆ 2022
ಬಿಗ್‌ ಬಾಸ್‌ ಸ್ಪರ್ಧಿಗಳು ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ದೇಶಕ್ಕೆ ಗೌರವ ಸಲ್ಲಿಸಿದ್ದರು. ಇದು ಸ್ಪರ್ಧಿಗಳು ಎಂದಿಗೂ ಮರೆಯಲಾಗದಂತಹ ಮತ್ತೊಂದು ನೆನಪುಳಿಯುವ ಕ್ಷಣವಾಗಿತ್ತು.

ಮನೆಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ!
ಎಲ್ಲರೂ ಅತ್ಯಂತ ಕಾತುರದಿಂದ ಕಾಯುವ ಹಬ್ಬವೆಂದರೆ ಗೌರಿ-ಗಣೇಶ ಹಬ್ಬ. ಎಲ್ಲರೂ ಸೇರಿ ಸಡಗರ-ಸಂಭ್ರಮದಿಂದ ಆಚರಿಸುವ ಹಬ್ಬ ಇದಾಗಿದೆ. ಈ ಹಬ್ಬದ ದಿನದಂದು ಬಿಗ್‌ ಬಾಸ್‌ ಮನೆಯಲ್ಲಿ ಸಂಭ್ರಮ ಮನೆಮಾಡಿತ್ತು. ಎಲ್ಲರೂ ಸಾಂಪ್ರದಾಯಿಕವಾಗಿ ಹೊಸ ಬಟ್ಟೆ ತೊಟ್ಟು ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಭಕ್ತಿ ಭಾವದಿಂದ ನಮಿಸಿದರು. ಪ್ರತಿದಿನ ಸ್ಪರ್ಧೆಯ ಹೆಸರಿನಲ್ಲಿ ಪರಸ್ಪರ ಹೋರಾಟ, ಕಿತ್ತಾಟಗಳಲ್ಲಿ ಮುಳುಗಿಹೋಗಿದ್ದ ಸ್ಪರ್ಧಿಗಳಿಗೆ ಹಬ್ಬದ ಸಂದರ್ಭದಲ್ಲಿ ಬಿಡುವು ದೊರೆತು ಎಲ್ಲರೂ ಒಟ್ಟಾಗಿ ಸೇರಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ | Bigg Boss Kannada | ಡವ್‌ ರಾಜ ಅಂದಿದಕ್ಕೆ ಕ್ಲಾಸ್‌: ಸೋನು-ಗುರೂಜಿ ವಾಗ್ವಾದಕ್ಕೆ ಸಾನ್ಯ ಎಂಟ್ರಿ!

ಬಿಗ್ ಬಾಸ್ ಸ್ಪರ್ಧಿಗಳಿಗೆ ಆಶ್ಚರ್ಯ ತಂದ ತಮ್ಮ ಕುಟುಂಬ ಸದಸ್ಯರ ವಿಡಿಯೊ ಮೆಸೇಜ್‌ಗಳು!

ಯಾವಾಗಲೂ ಬಿಗ್ ಬಾಸ್‌ನಲ್ಲಿ ಸಪ್ರೈಸ್‌ಗಳು ಸಿಗುತ್ತಲೇ ಇರುತ್ತವೆ. ಹಬ್ಬದ ಹಿನ್ನೆಲೆಯಲ್ಲಿ ಸ್ಪರ್ಧಿಗಳಿಗೆ ಅವರ ಕುಟುಂಬ ಸದಸ್ಯರು ಶುಭ ಕೋರುವ ವಿಶೇಷ ವಿಡಿಯೊ ಮೆಸೇಜ್‌ಗಳನ್ನು ಸಿದ್ಧಪಡಿಸಿ ಮನೆಯಲ್ಲಿ ತೋರಿಸಿದ್ದು ವಿಶೇಷವಾಗಿತ್ತು. ಈ ಮೂಲಕ ಸ್ಪರ್ಧಿಗಳು ತಮ್ಮ ನೆಚ್ಚಿನ ಕುಟುಂಬ ಸದಸ್ಯರನ್ನು ನೋಡುವ ಅವಕಾಶವನ್ನು ಪಡೆದರು.

ರೂಪೇಶ್ ಶೆಟ್ಟಿಯಿಂದ ಕಿಚ್ಚ ಸುದೀಪ್‌ಗೆ ಹಾಡು ಅರ್ಪಣೆ
ಬಿಗ್ ಬಾಸ್ ಕಾರ್ಯಕ್ರಮದ ಹೋಸ್ಟ್ ಮತ್ತು ಮೆಂಟರ್ ಆಗಿರುವ ಕಿಚ್ಚ ಸುದೀಪ್ ಎಲ್ಲ ಸ್ಪರ್ಧಿಗಳಿಗೆ ಅಚ್ಚುಮೆಚ್ಚು. ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಶುಭಾಶಯಗಳನ್ನು ಕೋರಿದರು. ಅವರಿಗಾಗಿಯೇ ಹಾಡುಗಳನ್ನು ರಚಿಸಿ ಅರ್ಪಣೆ ಮಾಡುವುದು, ವಿಶೇಷ ಮೆಸೇಜ್‌ಗಳನ್ನು ಕಳುಹಿಸುವುದು ಸೇರಿದಂತೆ ಇನ್ನಿತರೆ ವಿಧಾನಗಳಲ್ಲಿ ತಮ್ಮ ನೆಚ್ಚಿನ ನಟನಿಗೆ ಶುಭಾಶಯಗಳನ್ನು ಕೋರಲಾಗುತ್ತದೆ. ಈ ಸಂದರ್ಭವನ್ನು ವಿಶೇಷವಾಗಿಸುವ ನಿಟ್ಟಿನಲ್ಲಿ ರೂಪೇಶ್ ಶೆಟ್ಟಿ ಕಿಚ್ಚ ಸುದೀಪ್‌ಗೆ ಒಂದು ವಿಶೇಷವಾದ ರ‍್ಯಾಪ್ ಹಾಡನ್ನು ಬರೆದು ಹಾಡಿ ಅರ್ಪಣೆ ಮಾಡಿದರು.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಯಲ್ಲಿ ಸ್ಥಾನಮಾನದ ಪೈಪೋಟಿ: ಗುರೂಜಿ ಸ್ಥಾನಕ್ಕೆ ಕಾಂಪಿಟೇಷನ್ ಇಲ್ಲ ಯಾಕೆ?

Exit mobile version