Site icon Vistara News

Bigg Boss Kannada | ನಂದಿನಿ ಗೂಡು ಬಿಟ್ಟು ಹೋದ್ರು, ಜಶ್ವಂತ್‌ ಒಂಟಿಯಾದ್ರು: ಇನ್ಮುಂದೆ ಸ್ಪರ್ಧೆ ಮತ್ತಷ್ಟು ಕಠಿಣ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ (Bigg Boss Kannada) ಒಟಿಟಿ ಐದನೇ ವಾರ ಮುಕ್ತಾಯಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಇನ್ನೊಂದು ವಾರದಲ್ಲಿ ಬಿಗ್‌ ಬಾಸ್‌ ಸೀಸನ್‌ 9 ಆರಂಭ ಆಗಲಿದೆ ಎನ್ನಲಾಗುತ್ತಿದೆ. ಐದನೇ ವಾರ ಎಲಿಮಿನೇಷನ್‌ನಲ್ಲಿ ನಂದಿನಿ ಔಟ್‌ ಆಗಿದ್ದಾರೆ.

ಫಿನಾಲೆ ವಾರಕ್ಕೆ ರಾಕೇಶ್‌ ಅಡಿಗ, ಸಾನ್ಯ ಹಾಗೂ ರೂಪೇಶ್‌ ಶೆಟ್ಟಿ ಮೊದಲೇ ಹೋಗಿದ್ದರು. ಉಳಿದಂತೆ ಆರ್ಯವರ್ಧನ್‌ ಗುರೂಜಿ, ಜಶ್ವಂತ್‌ ಬೋಪಣ್ಣ, ಸೋನು ಶ್ರೀನಿವಾಸ್‌ ಗೌಡ, ಜಯಶ್ರೀ ಆರಾಧ್ಯ, ಸೋಮಣ್ಣ ಮಾಚಿಮಾಡ, ಹಾಗೂ ನಂದಿನಿ ನಾಮಿನೇಟ್‌ ಆಗಿದ್ದರು. ಕಡಿಮೆ ವೋಟ್‌ ಪಡೆದು ನಂದಿನಿ ಔಟ್‌ ಆಗಿದ್ದಾರೆ.

ಜಶ್ವಂತ್‌ ಬಗ್ಗೆ ನಂದಿನಿಗೆ ಸಾಕಷ್ಟು ಪೊಸೆಸಿವ್‌!
ಜಶ್ವಂತ್‌ ಮತ್ತು ನಂದಿನಿ ನಿಜಜೀವನದಲ್ಲಿ ಲವರ್ಸ್‌ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಸಾನ್ಯ ಜತೆ ಜಶ್ವಂತ್‌ ಕ್ಲೋಸ್‌ ಇದ್ದ ಬಗ್ಗೆ ನಂದಿನಿ ಯಾವಾಗಲೂ ಮುನಿಸನ್ನು ತೋರಿಸುಕೊಳ್ಳುತ್ತಿದ್ದರು. ಈ ಹಿಂದೆ ಕೂಡ ಸಾನ್ಯ ವಿಚಾರವಾಗಿ ಜಶ್ವಂತ್‌ ಮತ್ತು ನಂದಿನಿ ಒಬ್ಬರಿಗೊಬ್ಬರು ಕಿತ್ತಾಡಿಕೊಂಡು, ಮುನಿಸಿಕೊಂಡಿದ್ದರು.

ಇದನ್ನೂ ಓದಿ | Bigg Boss Kannada | ಮುಗಿಯಿತು 5 ವಾರ; ಎಲಿನಿಮಿನೇಷನ್ನಿಂದ ಯಾರು ಪಾರು, ಯಾರು ಗಡಿಪಾರು?

ಈ ಹಿಂದೆ ನಂದಿನಿ ಬಳಿ ಮಾತನಾಡಿದ್ದ ಜಶ್ವಂತ್‌, ʻʻನಿನ್ನನ್ನು ಡೈವರ್ಟ್‌ ಮಾಡಬೇಕೆಂದು ಉಳಿದವರು ಈ ರೀತಿ ಸೀನ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ಆಟದ ಕಡೆ ಗಮನ ಕೊಡುʼʼ ಎಂದು ಕಿವಿಮಾತು ಕೂಡ ಹೇಳಿದ್ದರು. ನಂದಿನಿ ಪೊಸೆಸಿವ್‌ ಜಶ್ವಂತ್‌ ಆಟದ ಮೇಲೆ ಪ್ರಭಾವ ಬಿರುತ್ತಲೇ ಇತ್ತು. ʻನಾನು ಈ ವಾರ ಮನೆಯಿಂದ ಹೊರಗೆ ಹೋಗುತ್ತೇನೆʼ ಎಂದು ನಂದಿನಿ ಯಾವಾಗಲೂ ಜಶ್ವಂತ್‌ ಜತೆ ಹೇಳಿಕೊಳ್ಳುತ್ತಿರುತ್ತಿದ್ದರು. ಆದರೆ, ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ನಂದಿನಿಗೆ ವೀಕ್ಷಕರಿಂದ ಬೆಂಬಲ ಸಿಗಲಿಲ್ಲ. ಕೊನೆಗೂ ಮನೆಯಿಂದ ಹೊರ ನಡೆದಿದ್ದಾರೆ.

ಬಿಗ್‌ ಬಾಸ್‌ ಸೀಸನ್‌ ೯
‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮ ಅತಿ ಶೀಘ್ರದಲ್ಲೇ ಆರಂಭವಾಗಲಿದೆ. ‘ಬಿಗ್ ಬಾಸ್ ಕನ್ನಡ ಒಟಿಟಿ 1’ ಕಾರ್ಯಕ್ರಮದಿಂದ ಟಿವಿ ಸೀಸನ್‌ಗೆ ಯಾವ ನಾಲ್ಕು ಸ್ಪರ್ಧಿಗಳು ಕಾಲಿಡಲಿದ್ದಾರೆ ಎಂಬುದು ಮುಂದಿನ ವಾರದಲ್ಲಿ ಬಹಿರಂಗವಾಗಲಿದೆ.

ಇದನ್ನೂ ಓದಿ | Bigg Boss Kannada | ಜಶ್ವಂತ್‌ಗೆ ಸಖತ್‌ ಕ್ಲಾಸ್‌ ತಗೊಂಡ್ರು ಜಯಶ್ರೀ: ಐದನೇ ವಾರದ ಬಾಸ್‌ ಇವರೆ!

Exit mobile version