ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ (Bigg Boss Kannada ) ಹೊಡಿತೀನಿ , ಬಡಿತೀನಿ ಎಂದ ನವಾಜ್ ಈಗ ಶಾಂತ ಸ್ಥಿತಿಯತ್ತ ಮುಖ ಮಾಡಿದ್ದಾರೆ. ಐದನೇ ದಿನ ಸ್ಪರ್ಧಿಗಳ ಮುಂದೆ ನವಾಜ್ ಅವರು ಐಶ್ವರ್ಯ ಪಿಸಿಗೆ ಪ್ರಪೋಸ್ ಮಾಡಿದ್ದಾರೆ. ಅರುಣ್ ಸಾಗರ್ ನಿತ್ಯವೂ ನವಾಜ್‌ಗೆ ಮೆಡಿಟೇಶನ್ ಮಾಡಿಸುತ್ತಿದ್ದಾರೆ ಎಂದು ವಿನೋದ್ ಗೊಬ್ಬರಗಾಲ ಸ್ಪರ್ಧಿಗಳ ಮುಂದೆ ಹೇಳಿದ್ದಾರೆ.
ಕೋಪಿಷ್ಠ ಎಂದು ಕರೆಸಿಕೊಳ್ಳುವ ನವಾಜ್‌ಗೆ ಈಗ ಪ್ರೇಮವಾಗಿದೆ. ಸ್ಪರ್ಧಿಗಳ ಮುಂದೆ ತಮಾಷೆಯಾಗಿ ಐಶ್ವರ್ಯ ಪಿಸಿಗೆ ಪ್ರಪೋಸ್ ಮಾಡಿದ್ದಾನೆ. ಐಶ್ವರ್ಯಗೆ ಉಳಿದ ಸ್ಪರ್ಧಿಗಳು ಮೇಕಪ್ ಅಪ್ ಮಾಡಿದ್ದರು. ಐಶ್ವರ್ಯ ಪಿಸೆ ʻʻಹೇಗೆ ಕಾಣಿಸುತ್ತೇನೆʼʼ? ಎಂದು ಉಳಿದ ಸ್ಪರ್ಧಿಗಳ ಮುಂದೆ ಕೇಳಿದ್ದಾರೆ. ಅದಕ್ಕೆ ಉತ್ತರ ನೀಡಿದ ನವಾಜ್ ʻʻನೀವು ಇಂದು ಸುಂದರವಾಗಿ ಕಾಣಿಸುತ್ತಿದ್ದೀರಾ. ನಿಮ್ಮನ್ನು ಮೊದಲ ದಿನದಿಂದ ನೋಡಿದ್ದಾಗಿನಿಂದಲೂ ಫೀದಾ ಆಗಿದ್ದೇನೆ. ನಿಮ್ಮ ಮನಸ್ಸು ದೊಡ್ಡದು. ಚಿಕ್ಕದಾಗಿ ಪ್ರೀತಿ ಮಾಡೋಣ. ಪ್ರೀತಿಗೆ ಕಣ್ಣಿಲ್ಲ, ವಯಸ್ಸು ಅಷ್ಟಾಗಿ ಮ್ಯಾಟರ್ ಆಗಲ್ಲʼʼ ಎಂದು ಹೇಳಿದ್ದಾನೆ. ಇದಕ್ಕೆ ಪ್ರತಿಯಾಗಿ ಐಶ್ವರ್ಯಾ ನವಾಜ್‌ನನ್ನು ಹಗ್ ಮಾಡಿ ʻʻʻನಿಮಗೆ ಒಳ್ಳೆಯ ಹುಡುಗಿ ಸಿಗುತ್ತಾಳೆ. ಇದೇ ತರ ಪ್ರಪೋಸ್ ಮಾಡಿದರೆ ಖಂಡಿತಾ ಬೀಳುತ್ತಾಳೆʼʼ ಎಂದರು.
ಇದನ್ನೂ ಓದಿ | Bigg Boss Kannada | ಬಿಗ್ ಬಾಸ್ ಸೀಸನ್-9ರ ಮೊದಲ ವಾರದ ನಾಮಿನೇಟ್ ಆದ ಸ್ಪರ್ಧಿಗಳು ಇವರೇ!
ನವಾಜ್ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಒಂದಲ್ಲಾ ಒಂದು ಕಿರಿಕ್ ಮಾಡುತ್ತಲೇ ಇರುತ್ತಾರೆ. ಅದರಲ್ಲಿ ಎಲ್ಲರೂ ಬಿಗ್ ಬಾಸ್ ಗೆಲ್ಲಬೇಕು ಅಂತ ಹೇಳುತ್ತ ಇಲ್ಲಿಗೆ ಬರುತ್ತಾರೆ, ನಾನು ಬಿಗ್ ಬಾಸ್‌ನ ಗೆಲ್ಲಿಸೋಕೆ ಬಂದಿದ್ದೇನೆ. ಜನರು ನಾನು ಹೇಳಿದ್ದನ್ನು ಅರ್ಥಮಾಡಿಕೊಳ್ಳಲ್ಲ, ಅದಕ್ಕೆ ಸೈಕ್ ಅಂತ ಕರೆಯುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ನನ್ನ ಸೈಕ್ ಗುಣ ನೋಡಬಹುದು. ಸಖತ್ ಎಂಟರ್‌ಟೈನ್ಮೆಂಟ್ ಕೊಡುವೆ” ಎಂದು ಹೇಳಿಕೊಂಡಿದ್ದರು. 19 ವರ್ಷದ ನವಾಜ್ ಈಗ ನಾರ್ಮಲ್ ಆಗಿದ್ದಾರೆ. ಅರುಣ್ ಸಾಗರ್ ನಿತ್ಯವೂ ನವಾಜ್‌ಗೆ ಮೆಡಿಟೇಶನ್ ಮಾಡಿಸುತ್ತಿದ್ದಾರೆ ಎಂದು ವಿನೋದ್ ಗೊಬ್ಬರಗಾಲ ಸ್ಪರ್ಧಿಗಳ ಮುಂದೆ ಹೇಳಿದರು. ಇದೀಗ ನವಾಜ್ ಬದಲಾಗುತ್ತಿದ್ದಾನಂತೆ ಎನ್ನುತ್ತಿದ್ದಾರೆ ಬಿಗ್ ಬಾಸ್ ಸ್ಪರ್ಧಿಗಳು.
ಇದನ್ನೂ ಓದಿ | Bigg Boss Kannada |ಮನೆ ಒಂದೇ, ಮನೆಯಲ್ಲಿರುವವರ ಭಾವನೆಗಳು ಹಲವು: ಹೇಗಿದೆ ಬಿಗ್ ಬಾಸ್ ಸೀಸನ್ 9ರ ಮನೆ?